More

    ಶಾರುಖ್​ ಪುತ್ರ ಆರ್ಯನ್​ ಖಾನ್​ಗೆ ಜಾಮೀನು ನಿರಾಕರಿಸಲು ಕಾರಣವೇನು? ಕೋರ್ಟ್​ ಹೇಳಿದ್ದಿಷ್ಟು…!

    ಮುಂಬೈ: ಕ್ರೂಸ್ ಶಿಪ್​​​ನಲ್ಲಿ ಡ್ರಗ್ಸ್​ ಪಾರ್ಟಿ ನಡೆಸಿದ ಆರೋಪದಲ್ಲಿ ಬಂಧಿಸಲ್ಪಟ್ಟಿರುವ ಬಾಲಿವುಡ್​ ತಾರೆ ಶಾರುಖ್​ ಖಾನ್​ರ ಮಗ ಆರ್ಯನ್​ ಖಾನ್​​ನ​ ಜಾಮೀನು ಅರ್ಜಿಯನ್ನು ಮುಂಬೈನ ವಿಶೇಷ ಎನ್​ಡಿಪಿಎಸ್​​ ಕೋರ್ಟ್​ ವಜಾಗೊಳಿಸಿದೆ. ಆರ್ಯನ್​ರೊಂದಿಗೆ ಪ್ರಕರಣದ ಇತರ ಇಬ್ಬರು ಆರೋಪಿಗಳಾದ ಅರ್ಬಾಜ್​ ಮರ್ಚೆಂಟ್ ಮತ್ತು ಮುನ್​ಮುನ್​ ಧಮೇಚ ಅವರಿಗೂ ಜಾಮೀನು ಲಭ್ಯವಾಗಿಲ್ಲ.

    ಆರ್ಯನ್​ ಖಾನ್​ ಜಾಮೀನು ನಿರಾಕರಣೆ ಕಾರಣ ಏನೆಂದರೆ, ಆತನ ವಾಟ್ಸ್​ಆ್ಯಪ್​ ಚಾಟ್​. ಈ ಬಗ್ಗೆ ಉಲ್ಲೇಖಿಸಿರುವ ಮುಂಬೈ ನ್ಯಾಯಾಲಯ, ಆರ್ಯನ್​ ಖಾನ್​ ನಿರಂತರವಾಗಿ ಅಕ್ರಮ ಡ್ರಗ್ಸ್​ ಚಟುವಟಿಕೆಯಲ್ಲಿ ತೊಡಗಿದ್ದ ಎಂಬುದನ್ನು ಆತನ ವಾಟ್ಸ್​ಚಾಟ್​ ಬಹಿರಂಗಪಡಿಸಿದೆ. ಹೀಗಾಗಿ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಜಡ್ಜ್​ ವಿವಿ ಪಾಟೀಲ್​ ಹೇಳಿದ್ದಾರೆ.

    ಡ್ರಗ್ಸ್​ ಪೂರೈಕೆದಾರರ ಜತೆಗೆ ಆರ್ಯನ್​ ಖಾನ್​ಗೆ ಸಂಬಂಧ ಇರುವುದು ಕೂಡ ಬಹಿರಂಗವಾಗಿರುವುದು ಜಾಮೀನು ಸಿಗದೇ ಇರುವುದಕ್ಕೆ ಕಾರಣವಾಗಿದೆ. ಇನ್ನು ಆರ್ಯನ್​ ಖಾನ್​ ಸ್ನೇಹಿತ ಅರ್ಬಾಜ್​, ತನ್ನ ಶೋನಲ್ಲಿ 6 ಗ್ರಾಂ ಚರಾಸ್​ ಅಡಗಿಸಿಟ್ಟಿದ್ದು ಆರ್ಯನ್​ಗೆ ತಿಳಿದಿತ್ತು ಎಂದು ಕೋರ್ಟ್​ ಹೇಳಿದೆ. ಇನ್ನು ಆರೋಪಿಗೆ ಜಾಮೀನು ನೀಡಿದರೆ, ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲ ಸಾಕ್ಷಿಗಳನ್ನು ನಾಶಪಡಿಸುವ ಸಾಧ್ಯತೆ ಇರುವುದರಿಂದ ಜಾಮೀನು ನಿರಾಕರಿಸಿರುವುದಾಗಿ ಕೋರ್ಟ್​ ತೀರ್ಪಿನಲ್ಲಿ ಉಲ್ಲೇಖಿಸಿದೆ.

    ಅಂದಹಾಗೆ ಅಕ್ಟೋಬರ್​ 2ನೇ ತಾರೀಕು ಕಾರ್ಡೆಲಿಯ ಕ್ರೂಸ್​ ಶಿಪ್​ ಮೇಲೆ ನಡೆಸಿದ ದಾಳಿಯ ಹಿನ್ನೆಲೆಯಲ್ಲಿ ಆರ್ಯನ್​ ಖಾನ್ಅನ್ನು ವಿಚಾರಣೆ ನಡೆಸಿದ್ದ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್​ಸಿಬಿ) ಅಧಿಕಾರಿಗಳು ​ಅ.3 ರಂದು ಅವನನ್ನು ಬಂಧಿಸಿದ್ದರು. 23 ವರ್ಷ ವಯಸ್ಸಿನ ಆರ್ಯನ್ ಖಾನ್​ನೊಂದಿಗೆ ಇತರ 9 ಜನರನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ.

    ಕಳೆದ 12 ದಿನಗಳಿಂದ ಮುಂಬೈನ ಅರ್ಥರ್​ ರಸ್ತೆ ಜೈಲಿನಲ್ಲಿರುವ ಖಾನ್​ಗೆ ಈ ಮೊದಲು ಮ್ಯಾಜಿಸ್ಟ್ರೇಟ್​ ಕೋರ್ಟ್​ನಿಂದ ಜಾಮೀನು ಲಭಿಸಿರಲಿಲ್ಲ. ನಂತರ ವಿಶೇಷ ಸೆಷನ್ಸ್​ ಕೋರ್ಟ್​ನಲ್ಲಿ ಸಲ್ಲಿಕೆಯಾದ ಜಾಮೀನು ಅರ್ಜಿಯ ತೀರ್ಪನ್ನು ಇಂದಿಗೆ ಕಾದಿರಿಸಲಾಗಿತ್ತು. ಇದೀಗ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ವಿ.ವಿ.ಪಾಟೀಲ್​ ಜಾಮೀನು ನಿರಾಕರಿಸಿ ಆದೇಶ ಹೊರಡಿಸಿದ್ದಾರೆ.

    ಸದ್ಯಕ್ಕೆ ಜೈಲಿನಲ್ಲೇ ಕಾಲ ಕಳೆಯಬೇಕಾಗಿರುವ ಆರ್ಯನ್​ ಖಾನ್​ರ ವಕೀಲರಿಗೆ ಎನ್​ಡಿಪಿಎಸ್​ ಕೋರ್ಟ್​ನ ಈ ಆದೇಶದ ವಿರುದ್ಧ ಹೈಕೋರ್ಟ್​ಗೆ ಅಪೀಲು ಸಲ್ಲಿಸುವ ಅವಕಾಶವಿದೆ. (ಏಜೆನ್ಸೀಸ್)

    ಶಾರುಖ್​ ಪುತ್ರ ಆರ್ಯನ್​ ಖಾನ್​ಗೆ ಜಾಮೀನಿಲ್ಲ

    ಇಂಡೋ-ಪಾಕ್​ ಕ್ರಿಕೆಟ್​ ಕದನಕ್ಕೆ ದಿನಗಣನೆ: ಮಹತ್ವದ ನಿರ್ಧಾರ ಮಾಡಿದ ಸಾನಿಯಾ ಮಿರ್ಜಾ..!

    ಆಂಟಿ ಲವ್ ಕಹಾನಿ ಕೊಲೆಯಲ್ಲಿ ಅಂತ್ಯ: ಅಪ್ರಾಪ್ತನ ಜತೆ ಓಡಿ ಹೋಗಲು ಮುಂದಾಗಿದ್ದವಳು ಆತನಿಂದಲೇ ಹತ್ಯೆ?

    ಈ 3 ಯೂಟ್ಯೂಬ್​ ಚಾನೆಲ್​ಗಳ ವಿರುದ್ಧ ಕಾನೂನು ಸಮರ ಸಾರಿದ ಸಮಂತಾ! ದೂರಿನಲ್ಲಿ ಸ್ಯಾಮ್​ ಹೇಳಿದ್ದಿಷ್ಟು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts