More

    ಅಶ್ಲೀಲ ಆಡಿಯೋ, 75 ಕೋಟಿ ರೂ. ಗಳಿಕೆ! ಗಂಡನ ಸಮರ್ಥನೆಗಿಳಿದು ಟ್ರೋಲ್​ ಆದ ಪಬ್​ಜಿ ಮದನ್​ ಪತ್ನಿ

    ಚೆನ್ನೈ: ಮಹಿಳೆಯರೊಂದಿಗೆ ಪಬ್​ಜಿ ಆಡುತ್ತಾ ಅವರೊಂದಿಗೆ ಅಶ್ಲೀಲವಾಗಿ ಮಾತನಾಡುತ್ತಿದ್ದ ಆಡಿಯೋವನ್ನು ಯೂಟ್ಯೂಬ್​ನಲ್ಲಿ ಅಪ್​ಲೋಡ್​ ಮಾಡಿ ಭಾರೀ ಲಾಭ ಮಾಡುತ್ತಿದ್ದ ಪಬ್​ಜಿ ಮದನ್ ಬಂಧನವಾಗಿರುವ ಎಲ್ಲರಿಗೂ ಗೊತ್ತೇ ಇದೆ. ಇದೀಗ ಆತನ ಪತ್ನಿ ಕೃತಿಕ ಪತ್ರಿಕಾಗೋಷ್ಠಿಯಲ್ಲಿ ಗಂಡನ ಪರವಾಗಿ ಮಾತನಾಡಿದ್ದು, ಸೈಬರ್​ ಕ್ರೈಂ ಪೊಲೀಸರ ವಿರುದ್ಧ ಹರಿಹಾಯ್ದಿದ್ದಾರೆ.

    ಜುಲೈ 6ರಂದು ಕೃತಿಕಾ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ನನ್ನ ಪತಿ ಮದನ್​ ದಿನವೊಂದಕ್ಕೆ 20 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದರು. ಇದೀಗ ಸೈಬರ್​ ಕ್ರೈಂ ಪೊಲೀಸರು ಪತಿಯ ಯೂಟ್ಯೂಬ್​ ಚಾನೆಲ್​ಗಳನ್ನು ನಿಷ್ಕ್ರಿಯಗೊಳಿಸಿರುವುದರಿಂದ ನಮ್ಮ ಆದಾಯದ ಮೇಲೆ ಹೊಡೆತ ಬಿದ್ದು, ಜೀವನ ನಿರ್ವಹಿಸುವುದು ಕಷ್ಟಕರವಾಗಿದೆ ಎಂದು ಹೇಳಿದ್ದಾರೆ.

    ಪಬ್​ಜಿ ಮದನ್​ ಎಂದೇ ಖ್ಯಾತಿಯಾಗಿರುವ ಮದನ್​ ಚೆನ್ನೈ ಪ್ರಖ್ಯಾತ ಯೂಟ್ಯೂಬರ್​. ಈತ ತನ್ನ ಆನ್​ಲೈನ್​ ಗೇಮಿಂಗ್​ ಚಾನೆಲ್​ಗಳಲ್ಲಿ ಅಶ್ಲೀಯ ಪದಗಳನ್ನು ಬಳಸುತ್ತಿದ್ದ. ಆತನ ಚಾನೆಲ್​ನಲ್ಲಿ ಕಿರಿಯ ವಯಸ್ಸಿನ ಮಕ್ಕಳೇ ಅತಿ ಹೆಚ್ಚು ಚಂದಾದಾರರಾಗಿದ್ದರಿಂದ ಈ ಬಗ್ಗೆ ದೂರು ದಾಖಲಾಗಿತ್ತು. ಇದಾದ ಬಳಿಕ ತಲೆಮರೆಸಿಕೊಂಡಿದ್ದ ಮದನ್​ನನ್ನು ಜೂನ್​ 18ರಂದು ಚೆನ್ನೈ ವಿಶೇಷ ಪೊಲೀಸ್​ ತಂಡ ಬಂಧಿಸಿತ್ತು. ಜುಲೈ 3ರವರೆಗೆ ಆತನನ್ನು ಕಸ್ಟಡಿಯಲ್ಲಿ ಇಟ್ಟುಕೊಳ್ಳಲಾಗಿತ್ತು. ಇದರ ನಡುವೆ ಸಿಸಿಬಿ ಜೂನ್​ 20ರಂದು ಮದನ್​ನ ಎಲ್ಲ ಯೂಟ್ಯೂಬ್​ ಚಾನೆಲ್​ಗಳನ್ನು ಬ್ಲಾಕ್​ ಮಾಡಿ ವಿಡಿಯೋಗಳನ್ನು ಡಿಲೀಟ್​​ ಮಾಡಿತು.

    ಬಳಿಕ ಮದನ್​ ನಂಬರ್​ ಜಾಡು ಹಿಡಿದ ಆತನ ಪತ್ನಿ ಕೃತಿಕಾಳನ್ನು ಸೇಲಂನ ಅತ್ತೆ ಮನೆಯಲ್ಲಿ ಜೂನ್​ 16ರಂದು ಬಂಧಿಸಲಾಗಿತ್ತು. ಇದಾದ ಬಳಿಕ ಕೃತಿಕಾಗೆ ಜೂನ್​ 29ರಂದು ಜಾಮೀನು ಸಿಕ್ಕಿ ಹೊರಬಂದಿದ್ದರು. ಮಗು ಇದ್ದ ಕಾರಣ ಆಕೆಗೆ ಬೇಗ ಜಾಮೀನು ದೊರಕಿದೆ.

    ಹೆಚ್ಚಿನ ಚಂದಾದಾರರನ್ನು ಸೆಳೆಯಲು ಪಬ್​ಜಿ ಮದನ್​ ಅಶ್ಲೀಲ ಮಾತುಗಳುಳ್ಳ ವಿಡಿಯೋಗಳನ್ನು ಅಪ್​ಲೋಡ್​ ಮಾಡುತ್ತಿದ್ದ. ಯೂಟ್ಯೂಬ್​ನಿಂದಲೇ ಮದನ್​ ಕೋಟ್ಯಾಂತರ ರೂಪಾಯಿ ಹಣವನ್ನು ಮಾಡಿದ್ದಾನೆ. ಇದರ ನಡುವೆ ಆತನ ಜಾಮೀನು ಸಹ ನಿರಾಕರಣೆ ಆಗಿದೆ. ಮದನ್​ ಮೇಲೆ ಚೆನ್ನೈ ಪೊಲೀಸರು ಜುಲೈ 6ರಂದು ಗೂಂಡಾ ಕಾಯ್ದೆಯನ್ನು ದಾಖಲಿಸಿದ್ದಾರೆ.

    ಇದರ ನಡುವೆ ಚೆನ್ನೈನ ಪೊಲೀಸ್​ ಆಯುಕ್ತರ ಕಚೇರಿಗೆ ಬಂದ ಮದನ್​ ಪತ್ನಿ ಕೃತಿಕಾ ವಿಚಾರಣೆ ಎದುರಿಸಿದ್ದಾಳೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಆಕೆ, ನನ್ನ ಗಂಡನ ಯೂಟ್ಯೂಬ್​ ಚಾನೆಲ್​ಗಳನ್ನು ನಿಷ್ಕ್ರಿಯಗೊಳಿಸಿರುವುದರಿಂದ ನಮ್ಮ ಜೀವನ ನಿರ್ವಹಣೆಯ ಮೇಲೆ ಹೊಡೆತ ಬಿದ್ದಿದೆ. ನಮ್ಮ ಬಳಿ ಯಾವುದೇ ಐಷಾರಾಮಿ ಕಾರಿಲ್ಲ. ಇರುವುದೊಂದೆ ಆಡಿ ಎ6 ಕಾರು ಎಂದು ಎಂದು ಪೊಲೀಸರಿಗೆ ಹೇಳಿಕೆ ನೀಡಿರುವುದಾಗಿ ತಿಳಿಸಿದ್ದಾರೆ.

    ಇದೀಗ ಕೃತಿಕಾ ಹೇಳಿದ ಮಾತುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ ಮಾಡಲಾಗುತ್ತಿದೆ. ಐಷಾರಾಮಿ ಕಾರಿಲ್ಲ ಬದಲಾಗಿ ಆಡಿ ಕಾರಿದೆ ಎಂದು ಹೇಳಿರುವುದು ನಗೆಪಾಟಿಲಿಗೆ ಕಾರಣವಾಗಿದೆ. ಆಡಿ ಕಾರು ಕೂಡ ಐಷಾರಾಮಿ ಕಾರುಗಳಲ್ಲಿ ಒಂದಾಗಿರುವುದರಿಂದ ಕೃತಿಕಾ ಹೇಳಿಕೆಯನ್ನು ಸಿಕ್ಕಾಪಟ್ಟೆ ಟ್ರೋಲ್​ ಮಾಡಲಾಗುತ್ತಿದೆ. (ಏಜೆನ್ಸೀಸ್​)

    ಸೆಕ್ಸ್​ ಬಗ್ಗೆ ಮಾತಾಡೋ ಹುಡ್ಗಿರ್ಗೆ 5 ಲಕ್ಷ! 3 ವರ್ಷದಲ್ಲಿ 75 ಕೋಟಿ ಗಳಿಸಿ ತಗ್ಲಾಕೊಂಡ ಯೂಟ್ಯೂಬರ್​ ದಂಪತಿ

    ಪಬ್​ಜಿ ಲೈವ್​ ಸ್ಟ್ರೀಮಿಂಗ್​ನಲ್ಲಿ ಅಶ್ಲೀಲತೆ: ಚೆನ್ನೈ ಮೂಲದ ಯೂಟ್ಯೂಬರ್​ ದಂಪತಿಯ ಬಂಧನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts