More

    ಸ್ವಯಂ ಪ್ರೇರಿತವಾಗಿ ಅತಿಕ್ರಮಣ ತೆರವು

    ರಬಕವಿ/ಬನಹಟ್ಟಿ: ರಬಕವಿ ಹಳೇ ಬಸ್ ನಿಲ್ದಾಣದ ಈಶ್ವರ ಸಣಕಲ್ಲ ರಸ್ತೆಯಿಂದ ಶ್ರೀನಿವಾಸ ಚಿತ್ರಮಂದಿರದವರೆಗೆ ರಸ್ತೆ ವಿಸ್ತರಣೆಗೆ ಸಾರ್ವಜನಿಕರು ಸ್ಪಂದಿಸಿದ್ದು, ಸ್ವಯಂ ಪ್ರೇರಿತವಾಗಿ ಅತಿಕ್ರಮಣ ತೆರವು ಕಾರ್ಯಕ್ಕೆ ಭಾನುವಾರ ಚಾಲನೆ ನೀಡಿದ್ದಾರೆ.

    ಕಿರಿದಾದ ರಸ್ತೆಯ ವಿಸ್ತರಣೆ ಕಾರ್ಯಕ್ಕೆ ವ್ಯಾಪಾರಸ್ಥರು ಬೆಂಬಲ ನೀಡಿದ್ದು, ರಸ್ತೆ ಪಕ್ಕದಲ್ಲಿನ ನಗರಸಭೆ ಚರಂಡಿ ಮೇಲೆ ಅಂಗಡಿಗಳ ಮುಂದೆ ನಿರ್ಮಿಸಿರುವ ಕಟ್ಟೆಗಳನ್ನು ಸಂಪೂರ್ಣ ಒಡೆದು ತೆಗೆಯುತ್ತಿದ್ದಾರೆ.

    ರಸ್ತೆ ಬದಿಯ ಅಕ್ಕ ಪಕ್ಕದ ವ್ಯಾಪಾರಸ್ಥರು ಪ್ರಮುಖ ರಸ್ತೆ ಮೇಲೆಯೇ ಕಟ್ಟೆ ಹಾಗೂ ಪತ್ರಾಸ್ ಮೇಲ್ಛಾವಣಿ ನಿರ್ಮಿಸಿದ್ದರಿಂದ ರಸ್ತೆ ತೀರಿ ಕಿರಿದಾಗಿತ್ತು. ಇದರಿಂದ ಸಂಚಾರಕ್ಕೆ ತೀವ್ರ ತೊಂದರೆ ಕೂಡ ಆಗಿತ್ತು. ಇದರಿಂದ ವ್ಯಾಪಾರ ವಹಿವಾಟಿಗೆ ವಾಹನ ಸವಾರರಿಗೆ ಎಲ್ಲಿಲ್ಲದ ತೊಂದರೆಯಾಗಿತ್ತು. ಇದನ್ನರಿತ ಸಾರ್ವಜನಿಕರು ಶಾಸಕ ಸಿದ್ದು ಸವದಿ ಅವರಿಗೆ ಕಳೆದ ಶುಕ್ರವಾರ ರಸ್ತೆ ವಿಸ್ತರಣೆ ಮಾಡುವಂತೆ ಮನವಿ ಸಲ್ಲಿಸಿದ್ದರು. ಮನವಿ ಮೇರೆಗೆ ವ್ಯಾಪಾರಸ್ಥರ ಸಭೆ ಕರೆದ ಶಾಸಕರು ನಗರಸಭೆ ಚರಂಡಿ ಮೇಲೆ ನಿರ್ಮಿಸಿದ ಕಟ್ಟೆ ಹಾಗೂ ಕಟ್ಟಡಗಳನ್ನು ಸ್ವಯಂ ಪ್ರೇರಿತವಾಗಿ ತೆರವುಗೊಳಿಸಬೇಕು ಎಂದು ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ವ್ಯಾಪಾರಸ್ಥರು ಅಂಗಡಿ ಮುಂಭಾಗದ ಚರಂಡಿ ಮೇಲಿರುವ ಕಟ್ಟೆಗಳನ್ನು ಭಾನುವಾರದಿಂದ ತೆರವುಗೊಳಿಸಲು ಪ್ರಾರಂಭಿಸಿದ್ದಾರೆ.

    ರಸ್ತೆ ಪಕ್ಕದಲ್ಲಿನ ಚರಂಡಿಗಳ ಮೇಲೆ ವ್ಯಾಪಾರಸ್ಥರು ನಿರ್ಮಿಸಿದ ಕಟ್ಟೆ ಹಾಗೂ ಕಟ್ಟಡಗಳನ್ನು ಸ್ವಯಂ ಪ್ರೇರಿತ ತೆರವು ಮಾಡುತ್ತಿದ್ದು, ಕಠಿಣ ಸ್ಥಳಗಳಿದ್ದರೆ ನಗರಸಭೆ ಜೆಸಿಬಿಯಿಂದ ತೆರವುಗೊಳಿಸಲಾಗುವುದು. ತೆರವಾದ ಬಳಿಕ ಚರಂಡಿ ಮೇಲ್ಭಾಗದಲ್ಲಿ ಸಾರ್ವಜನಿಕರ ಓಡಾಟಕ್ಕೆ ಫುಟ್‌ಪಾತ್ ನಿರ್ಮಿಸಲಾಗುವುದು. ಇದರಿಂದ ಸಾರ್ವಜನಿಕ ಸಂಚಾರಕ್ಕೆ ಅನುಕೂಲವಾಗಲಿದೆ.
    ಶ್ರೀನಿವಾಸ ಜಾಧವ, ಪೌರಾಯುಕ್ತ ನಗರಸಭೆ ರಬಕವಿ ಬನಹಟ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts