More

    ಕೋವಿಡ್​ ಎದುರಿಸಲು ಸಹಾಯ ಕೋರಿದ ಮಹಿಳೆಯರಿಗೆ ಬಂತು ಪೋರ್ನ್​ ವಿಡಿಯೋಗಳು!

    ತಿರುವನಂತಪುರಂ (ಕೇರಳ): ಮಹಾಮಾರಿ ಕರೊನಾ ಕುರಿತಾದ ಸಹಾಯದ ನಿರೀಕ್ಷೆಗಾಗಿ ಫೋನ್​ ನಂಬರ್​ ಶೇರ್​​ ಮಾಡಿಕೊಂಡ ಅನೇಕ ಮಹಿಳೆಯರಿಗೆ ಅಶ್ಲೀಲ ಸಂದೇಶಗಳು, ಚಿತ್ರಗಳು ಮತ್ತು ಪೋರ್ನ್​ ವಿಡಿಯೋಗಳು ಬರುತ್ತಿದ್ದು, ಇಂತಹ ಕಹಿ ಅನುಭವವನ್ನು ಅನುಭವಿಸಿದ ಮಹಿಳೆಯರು ಟ್ವೀಟ್​ ಮೂಲಕ ತಮ್ಮ ನೋವನ್ನು ಹೊರಹಾಕಿದ್ದಾರೆ.

    ಒಂದು ವಾರದ ಹಿಂದೆ ಶಾಸ್ವತಿ ಶಿವ ಎಂಬಾಕೆ ಕೆಲವು ದುಷ್ಕರ್ಮಿಗಳಿಂದ ತೀವ್ರ ಮಾನಸಿಕ ನೋವು ಅನುಭವಿಸಿದ್ದಾರೆ. ಕೋವಿಡ್​ ಸೋಂಕು ತಗುಲಿದ್ದ ತನ್ನ ಕುಟುಂಬದ ಸದಸ್ಯರೊಬ್ಬರಿಗೆ ಏನಾದರೂ ಅಗತ್ಯ ನೆರವು ಸಿಗಬಹುದೇನೋ ಎಂಬ ಭರವಸೆಯಿಂದ ತನ್ನ ಫೋನ್​ ನಂಬರ್​ ಶೇರ್​ ಮಾಡಿಕೊಂಡಿದ್ದರು. ಬ್ಲಡ್​ ಬ್ಯಾಂಕ್​, ವೆಂಟಿಲೇಟರ್​ ಬೆಡ್​ ಮತ್ತು ಪ್ಲಾಸ್ಮಾ ದಾನಿ ಅಗತ್ಯವಿದೆಯೇ ಎಂಬ ಕರೆಗಳು ಸಹ ಬಂದವು.

    ಆದರೆ, ಓರ್ವ ಕರೆ ಮಾಡಿ ನೀವಿನ್ನೂ ಒಂಟಿಯಾ? ನಿಮಗೆ ಮದುವೆ ಆಗಿಲ್ಲವೇ? ಎಂದು ಪ್ರಶ್ನಿಸಿದ್ದಾನೆ. ಇದರ ನಡುವೆ ಒಂದೇ ಸಮಯದಲ್ಲಿ ಏಳು ಮಂದಿ ವಿಡಿಯೋ ಕಾಲ್​ ಮಾಡಿದ್ದು, ಇದರಿಂದ ಹೆದರಿದ ಶಾಸ್ವತಿ ತನ್ನ ಮೊಬೈಲ್​ ಫೋನ್​ ಅನ್ನು ಸೈಲೆಂಟ್​ನಲ್ಲಿ ಇಡುವಂತಾಯಿತು. ವೈದ್ಯಕೀಯ ಸೌಲಭ್ಯ ಅರಸಿ ನಂಬರ್​ ಶೇರ್​ ಮಾಡಿಕೊಂಡವಳಿಗೆ ಇದೀಗ ಮಾನಸಿಕ ನೆಮ್ಮದಿ ಇಲ್ಲದಂತಾಗಿದೆ.

    ಶಾಸ್ವತಿ ಒಬ್ಬರೇ ಅಲ್ಲ ಅನೇಕ ಮಹಿಳೆಯರಿಗೆ ಈ ರೀತಿಯ ಅನುಭವವಾಗಿದೆ. ರಾಥಿ ಎಂಬಾಕೆ ಟ್ವೀಟ್​ ಮಾಡಿದ್ದು, ಸಹಾಯ ಕೇಳಿದ್ದಕ್ಕೆ ಏಪ್ರಿಲ್​ 26 ಅನೇಕ ಅಶ್ಲೀಲ ಚಿತ್ರಗಳು ರವಾನೆ ಆಗಿವೆ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬ ಟ್ವಿಟರ್​ ಬಳಕೆದಾರ ತಮ್ಮ ಮೊಬೈಲ್​ಗೆ ಪೋರ್ನ್​ ವಿಡಿಯೋ ಮತ್ತು ಅಶ್ಲೀಲ ಚಿತ್ರಗಳನ್ನು ಕಳುಹಿಸಿದ್ದಾಗಿ ಹೇಳಿಕೊಂಡಿದ್ದಾರೆ.

    ಇನ್ನೊರ್ವ ಟ್ವಿಟರ್​ ಬಳಕೆದಾರ ತಮ್ಮ ನೋವಿನ ಮಾತನ್ನು ಅಕ್ಷರಕ್ಕಿಳಿಸಿದ್ದು, ಫೋನ್​ ಮಾಡಿದ ಓರ್ವ ಫೋನ್​ ಸೆಕ್ಸ್​ ಬಗ್ಗೆ ಕೇಳಿದನಂತೆ. ಶಾಸ್ವತಿ ತಮಗಾದ ಅನುಭವವನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡುತ್ತಿದ್ದಂತೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕಹಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

    ಇನ್ನು ಮಹಿಳೆಯರಿಗೆ ಬಂದ ಫೋನ್​ ನಂಬರ್​ ಅನ್ನು ಮಾಧ್ಯಮ ಬೆನ್ನತ್ತಿ ಹೋದಾಗ ಅವುಗಳು ಸ್ವಿಚ್​ ಆಫ್​ ಆಗಿರುವುದು ಕಂಡುಬಂದಿದೆ. ಇದರ ಹಿಂದೆ ಆಸ್ಪತ್ರೆಯ ಸಿಬ್ಬಂದಿಯ ಕೈವಾಡವು ಇರಬಹುದು ಎಂದು ತಿಳಿದುಬಂದಿದೆ. ನೆರವಿಗಾಗಿ ಆಸ್ಪತ್ರೆ ಮೊರೆ ಹೋದವರ ನಂಬರ್​ ಶೇರ್​ ಮಾಡಿ ಈ ಕುಚೇಷ್ಟೇ ಮಾಡುತ್ತಿರುವ ಸಂಶಯ ವ್ಯಕ್ತವಾಗಿದೆ. ಸದ್ಯ ಈ ಸಂಬಂಧ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. (ಏಜೆನ್ಸೀಸ್​)

    ಕಿಸ್ ಹುಡುಗಿಯ ಮೊದಲ ತೆಲುಗು ಹಾಡು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts