More

    ಸತತ ವೈಫಲ್ಯದ ಬಳಿಕ ಆರ್​ಸಿಬಿಯಲ್ಲಿನ ತನ್ನ ಯಶಸ್ಸಿನ ಗುಟ್ಟನ್ನು ರಟ್ಟು ಮಾಡಿದ ಗ್ಲೇನ್​ ಮ್ಯಾಕ್ಸ್​ವೆಲ್​!

    ನವದೆಹಲಿ: ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡದ ಆಲ್​ರೌಂಡರ್​ ಆಟಗಾರ ಗ್ಲೇನ್​ ಮ್ಯಾಕ್ಸ್​ವೆಲ್​ ತಂಡದಲ್ಲಿ ತಮ್ಮ ಪಾತ್ರವನ್ನು ಬಹಿರಂಗಪಡಿಸಿದ್ದು, ಆರ್​ಸಿಬಿಯನ್ನು ಮನಸೋ ಇಚ್ಛೆ ಕೊಂಡಾಡಿದ್ದಾರೆ.

    ಕಳೆದ ಐಪಿಎಲ್​ ಸೀಸನ್​ನಲ್ಲಿ ಪಂಜಾಬ್​ ಪರ ಆಡಿದ ಮ್ಯಾಕ್ಸ್​ವೆಲ್​ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಹೀಗಾಗಿ ಅವರನ್ನು ತಂಡದಿಂದ ಕೈಬಿಡಬೇಕಾಯಿತು. ನಂತರ ಆರ್​ಸಿಬಿ ಹರಾಜಿನಲ್ಲಿ ಮ್ಯಾಕ್ಸ್​ವೆಲ್​ರನ್ನು ದಾಖಲೆಯ ಮೊತ್ತಕ್ಕೆ ಖರೀದಿಸಿದಾಗ ಎಲ್ಲರೂ ಹುಬ್ಬೇರಿಸಿದ್ದರು. ಆದರೆ, ಪ್ರಸಕ್ತ ಐಪಿಎಲ್​ನಲ್ಲಿ ಮ್ಯಾಕ್ಸಿ ಎದುರಿಸಿರುವ ಎರಡೂ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ನ್ಯಾಯ ಒದಗಿಸುತ್ತಿದ್ದಾರೆ.

    ನಿನ್ನೆ ನಡೆದ ಪಂದ್ಯದಲ್ಲಿ ಸಂಕಷ್ಟದ ಸಮಯದಲ್ಲಿ ಉತ್ತಮ ಆಟವಾಡಿದ ಮ್ಯಾಕ್ಸಿ 41 ಎಸೆಗಳಲ್ಲಿ 59 ರನ್​ ಕಲೆಹಾಕಿದರು. ಈ ಮೂಲಕ ಸನ್​ ರೈಸರ್ಸ್​ ಹೈದರಾಬಾದ್​ ಎದುರು ಆರ್​ಸಿಬಿ 6 ರನ್​ಗಳ ಕಡಿಮೆ ಅಂತರದಿಂದ ಗೆಲುವು ದಾಖಲಿಸಲು ಸಾಧ್ಯವಾಯಿತು.

    ಇದನ್ನೂ ಓದಿರಿ: ಕತ್ತೆ ಹೊತ್ತು ನಡೆಯುತ್ತಿರುವ ಯೋಧ: ವೈರಲ್​​ ಫೋಟೋ ಹಿಂದಿನ ನಿಜವಾದ ಕತೆ ಮನಕಲಕುವಂತಿದೆ!

    ತಮ್ಮ ಯಶಸ್ಸಿನ ಬಗ್ಗೆ ಇದೇ ವೇಳೆ ಮಾತನಾಡಿರುವ ಮ್ಯಾಕ್ಸಿ, ಪ್ರಸ್ತುತ ತಂಡದಲ್ಲಿ ತಾನು ನಿರ್ವಹಿಸಬೇಕಾದ ಪಾತ್ರದ ಬಗ್ಗೆ ತಂಡದ ನಾಯಕ, ತರಬೇತುದಾರ ಮತ್ತು ಮ್ಯಾನೇಜ್​ಮೆಂಟ್​ ಕೇಳಿರುವುದು ನನಗೆ ಪರಿಪೂರ್ಣವಾಗಿ ಹೊಂದಿಕೊಂಡಿದೆ ಎಂದು ಮ್ಯಾಕ್ಸಿ ಹೇಳಿದ್ದಾರೆ.

    ಆರ್​ಸಿಬಿಯಲ್ಲಿ ಉತ್ತಮ ಆರಂಭ ಸಿಕ್ಕಿದೆ. ಅವರು ನನಗೆ ನಿರ್ಧಿಷ್ಟ ಪಾತ್ರವನ್ನು ನೀಡಿದ್ದಾರೆ. ಹೊಂದಿಕೊಳ್ಳಲು ಸಮಯ ನೀಡುವುದರ ಜತೆಗೆ ಆಟವನ್ನು ನನ್ನಿಷ್ಟದಂತೆ ಮುಕ್ತವಾಗಿ ಆಡಲು ಬಿಟ್ಟಿದ್ದಾರೆ. ನಮ್ಮ ಆಸಿಸ್​ ತಂಡದಲ್ಲೂ ನನ್ನ ಪಾತ್ರ ಇದೇ ಆಗಿದೆ ಎಂದು ತಿಳಿಸಿದ್ದಾರೆ.

    ನನ್ನನ್ನು ಕಾರ್ಯದಲ್ಲಿರಿಸುವುದರಲ್ಲಿ ಕೊಹ್ಲಿ ಉತ್ತಮ. ಪರಿಸ್ಥಿತಿಗೆ ಹೊಂದಿಕೊಳ್ಳಲು ಅವಕಾಶ ನೀಡುತ್ತಿದ್ದಾರೆ. ತಂಡದಲ್ಲಿ ನನ್ನ ಜತೆಯಾಗಿರುವವರು ಸಹ ನನಗೆ ತುಂಬಾ ಹೊಂದಿಕೊಳ್ಳುತ್ತಾರೆ. ಇದು ನನ್ನ ನಾಲ್ಕನೇ ಐಪಿಎಲ್​ ತಂಡವಾಗಿದ್ದು, ನನ್ನ ಪ್ರಭಾವ ಬೀರಲು ನನ್ನ ಮೇಲೆ ಒತ್ತಡವಿದೆ ಎಂದು ಮ್ಯಾಕ್ಸಿ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿರಿ: ವೈದ್ಯರಿಗೆ ಕಡ್ಡಾಯ ಗ್ರಾಮೀಣ ಸೇವೆ: ನೋಟಿಸ್ ಜಾರಿಗೊಳಿಸಿದ ಹೈಕೋರ್ಟ್​

    ಪಂದ್ಯದ ವಿಚಾರಕ್ಕೆ ಬಂದರೆ, ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಆರ್‌ಸಿಬಿ ತಂಡ ಸ್ಫೋಟಕ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ (59 ರನ್, 41 ಎಸೆತ, 5 ಬೌಂಡರಿ, 3 ಸಿಕ್ಸರ್) ದಿಟ್ಟ ಹೋರಾಟದ ಬಲದಿಂದ 8 ವಿಕೆಟ್‌ಗೆ 149 ರನ್ ಪೇರಿಸಿತು. ಪ್ರತಿಯಾಗಿ ಸನ್‌ರೈಸರ್ಸ್‌ ತಂಡ ನಾಯಕ ಡೇವಿಡ್ ವಾರ್ನರ್ (54 ರನ್, 37 ಎಸೆತ, 7 ಬೌಂಡರಿ, 1 ಸಿಕ್ಸರ್) ಮತ್ತು ಕನ್ನಡಿಗ ಮನೀಷ್ ಪಾಂಡೆ (38 ರನ್, 39 ಎಸೆತ, 2 ಬೌಂಡರಿ, 2 ಸಿಕ್ಸರ್) ಆಸರೆಯಲ್ಲಿ ಜಯದತ್ತ ಮುನ್ನಡೆದರೂ, ಅಂತಿಮವಾಗಿ 9 ವಿಕೆಟ್‌ಗೆ 143 ರನ್ ಗಳಿಸಲಷ್ಟೇ ಶಕ್ತವಾಯಿತು. (ಏಜೆನ್ಸೀಸ್​)

    ಮಿಂಚಿದ ಮ್ಯಾಕ್ಸ್‌ವೆಲ್, ಶಾಬಾಜ್ ಅಹ್ಮದ್; ಆರ್‌ಸಿಬಿಗೆ ಸತತ 2ನೇ ಜಯ

    ಇಂದು ಯುವ ನಾಯಕರ ಮುಖಾಮುಖಿ; ರಾಯಲ್ಸ್‌ಗೆ ಕ್ಯಾಪಿಟಲ್ಸ್ ಸವಾಲು

    ಐಪಿಎಲ್ ಮೊದಲ ವಾರದಲ್ಲಿ ದೇಶೀಯ ಕ್ರಿಕೆಟಿಗರ ದರ್ಬಾರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts