More

    ಬಲವಂತವಾಗಿ ದನದ ಮಾಂಸ ತಿನ್ನಿಸಿದ ಪ್ರೇಯಸಿ: ಮನನೊಂದು ಸಾವಿನ ಹಾದಿ ಹಿಡಿದ ಹಿಂದು ಯುವಕ

    ಸೂರತ್​: ತನ್ನ ಲಿವ್​ ಇನ್​ ಪಾರ್ಟ್ನರ್ ಬಲವಂತವಾಗಿ ದನದ ಮಾಂಸ ತಿನ್ನಿಸಿದ್ದಕ್ಕೆ ಮನನೊಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತ್​ನ ಸೂರತ್​ನಲ್ಲಿ ನಡೆದಿದೆ. ಜೂನ್​ 27ರಂದು ಘಟನೆ ನಡೆದಿದ್ದು, ಇದೀಗ ಪೊಲೀಸ್​ ತನಿಖೆಯಲ್ಲಿ ಆತ್ಮಹತ್ಯೆಯ ಅಸಲಿಯತ್ತು ಬಯಲಾಗಿದೆ. ​

    ರಾಹುಲ್​ ಸಿಂಗ್​ ಆತ್ಮಹತ್ಯೆ ಮಾಡಿಕೊಂಡ ಯುವಕ. ಸೂರತ್​ನ ಉಧನಾದ ಪಟೇಲ್​ ನಗರದ ಮನೆಯಲ್ಲಿ ಜೂನ್​ 27ರಂದು ದುಪ್ಪಟ್ಟದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದರ ಬೆನ್ನಲ್ಲೇ ರಾಹುಲ್​ ತಾಯಿ, ಲಿವ್​ ಇನ್​ ಟುಗೆದರ್​ನಲ್ಲಿದ್ದ ಯುವತಿ ಮತ್ತು ಆಕೆಯ ಸಹೋದರನ ವಿರುದ್ಧ ದೂರು ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಸೋನಮ್​ ಅಲಿ ಮತ್ತು ಆಕೆಯ ಸಹೋದರ ಮುಖ್ತರ್​ ಅಲಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

    ಅಂದಹಾಗೆ ರಾಹುಲ್​ ಸಿಂಗ್​ ತನ್ನ ಫೇಸ್​ಬುಕ್​ ಖಾತೆಯಲ್ಲಿ ಬರೆದಿಟ್ಟಿದ್ದ ಡೆತ್​ನೋಟ್​ ಇಡೀ ಪ್ರಕರಣಕ್ಕೆ ಮಹತ್ವದ ತಿರುವು ನೀಡಿತು. ಇಬ್ಬರು ಅನ್ಯಧರ್ಮದರಾಗಿದ್ದರಿಂದ ಪಾಲಕರ ವಿರೋಧದ ನಡುವೆಯು ರಾಹುಲ್​ ಮತ್ತು ಸೋನಮ್​ ಕಳೆದ ಒಂದು ವರ್ಷದಿಂದ ಪಟೇಲ್​ ನಗರದಲ್ಲಿ ಲಿವಿಂಗ್​ ಟುಗೆದರ್​ನಲ್ಲಿದ್ದರು. ರಾಹುಲ್​ ಕುಟುಂಬ ಉತ್ತರ ಪ್ರದೇಶದ ಪ್ರತಾಪಗಢ ಮೂಲದವರು. ಬೇಡ ಎಂದು ಹೇಳಿದರು ಸೋನಮ್​ ಜೊತೆ ಹೋಗಿದ್ದಕ್ಕೆ ರಾಹುಲ್​ಗೆ ಕುಟುಂಬದ ಸಂಪರ್ಕ ಇರಲಿಲ್ಲ. ಇಬ್ಬರು ಮದುವೆ ಆಗಿರುವ ಬಗ್ಗೆಯು ಅವರಿಗೆ ತಿಳಿದಿಲ್ಲ.

    ರಾಹುಲ್​ ಕುಟುಂಬಕ್ಕೆ ಫೇಸ್​ಬುಕ್ ಖಾತೆಯ ಮೂಲಕ ರಾಹುಲ್​ ಸಾವಿನ ಬಗ್ಗೆ ತಿಳಿಯಿತು. ಅಲ್ಲದೆ, ಡೆತ್​ನೋಟ್​ ಕೂಡ ದೊರೆಯಿತು. ಇದರ ಬೆನ್ನಲ್ಲೇ ಉಧಾನ ಪೊಲೀಸ್​ ಠಾಣೆಗೆ ತೆರಳಿದ ರಾಹುಲ್ ಕುಟುಂಬ ದೂರು ದಾಖಲಿಸಿದರು. ದನದ ಮಾಂಸ ತಿನ್ನದೇ ಹೋದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದರು ಎಂದು ಫೇಸ್​ಬುಕ್ ಖಾತೆಯಲ್ಲಿ ಬರೆಯಲಾಗಿತ್ತು. ಕಿರುಕುಳವನ್ನು ಸಹಿಸಲಾರದೇ ಆತ್ಮಹತ್ಯೆ ಮಾಡಿಕೊಡಿಕೊಳ್ಳುತ್ತಿದ್ದೇನೆ ಎಂದು ರಾಹುಲ್​ ಬರೆದಿದ್ದ ಎಂದು ಹೇಳಲಾಗಿದೆ.

    ಅಂದಹಾಗೆ ರಾಹುಲ್​ ಮತ್ತು ಸೋನಮ್​ ಜವಳಿ ಡೈಯಿಂಗ್ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಪರಿಚಯವಾಗಿ, ಪರಿಚಯ ಪ್ರೇಮಕ್ಕೆ ತಿರುಗಿ, ಮನೆಯವರು ಮದುವೆಗೆ ಒಪ್ಪದಿದ್ದಕ್ಕೆ ಇಬ್ಬರು ಲಿವಿಂಗ್​ ಟುಗೆದರ್​ನಲ್ಲಿದ್ದರು. (ಏಜೆನ್ಸೀಸ್​)

    ಗಣೇಶ ಹಬ್ಬ ಹಿನ್ನೆಲೆ ಆ.31 ರಂದು ಪಾಲಿಕೆ ವ್ಯಾಪ್ತಿಯಲ್ಲಿ ಮಾಂಸ ಮಾರಾಟ, ಪ್ರಾಣಿ ವಧೆ ನಿಷೇಧಿಸಿ BBMP ಆದೇಶ

    ಪೊಲೀಸ್​ ಅಧಿಕಾರಿ ಆಗಬೇಕೆಂಬ ಕನಸು ಕಂಡಿದ್ದ ಯುವತಿ ದುರಂತ ಅಂತ್ಯ: ಮನಕಲಕುತ್ತೆ ಈಕೆಯ ಕತೆ

    ಪ್ರವಾಹ ನಿರಂತರ ಹಾನಿ ಅಪಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts