More

    ಪೊಲೀಸ್​ ಅಧಿಕಾರಿ ಆಗಬೇಕೆಂಬ ಕನಸು ಕಂಡಿದ್ದ ಯುವತಿ ದುರಂತ ಅಂತ್ಯ: ಮನಕಲಕುತ್ತೆ ಈಕೆಯ ಕತೆ

    ರಾಂಚಿ: ತಾನೊಬ್ಬ ಪೊಲೀಸ್​ ಅಧಿಕಾರಿ ಆಗಬೇಕೆಂಬ ಕನಸು ಕಂಡಿದ್ದ 12ನೇ ತರಗತಿಯ ವಿದ್ಯಾರ್ಥಿನಿ ಅಂಕಿತಾ ಸಿಂಗ್​ ಕನಸು ಪಾಗಲ್​ ಪ್ರೇಮಿಯ ಅಟ್ಟಹಾಸಕ್ಕೆ ಒಂದೇ ದಿನದಲ್ಲಿ ನುಚ್ಚು ನೂರಾಗಿರುವುದಲ್ಲದೆ, ಆಕೆಯ ಅಮೂಲ್ಯ ಪ್ರಾಣವೂ ಸಹ ಹೋಗಿದೆ.

    ಆಗಸ್ಟ್​ 23ರಂದು ಶಾರುಖ್​ ಎಂಬಾತ ಅಂಕಿತಾಗೆ ಬೆಂಕಿ ಹಚ್ಚಿದ್ದ. ಗಂಭೀರ ಗಾಯಗಳಿಂದ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಅಂಕಿತಾ, ಚಿಕಿತ್ಸೆ ಫಲಕಾರಿಯಾಗದೇ ಆಗಸ್ಟ್​ 28ರ ಭಾನುವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾಳೆ.

    10 ದಿನಗಳ ಹಿಂದೆ ಆರೋಪಿ ತನ್ನ ಮೊಬೈಲ್‌ಗೆ ಕರೆ ಮಾಡಿ ಸ್ನೇಹಿತನಾಗುವಂತೆ ಪೀಡಿಸುತ್ತಿದ್ದ ಎಂದು ಅಂಕಿತಾ ಕೊನೆಯಲ್ಲಿ ಹೇಳಿದ್ದಾರೆ. ಸೋಮವಾರ (ಆ.22) ರಾತ್ರಿ 8 ಗಂಟೆ ಸುಮಾರಿಗೆ ಆತ ನನಗೆ ಕರೆ ಮಾಡಿ, ನನ್ನ ಜೊತೆ ಮಾತನಾಡದಿದ್ದರೆ, ನಾನು ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಸಿದ. ಈ ಬಗ್ಗೆ ನನ್ನ ತಂದೆಗೆ ನಾನು ಮಾಹಿತಿ ನೀಡಿದೆ. ಆತನ ಕುಟುಂಬದ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು ಎಂದು ಸಾವಿಗೂ ಮುನ್ನ ಅಂಕಿತಾ ಹೇಳಿದರು.

    ಸೋಮವಾರ ರಾತ್ರಿ ಊಟದ ನಂತರ, ನಾವು ಮಲಗಲು ಹೋದೆವು. ನಾನು ಇನ್ನೊಂದು ಕೋಣೆಯಲ್ಲಿ ಮಲಗಿದ್ದೆ. ಮಂಗಳವಾರ ಬೆಳಗ್ಗೆ ನನ್ನ ಬೆನ್ನಿನಲ್ಲಿ ನೋವು ಮತ್ತು ಸುಡುತ್ತಿರುವ ವಾಸನೆಯನ್ನು ಅನುಭವಿಸಿದೆ. ಕಣ್ಣು ತೆರೆದಾಗ ಶಾರೂಖ್​ ಓಡಿಹೋಗುವುದನ್ನು ನಾನು ನೋಡಿದೆ. ನಾನು ನೋವಿನಿಂದ ಕಿರುಚುತ್ತಾ ನನ್ನ ತಂದೆಯ ಕೋಣೆಗೆ ಓಡಿದೆ. ನನ್ನ ಪಾಲಕರು ಬೆಂಕಿಯನ್ನು ನಂದಿಸಿ, ನನ್ನನ್ನು ಆಸ್ಪತ್ರೆಗೆ ಕರೆದೊಯ್ದರು ಎಂದು ಸಾಯುವ ಮುನ್ನ ಅಂಕಿತಾ ಪೊಲೀಸರಿಗೆ ಮಾಹಿತಿ ನೀಡಿದರು.

    ಪೊಲೀಸ್​ ಅಧಿಕಾರಿ ಆಗಬೇಕೆಂಬ ಕನಸು ಕಂಡಿದ್ದ ಯುವತಿ ದುರಂತ ಅಂತ್ಯ: ಮನಕಲಕುತ್ತೆ ಈಕೆಯ ಕತೆ

    19 ವರ್ಷದ ಅಂಕಿತಾ ಹುಡುಗಿಯರ ಶಾಲೆಯ ವಿದ್ಯಾರ್ಥಿನಿ ಮತ್ತು ಪೊಲೀಸ್​ ಅಧಿಕಾರಿ ಆಗಬೇಕೆಂದು ಕನಸು ಕಟ್ಟಿಕೊಂಡಿದ್ದ ಹುಡುಗಿ. ಬಾಲ್ಯದಲ್ಲೇ ಕ್ಯಾನ್ಸರ್​ನಿಂದಾಗಿ ತನ್ನ ತಾಯಿಯನ್ನು ಅಂಕಿತಾ ಕಳೆದುಕೊಂಡಳು. ಇದಾದ ಬಳಿಕ ಅಂಕಿತಾ ಅವರ ಕುಟುಂಬವು ಆರ್ಥಿಕ ಮುಗ್ಗಟ್ಟನ್ನು ಎದುರಿಸಿತು. ಏಕೆಂದರೆ ತಮ್ಮ ತಾಯಿಯ ಚಿಕಿತ್ಸೆಗಾಗಿ ತಮ್ಮ ಜಮೀನು ಮತ್ತು ಆಸ್ತಿಯನ್ನು ಮಾರಾಟ ಮಾಡಿದ್ದರು. ಮೂಲಗಳ ಪ್ರಕಾರ ಆಕೆಯ ತಂದೆಯ ಆದಾಯ ದಿನಕ್ಕೆ 200 ರೂಪಾಯಿ ಎಂದು ಮೂಲಗಳು ದೃಢಪಡಿಸಿವೆ ಮತ್ತು ಆರ್ಥಿಕ ಪರಿಸ್ಥಿತಿಯಿಂದಾಗಿ ಅಂಕಿತಾ, ಪ್ರಾಥಮಿಕ ತರಗತಿ ವಿದ್ಯಾರ್ಥಿಗಳಿಗೆ ಟ್ಯೂಷನ್ ನೀಡುತ್ತಿದ್ದರು ಮತ್ತು ಪ್ರತಿ ತಿಂಗಳು 1,000 ರೂ ಗಳಿಸುತ್ತಿದ್ದರು.

    ಘಟನೆ ಹಿನ್ನೆಲೆ ಏನು?
    ಅಂಕಿತಾ ಅವರ ತಂದೆ, 6 ನೇ ತರಗತಿ ವಿದ್ಯಾರ್ಥಿಯಾಗಿರುವ ಅಂಕಿತಾಳ ಕಿರಿಯ ಸಹೋದರ ಮತ್ತು ಅಂಕಿತಾ ದುಮ್ಕಾದಲ್ಲಿ ಎರಡು ಕೋಣೆಗಳ ಮನೆಯಲ್ಲಿ ವಾಸಿಸುತ್ತಿದ್ದಾರೆ. ಆಗಸ್ಟ್ 23 ರಂದು ಅಂಕಿತಾ ತನ್ನ ಕೋಣೆಯಲ್ಲಿ ಮಲಗಿದ್ದಾಗ, ಆರೋಪಿ ಶಾರೂಖ್​, ಕಿಟಕಿಯಿಂದ ಅಂಕಿತಾಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಬೆಂಕಿಯ ನೋವಿನಿಂದ ಕೋಣೆಯಿಂದ ಹೊರ ಓಡಿ ಬಂದಾಗ ಬೆಂಕಿಯನ್ನು ನಂದಿಸಿದ ಅಂಕಿತಾ ತಂದೆ ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅಂಕಿತಾ ಆಗಸ್ಟ್ 28 ಕೊನೆಯುಸಿರೆಳೆದಳು.

    ಈ ಭಯಾನಕ ಘಟನೆಯ ನಂತರ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ, ಆರೋಪಿಯು ತನ್ನೊಂದಿಗೆ ಮಾತನಾಡದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎಂದು ಅಂಕಿತಾ ಹೇಳಿದ್ದಾರೆ. ಆರೋಪಿ ಶಾರುಶ್​ನನ್ನು ಜಾರ್ಖಂಡ್ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಶಾರೂಖ್​, ಪ್ರೀತಿ ಮಾಡುವಂತೆ ಅಂಕಿತಾಳನ್ನು ಪೀಡಿಸುತ್ತಿದ್ದ ಎಂದು ತಿಳಿದುಬಂದಿದೆ. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಆಗಸ್ಟ್ 29 ರಂದು ಅಂಕಿತಾ ಅವರ ಪಾಲಕರಿಗೆ 10 ಲಕ್ಷ ರೂಪಾಯಿಗಳ ಪರಿಹಾರ ಮೊತ್ತವನ್ನು ಘೋಷಿಸಿದ್ದಾರೆ. (ಏಜೆನ್ಸೀಸ್​)

    ಗೃಹಿಣಿ ಉದ್ಯೋಗಿಯಲ್ಲವೇ?

    ಮುಖೇಶ್ ಅಂಬಾನಿ ಉತ್ತರಾಧಿಕಾರ ಹಸ್ತಾಂತರ: ಮಗಳಿಗೆ ರಿಟೇಲ್, ಮಗ ಅನಂತ್​ಗೆ ಇಂಧನ ಘಟಕದ ಹೊಣೆ

    ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ವಿವಾದ; ಮಹಾನಗರ ಪಾಲಿಕೆಯಿಂದ ಐತಿಹಾಸಿಕ ನಿರ್ಣಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts