More

    ನೀವು ಮೋದಿ ಫೋಟೋ ಕೇಳಿದ್ರಲ್ಲ ಇಲ್ಲಿದೆ ನೋಡಿ… ವಿತ್ತ ಸಚಿವೆಯ ಬೇಡಿಕೆಗೆ ಕೆಸಿಆರ್​ ಪಕ್ಷದ ಪ್ರತಿಕ್ರಿಯೆ ಇದು!

    ಹೈದರಾಬಾದ್​: ಪಡಿತರ ಅಂಗಡಿಗಳಲ್ಲಿ ಪ್ರಧಾನಿ ಮೋದಿ ಫೋಟೋ ಅಳವಡಿಸಲು ಹೇಳುವ ಮೂಲಕ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಪ್ರಧಾನಿಯ ಗೌರವ ಕುಸಿಯುವಂತೆ ಮಾಡಿದ್ದಾರೆ ಎಂದು ತೆಲಂಗಾಣ ಆರೋಗ್ಯ ಸಚಿವ ಟಿ. ಹರೀಶ್​ ರಾವ್​ ಹೇಳಿದರು.

    ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ಉಚಿತ ಅಕ್ಕಿ ನೀಡುತ್ತಿದೆ ಎಂದು ನಿರ್ಮಲಾ ಅವರು ಹೇಳುವುದೇ ಆದರೆ, ದೇಶದ ಆರ್ಥಿಕತೆಗೆ ಕೊಡುಗೆ ನೀಡುತ್ತಿರುವ ಐದರಿಂದ ಆರು ರಾಜ್ಯಗಳಲ್ಲಿ ತೆಲಂಗಾಣವು ಕೂಡ ಒಂದಾಗಿದೆ. ಹಾಗಾದರೆ ನಮ್ಮ ಮುಖ್ಯಮಂತ್ರಿಗಳ ಫೋಟೋ ಇಲ್ಲಿ ಮತ್ತು ಬೇರೆ ರಾಜ್ಯಗಳಲ್ಲಿಯು ಇರಬೇಕೇ? ಎಂದು ಪ್ರಶ್ನಿಸುವ ಮೂಲಕ ತಿರುಗೇಟು ನೀಡಿದರು.

    ಕಾಮರೆಡ್ಡಿ ಜಿಲ್ಲೆಯ ಬಿರ್ಕೂರಿನಲ್ಲಿ ಜಿಲ್ಲಾಧಿಕಾರಿ ಜೊತೆ ನಿರ್ಮಲಾ ಸೀತಾರಾಮನ್​ ಅವರು ವಾಗ್ವಾದ ನಡೆಸಿದ ವಿಡಿಯೋ ಜಾಲತಾಣದಲ್ಲಿ ವೈರಲ್​ ಆದ ಬೆನ್ನಲ್ಲೇ ತೆಲಂಗಾಣ ಆರೋಗ್ಯ ಸಚಿವ ಟಿ. ಹರೀಶ್​ ರಾವ್​ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ತೆಲಂಗಾಣ ಸಿಎಂ ಕೆ ಚಂದ್ರಶೇಖರ್​ ರಾವ್​ ಪುತ್ರ ಹಾಗೂ ಸಚಿವ ಕೆ.ಟಿ. ರಾಮ ರಾವ್​ ಮಾತನಾಡಿ, ನಿರ್ಮಲಾ ಅವರ ಅಶಿಸ್ತಿನ ನಡವಳಿಕೆ ನೋಡಿ ನನಗೆ ಗಾಬರಿಯಾಯಿತು ಎಂದಿದ್ದಾರೆ.

    ಪ್ರಧಾನಿ ಫೋಟೋ ಇಡುವಂತೆ ನಿರ್ಮಲಾ ಅವರು ಒತ್ತಾಯಿಸಿದ ಬೆನ್ನಲ್ಲೇ ತೆಲಂಗಾಣ ಆಡಳಿತಾರೂಢ ಟಿಆರ್​ಎಸ್​ (ತೆಲಂಗಾಣ ರಾಷ್ಟ್ರ ಸಮಿತಿ) ಪಕ್ಷ ತನ್ನ ಟ್ವಿಟರ್​ ಖಾತೆಯಲ್ಲಿ ವಿಡಿಯೋ ಒಂದನ್ನು ಶೇರ್​ ಮಾಡಿಕೊಂಡಿದ್ದು, ಅದರಲ್ಲಿ ಎಲ್​ಪಿಜಿ ಸಿಲಿಂಡರ್​ಗಳ ಮೇಲೆ ಪ್ರಧಾನಿ ಮೋದಿ ಫೋಟೋ ಜೊತೆಗೆ ಸಿಲಿಂಡರ್​ ಬೆಲೆಯನ್ನು ನಮೂದಿಸಿದೆ. ಈ ಮೂಲಕ ಬೆಲೆ ಏರಿಕೆಯನ್ನು ವಿರೋಧಿಸುವ ಮೂಲಕ ನಿರ್ಮಲಾರಿಗೆ ತಿರುಗೇಟು ನೀಡಿದೆ.

    ವೈರಲ್​ ವಿಡಿಯೋ ವಿಚಾರಕ್ಕೆ ಬರುವುದಾದರೆ, ಸೀತಾರಾಮನ್​ ಅವರು ಕಾಮರೆಡ್ಡಿ ಜಿಲ್ಲಾಧಿಕಾರಿ ಜಿತೇಶ್​ ಪಾಟೀಲ್​ ಅವರನ್ನು ಪಡಿತರ ಅಂಗಡಿಗಳಲ್ಲಿ ಪ್ರಧಾನಿ ಮೋದಿ ಫೋಟೋ ಇಡುವಂತೆ ಒತ್ತಾಯಿಸಿದರು. ಒಂದು ಕೆಜಿ ಅಕ್ಕಿಗೆ 35 ರೂಪಾಯಿ ವೆಚ್ಚ ತಗಲುತ್ತದೆ. ಅದರಲ್ಲಿ ಕೇಂದ್ರ ಸರ್ಕಾರ 30 ರೂಪಾಯಿ ಭರಿಸಿದರೆ, ರಾಜ್ಯ ಸರ್ಕಾರ 4 ರೂ. ಮತ್ತು ಫಲಾನುಭವಿ 1 ರೂ. ಸಂಗ್ರಹಿಸಲಾಗುತ್ತದೆ. ಕೇಂದ್ರ ಸರ್ಕಾರವೇ ಹೆಚ್ಚಿಗೆ ಹಣ ನೀಡುವುದರಿಂದ ಪಡಿತರ ಅಂಗಡಿಗಳಲ್ಲಿ ಪ್ರಧಾನಿ ಅವರ ಫೋಟೋ ಅಳವಡಿಸಿ ಎಂದು ಕೇಳಿಕೊಂಡರು. ಅಲ್ಲದೆ, ಮೋದಿ ಫೋಟೋ ಇಲ್ಲದಿದ್ದಕ್ಕೆ ಕೋಪಗೊಂಡರು. ನಮ್ಮ ಕಡೆಯವರು ಬಂದು ಇಲ್ಲಿ ಪ್ರಧಾನಿ ಬ್ಯಾನರ್​ ಅಳವಡಿಸುತ್ತಾರೆ. ಅದನ್ನು ತೆಗೆಯದಂತೆ ನೀನು ನೋಡಿಕೊಳ್ಳಬೇಕು ಎಂದು ಹೇಳಿದರು.

    ವಿಡಿಯೋ ವೈರಲ್​ ಆಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಹರೀಶ್​ ರಾವ್​, ಒಟ್ಟಾರೆ ಕೇಂದ್ರ ಸರ್ಕಾರ 50 ರಿಂದ 55 ರಷ್ಟು ಸಹಾಯ ಮಾಡುತ್ತಿದೆ. ಉಳಿದ 45 ರಷ್ಟು ರಾಜ್ಯ ಸರ್ಕಾರವೇ ಭರಿಸುತ್ತಿದೆ. ಉಚಿತವಾಗಿ 10 ಕೆಜಿ ಅಕ್ಕಿ ನೀಡಲು ರಾಜ್ಯ ಸರ್ಕಾರ ಪ್ರತಿ ತಿಂಗಳು 3,610 ಕೋಟಿ ರೂಪಾಯಿ ವ್ಯಯಿಸುತ್ತಿದೆ ಎಂದು ಮೇದಕ್​ ಜಿಲ್ಲೆಯ ತುಪ್ರಾನ್​ನಲ್ಲಿ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದರು. (ಏಜೆನ್ಸೀಸ್​)

    VIDEO| ಡಾನ್ಸ್​ ಮಾಡುತ್ತಲೇ ಪುಟ್ಟ ಬಾಲಕನ ಮೇಲೆ ಬಿದ್ದ ದಡೂತಿ ಮಹಿಳೆ! ಮುಂದೇನಾಯ್ತು ನೀವೇ ನೋಡಿ…

    ನಾನೇನು ರೇಪ್​ ಮಾಡಿದ್ನಾ? ಲಿಂಬಾವಳಿ ವಿವಾದ, ಬಿಜೆಪಿ ವಿರುದ್ಧ ಸರಣಿ ಟ್ವೀಟ್​ ಮೂಲಕ ಹರಿಹಾಯ್ದ ಕಾಂಗ್ರೆಸ್​

    ಜೀ5 ಒಟಿಟಿಯಲ್ಲಿ ಹೊಸ ದಾಖಲೆ ಬರೆದ ವಿಕ್ರಾಂತ್​ ರೋಣ: ಒಂದೇ ದಿನದಲ್ಲಿ 50 ಕೋಟಿ ನಿಮಿಷಗಳ ವೀಕ್ಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts