More

    ಶರೀರದಲ್ಲಿ ಕೆಟ್ಟ ಕೊಬ್ಬಿನಾಂಶ ಕರಗಿಸಿ ಆರೋಗ್ಯ ಕಾಪಾಡುವಲ್ಲಿ ಧಾನ್ಯಗಳ ಪಾತ್ರ ತುಂಬಾ ಮಹತ್ವದ್ದು

    ತೂಕ ಇಳಿಸುವ ವಿಚಾರದಲ್ಲಿ ನಾವು ಎಲ್ಲಾ ತರಹದ ಡಯಟ್ ವ್ಯಾಯಾಮ ಮತ್ತು ಇತರೆ ಸಪ್ಲಿಮೆಂಟ್ಸ್​ಗಳನ್ನು ಬಳಸ್ತೀವಿ. ಆದರೆ, ಈ ಪೂರಕಗಳು ಆರೋಗ್ಯಕ್ಕೆ ಲಾಭ ತಂದುಕೊಡುವ ಬದಲು ಅಡ್ಡಪರಿಣಾಮ ಬೀರುವುದೇ ಹೆಚ್ಚು. ಹೀಗಾಗಿ ತೂಕ ಕಡಿಮೆ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿರುವವರಿಗೆ ಉತ್ತಮ ಆಹಾರ ಅಂದ್ರೆ ಕಾಳುಗಳು.

    ಹೌದು, ಕಾಳುಗಳಲ್ಲಿ ನಾರಿನಾಂಶ ಪೊಟ್ಯಾಶಿಯಂ, ಮೆಗ್ನೀಷಿಯಂ, ಕಬ್ಬಿಣ ಮತ್ತು ತಾಮ್ರದಂತಹ ಸೂಕ್ಷ್ಮ ಪೋಷಕಾಂಶಗಳು ಸಮೃದ್ಧವಾಗಿರುತ್ತವೆ. ಇವುಗಳಲ್ಲಿ ಅಧಿಕ ಪ್ರಮಾಣದ ಪ್ರೋಟೀನ್ ಇರುವುದರಿಂದ ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರಿಗೆ ಅತ್ಯುತ್ತಮ ಆಹಾರ. ತೂಕ ಕಡಿಮೆ ಮಾಡಿಕೊಳ್ಳುವುದರ ಹೊರತಾಗಿ, ಕಾಳುಗಳು ನಮ್ಮ ಶರೀರದಲ್ಲಿ ಕೆಟ್ಟ ಕೊಬ್ಬಿನಾಂಶ ಅಂತಾನೇ ಕರೆಸಿಕೊಳ್ಳುವ ಎಲ್​ಡಿಎಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಕಾಳುಗಳು ನಿಮ್ಮ ದೀರ್ಘಕಾಲ ಹೊಟ್ಟೆ ತುಂಬಿದಂತಿರಿಸಿ ಆಗಾಗ್ಗೆ ಹಸಿವಾಗುವುದನ್ನು ತಡೆಯುತ್ತದೆ.

    ಕಾಳುಗಳ ಸೇವನೆಯಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತವೆ. ಪೊಟ್ಯಾಷಿಯಂ, ಮೆಗ್ನಿಶಿಯಮ್, ಕ್ಯಾಲ್ಸಿಯಂನಂತಹ ಎಷ್ಟೋ ಪೋಷಕಾಂಶಗಳು ಕಾಳುಗಳಲ್ಲಿ ಅಡಕವಾಗಿರುತ್ತವೆ. ಅಲ್ಲದೆ ಕಾಳುಗಳಲ್ಲಿ ಹಾಲಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲ್ಸಿಯಂ ಇರುತ್ತದೆ. ಮಕ್ಕಳಲ್ಲಿ ಮೂಳೆಗಳ ಬೆಳವಣಿಗೆಗೆ ಕಾಳುಗಳು ಮಹತ್ವದ ಪಾತ್ರ ವಹಿಸುತ್ತದೆ. ವಯಸ್ಕರಲ್ಲಿ ರಕ್ತದೊತ್ತಡವನ್ನು ನಿಯಂತ್ರಣ ಮಾಡುತ್ತದೆ. ಅದರಲ್ಲೂ ಮುಖ್ಯವಾಗಿ ಈ ಕಡಲೆ ಕಾಳುಗಳನ್ನು ತಿಂದರೆ ರಕ್ತದಲ್ಲಿ ಕೆಂಪುರಕ್ತ ಕಣಗಳನ್ನು ಹೆಚ್ಚಿಸಿ ರಕ್ತ ಹೀನತೆ ದೂರ ಮಾಡುತ್ತದೆ.

    ಗರ್ಭಿಣಿಯರು ಕಾಳುಗಳ ಸೇವನೆಯಿಂದ ಅತಿ ಹೆಚ್ಚಿನ ಲಾಭ ಪಡೆಯಬಹುದು. ಮಹಿಳೆಯರು ಈ ಘಟ್ಟದಲ್ಲಿ ಗರ್ಭದಲ್ಲಿನ ಮಗುವಿನ ಬೆಳವಣಿಗೆ ಬೇಕಾದ ಫೋಲಿಕ್ ಆಸಿಡ್, ಮೆಗ್ನೀಶಿಯಂ ಮತ್ತಿತರ ಪೋಷಕಾಂಶಗಳಿಂದ ಕೂಡಿದ ಕಾಳುಗಳ ಸೇವನೆ ಅತಿ ಮುಖ್ಯ ಪಾತ್ರ ವಹಿಸುತ್ತದೆ.

    ಇನ್ನು ನಿದ್ರಾಹೀನತೆ ಸಮಸ್ಯೆ ಸರಿಪಡಿಸುವಲ್ಲಿ ಕಾಳುಗಳ ಸೇವನೆ ಮಹತ್ವದ ಪಾತ್ರ ವಹಿಸುತ್ತದೆ. ಕಾಳುಗಳಲ್ಲಿ ಪ್ರೋಟಿನ್ಸ್ ಮತ್ತು ಮಿನರಲ್ಸ್ ಹೆಚ್ಚಾಗಿ ಇರುವುದರಿಂದ ನಮ್ಮ ಶರೀರಕ್ಕೆ ಅಗತ್ಯವಾದ ಶಕ್ತಿ ಪೂರೈಸುತ್ತದೆ. ಅಲ್ಲದೆ ಶರೀರವನ್ನು ನಿರ್ಜಲೀಕರಣ ಮಾಡೋ ಉಪ್ಪನ್ನು ಹೊರಗೆ ತೆಗೆದು ಹಾಕುತ್ತದೆ. ಮೂತ್ರ ಪಿಂಡದ ಸಮಸ್ಯೆ ಇರುವವರು ಕೂಡ ಈ ಕಡಲೆ ಕಾಳುಗಳನ್ನು ಸೇವಿಸುವುದರಿಂದ ತುಂಬಾ ಒಳ್ಳೆಯದು. ಹಾಗೆಯೇ ಕಜ್ಜಿ ಸಮಸ್ಯೆಯಿಂದ ಬಳುತ್ತಿರುವವರು ಕಡಲೆ ಕಾಳುಗಳನ್ನು ಸೇವಿಸುವುದರಿಂದ ಕ್ರಮೇಣ ಸಮಸ್ಯೆ ನಿವಾರಣೆಯಾಗಿ ಕಾಂತಿಯುಕ್ತ ಚರ್ಮ ನಿಮ್ಮದಾಗಿಸಿಕೊಳ್ಳಬಹುದು.

    ಪ್ರಯೋಗಾರ್ಥಿಗಳ ಮೇಲೆ ನಡೆದ ಅಧ್ಯಯನದ ಪ್ರಕಾರ, ಪ್ರಯೋಗಾರ್ಥಿಗಳು 4 ವಾರಗಳ ಅವಧಿಯಲ್ಲಿ, ಒಂದು ದಿನಕ್ಕೆ 1.5 ಕಪ್ ಕಾಳು ಸೇವಿಸಿದರು. ಕೇವಲ 4 ವಾರಗಳಲ್ಲಿ, ಅವರು ತಮ್ಮ ಕ್ಯಾಲೊರಿ ಸೇವನೆಯನ್ನು ದಿನಕ್ಕೆ 300 ರಷ್ಟು ಕಡಿಮೆ ಮಾಡುವ ಮೂಲಕ, 3 ಪೌಂಡ್ ಗಳಷ್ಟು ತೂಕ ಕಳೆದುಕೊಂಡಿದ್ದು, ಅತ್ಯಂತ ಕಡಿಮೆ ಹಸಿವು ಮತ್ತು ಹೆಚ್ಚು ಹೊಟ್ಟೆ ತುಂಬಿದ ಭಾವನೆಯಾಗಿತ್ತೆಂದು ವರದಿಯಾಗಿದೆ. ಕಾಳುಗಳು ನಾರಿನ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ವಿಟಮಿನ್‌ ಸಿ ದೇಹಕ್ಕೆ ಸೋಂಕು ಆಗದಂತೆ ತಡೆಯುತ್ತದೆ. ವಾರಕ್ಕೆ ಎರಡು ಬಾರಿ ತಿನ್ನುವದರಿಂದ ಕ್ಯಾನ್ಸರ್ ಸಂಭವ ಕಡಿಮೆಯಾತ್ತದೆ. ಪ್ರತಿನಿತ್ಯ ಕಾಳನ್ನು ತಿನ್ನುವುದರಿಂದ ತ್ವಚೆಯ ಆರೋಗ್ಯ ಕೂಡ ಚೆನ್ನಾಗಿರುತ್ತದೆ.

    ಇನ್ನು ಮೊಳಕೆ ಕಟ್ಟಿದ ಕಾಳುಗಳನ್ನು ಹಾಗೂ ನೆನೆಸಿದ ಕಾಳುಗಳನ್ನು ಪ್ರತಿದಿನ ಸೇವನೆ ಮಾಡುವುದರಿಂದ ದೇಹಕ್ಕೆ ಪೌಷ್ಟಿಕಾಂಶ ಪಡೆದುಕೊಳ್ಳಬಹುದಾಗಿದೆ. ಇವುಗಳಲ್ಲಿ ವಿಶೇಷವಾಗಿರುವಂತ ಹುರುಳಿಕಾಳನ್ನು ಸೇವನೆ ಮಾಡುವುದರಿಂದ ದೇಹಕ್ಕೆ ರೋಗ ನಿರೋಧಕ ಶಕ್ತಿ ದೊರೆಯುತ್ತದೆ, ಇದರಿಂದ ಸಾಮಾನ್ಯ ಸಮಸ್ಯೆಗಳು ನಿಮ್ಮನ್ನು ಕಾಡುವುದಿಲ್ಲ. ಅಷ್ಟೇ ಅಳದೆ ದೇಹಕ್ಕೆ ಉಷ್ಣಾಂಶವನ್ನು ನೀಡುತ್ತದೆ ಹಾಗಾಗಿ ಶೀತ ನೆಗಡಿ ಸಂದರ್ಭದಲ್ಲಿ ಹುರುಳಿ ಸಹಕಾರಿ.

    ಅಂದಹಾಗೆ ಕೆಲವು ಮೊಳಕೆಯೊಡೆದ ಕಾಳುಗಳು ಒಮೆಗಾ -3 ಕೊಬ್ಬಿನಾಮ್ಲಗಳನ್ನು ಹೊಂದಿರುತ್ತವೆ. ಇದು ಆರೋಗ್ಯಕ್ಕೆ ಹಾನಿಕಾರಕವಾದ ದೇಹದಲ್ಲಿನ ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಮೊಳಕೆ‌ ಬರಿಸಿದ ಕಾಳುಗಳನ್ನು ನಿಯಮಿತವಾಗಿ ಸೇವಿಸಿದರೆ ಹೃದಯ ಸಂಬಂಧಿ ತೊಂದರೆಗಳಿಂದ ದೂರವಿರಬಹುದು. ಸುಲಭವಾದ ಜೀರ್ಣ ಕ್ರಿಯೆಗೆ ಮೊಳಕೆ ಬರಿಸಿದ ಕಾಳುಗಳು ಸಹಾಯಕ. ನಾವು ಆಹಾರವನ್ನು ಜೀರ್ಣಿಸಿಕೊಳ್ಳುವಾಗ ಹೊಟ್ಟೆಯಲ್ಲಿ ರಾಸಾಯನಿಕ ಪ್ರತಿಕ್ರಿಯೆಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಕೂಡಾ ಕೆಲಸ ಮಾಡುತ್ತದೆ. ಜೀರ್ಣಕ್ರಿಯೆಯ ನಂತರ ಕಿಣ್ವಗಳು ಆಹಾರವನ್ನು ಹೆಚ್ಚು ಪರಿಣಾಮಕಾರಿಯಾಗಿ ಒಡೆಯುತ್ತವೆ.

    ಇದು ಪೋಷಕಾಂಶಗಳನ್ನು ಉತ್ತಮವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ದ್ವಿದಳ ಧಾನ್ಯಗಳನ್ನು ಮೊಳಕೆ ಬರಿಸಿ ಸೇವಿಸುವುದರಿಂದ ಅದರಲ್ಲಿನ ನಾರಿನ‌ ಅಂಶಗಳೂ ಕೂಡಾ ದೇಹಕ್ಕೆ‌ ಸೇರುತ್ತವೆ. ಇದು ದೇಹದಲ್ಲಿರುವ ಕಲ್ಮಶಗಳನ್ನು ನಿರ್ಮೂಲನೆ ಮಾಡುತ್ತದೆ ಮತ್ತು ಹೊಟ್ಟೆಯನ್ನು ಸ್ವಚ್ಛವಾಗಿಡುತ್ತದೆ. ಮೊಳಕೆಯೊಡೆದ ಕಾಳುಗಳುಲ್ಲಿ ಕಬ್ಬಿಣ, ತಾಮ್ರ, ಮ್ಯಾಂಗನೀಸ್ ಮತ್ತು ಪೊಟ್ಯಾಸಿಯಮ್ನಂತಹ ಖನಿಜಗಳು ಹೇರಳವಾಗಿರುತ್ತವೆ. ಇವೆಲ್ಲಾ ದೇಹದ ಪ್ರತಿರೋಧಕ ವ್ಯವಸ್ಥೆಯ ಹೆಚ್ಚಳಕ್ಕೆ ಸಹಕಾರಿ. ಇದು ಕಾಯಿಲೆಗಳು ಮತ್ತು ಸೋಂಕುಗಳ ಅಪಾಯಗಳನ್ನು ಕಡಿಮೆ ಮಾಡುತ್ತದೆ.

    ಸದ್ಯ ಜಂಕ್ ಫುಡ್​ಗೆ ಮಾರುಹೋಗಿರೋ ಕಾಲದಲ್ಲಿ ಈ ಕಾಳುಗಳನ್ನ ತಿನ್ನುವ ಮನಸ್ಸೇ ಮಾಡೋದಿಲ್ಲ. ಇಂಥಹವರು ಎಲ್ಲಾ ಕಾಳುಗಳನ್ನು ಹದವಾಗಿ ಹುರಿದು ಅದಕ್ಕೆ ಉಪ್ಪು ಮತ್ತು ಸ್ವಲ್ಪ ಖಾರ ಸೇರಿಸಿಟ್ಟುಕೊಂಡು ಆಗ್ಗಾಗ್ಗೆ ಸ್ನ್ಯಾಕ್ಸ್ ರೀತಿ ಸೇವಿಸಿದ್ರೆ, ಹಣವೂ ಉಳಿಯುತ್ತೆ. ಅಲ್ಲದೆ ಆರೋಗ್ಯವನ್ನೂ ಕೂಡ ಕಾಪಾಡಿಕೊಳ್ಳಬಹುದು.

    ಸಿರಿಧಾನ್ಯಗಳಿಗಾಗಿ ಸಂಪರ್ಕಿಸಿ: ಜೀವಿತಾ ಎಂಟರ್ ಪ್ರೈಸಸ್ ಯರಗುಂಟೆ, ಶಿರಾ ತಾಲೂಕು, ತುಮಕೂರು ಜಿಲ್ಲೆ.

    ಮೊಬೈಲ್​ ನಂಬರ್​: 7624931166

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts