More

    ಕಿಚ್ಚನ ಹುಟ್ಟುಹಬ್ಬಕ್ಕೆ ಚಿನ್ನದ ಹುಡುಗ ನೀರಜ್​ ಚೋಪ್ರಾರಿಂದ ಸರ್ಪ್ರೈಸ್: ಟ್ವಿಟರ್​ ಟ್ರೆಂಡಿಂಗ್​ನಲ್ಲಿ ವಿಕ್ರಾಂತ್​ ರೋಣ

    ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಹುಟ್ಟುಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಳೆ (ಸೆ.2) ಕಿಚ್ಚ ಸುದೀಪ್​ 50ರ ವಸಂತಕ್ಕೆ ಕಾಲಿಡಲಿದ್ದು, ಬರ್ತಡೇಗೆ ಬಹಳಷ್ಟು ಸರ್ಪ್ರೈಸ್​ಗಳು ಅಭಿಮಾನಿಗಳಿಗಾಗಿ ಕಾದಿವೆ. ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ನಾಳೆ ಶುಭಾಶಯಗಳ ಸುರಿಮಳೆಯೇ ಹರಿದುಬರಲಿದ್ದು, ಒಂದು ದಿನಕ್ಕೂ ಮುಂಚೆಯೇ ಚಿನ್ನದ ಹುಡುಗ ನೀರಜ್​ ಚೋಪ್ರಾ, ಸುದೀಪ್​ಗೆ ಹುಟ್ಟುಹಬ್ಬದ ಶುಭಕೋರಿದ್ದಾರೆ.

    ಟೋಕಿಯೋ ಒಲಿಂಪಿಕ್ಸ್​ನಲ್ಲಿ ಜಾವಲಿನ್​ ಎಸೆತದಲ್ಲಿ ಚಿನ್ನದ ಪದಕ ಗೆದ್ದು ಒಲಿಂಪಿಕ್ಸ್​ ಇತಿಹಾಸದಲ್ಲೇ ಅಥ್ಲೆಟಿಕ್ಸ್​ ವಿಭಾಗದಲ್ಲಿ ಭಾರತಕ್ಕೆ ಮೊಟ್ಟಮೊದಲ ಬಾರಿಗೆ ಸ್ವರ್ಣ ಪದಕವನ್ನು ತಂದು ಕೊಡುವ ಮೂಲಕ ಐತಿಹಾಸಿಕ ಸಾಧನೆ ಮಾಡಿರುವ ಚಿನ್ನದ ಹುಡುಗನೆಂದೇ ಖ್ಯಾತಿಯಾಗಿರುವ ಹರಿಯಾಣ ಮೂಲದ ನೀರಜ್​ ಚೋಪ್ರಾ, ನಟ ಸುದೀಪ್​ ಅವರಿಗೆ ಹುಟ್ಟುಹಬ್ಬದ ಶುಭಕೋರಿದ್ದಾರೆ.

    ನೀರಜ್​ ವಿಶ್​ ಮಾಡಿದ ಬೆನ್ನಲ್ಲೇ ಟ್ವಿಟರ್​ನಲ್ಲಿ ವಿಕ್ರಾಂತ್​ ರೋಣ ಚಿತ್ರ ಟ್ರೆಂಡ್​ನಲ್ಲಿದೆ. ನೀರಜ್​ ವಿಶ್​​ ಮಾಡಿರುವುದು ಸುದೀಪ್​ ಅಭಿಮಾನಿಗಳಿಗೆ ಬಿಗ್​ ಸರ್ಪ್ರೈಸ್​ ಆಗಿದ್ದು, ಹೆಚ್ಚು ಹೆಚ್ಚು ರೀಟ್ವೀಟ್​ ಮತ್ತು ಲೈಕ್ಸ್​ಗಳು ಸುರಿಮಳೆ ಹರಿದು ಬರುತ್ತಿದೆ. ಹೀಗಾಗಿ ಟ್ವಿಟರ್​ನಲ್ಲಿ ವಿಕ್ರಾಂತ್​ ರೋಣನ ಆರ್ಭಟ ಜೋರಾಗಿದೆ. ಇನ್ನು ನಾಳೆ ಕಿಚ್ಚನ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಟ್ವಿಟರ್​ನಲ್ಲಿ ನಾಳೆಯ ಮಟ್ಟಿಗೆ ಕಿಚ್ಚನ ಗುಣಗಾಣವೇ ಇರಲಿದೆ.

    ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ವಿಕ್ರಾಂತ್​ ರೋಣ ಚಿತ್ರತಂಡ ಶೇರ್​ ಮಾಡಿಕೊಂಡಿದ್ದು, ಕಿಚ್ಚನಿಗೆ ಹುಟ್ಟುಹಬ್ಬ ಶುಭಕೋರಿರುವ ನೀರಜ್​, ಮುಂಬರುವ ನಿಮ್ಮ ಚಿತ್ರಗಳಿಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಿಚ್ಚ, ನಿಜಕ್ಕೂ ಇದು ಸ್ವೀಟೆಸ್ಟ್​ ಶುಭಾಶಯ, ಧನ್ಯವಾದಗಳು ಸಹೋದರ. ನಿಮ್ಮ ಮೇಲೆ ನಮ್ಮ ಆಶೀರ್ವಾದ ಸದಾ ಇರುತ್ತದೆ. ಮತ್ತಷ್ಟು ಗುರಿಯನ್ನು ತಲುಪಿ ಎಂದು ಕಿಚ್ಚ ಹಾರೈಸಿದ್ದಾರೆ.

    ಇನ್ನು ಸುದೀಪ್​ ಅವರ ಬರ್ತಡೇ ಬಿಗ್​ ಸರ್ಪ್ರೈಸ್​ ನೀಡಲು ಚಿತ್ರತಂಡ ಭಾರಿ ಸಿದ್ಧತೆ ಮಾಡಿಕೊಂಡಿದೆ. ಕಿಚ್ಚನ ಬರ್ತಡೇಗೆ ವಿಕ್ರಾಂತ್​ ರೋಣ ಚಿತ್ರತಂಡದ ಕಡೆಯಿಂದ ಡೆಡ್​ಮ್ಯಾನ್ಸ್​ ಥೀಮ್​ ಸಾಂಗ್​ ಹೊರಬೀಳಲಿದೆ. ಸೆಪ್ಟೆಂಬರ್​ 2ರ ಬೆಳಗ್ಗೆ 11.5ಕ್ಕೆ ಟಿ ಸೀರೀಸ್​ ಯೂಟ್ಯೂಬ್​ ಚಾನೆಲ್​ನಲ್ಲಿ ಬಿಡುಗಡೆ ಆಗಲಿದೆ. ಅಲ್ಲದೆ, ಬಿಗ್​ಬಾಸ್​ ಸ್ಪರ್ಧಿ ಹಾಗೂ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ಬರೆದಿರುವ ವಿಶೇಷ ಹಾಡು ಕೂಡ ನಾಳೆ ಬಿಡುಗಡೆಯಾಗಲಿದೆ.​ (ದಿಗ್ವಿಜಯ ನ್ಯೂಸ್​)

    ಒಲಿಂಪಿಕ್ಸ್​: ಚಿನ್ನದ ಹುಡುಗ ನೀರಜ್​ ಚೋಪ್ರಾಗೆ ಅಭಿನಂದನೆಗಳ ಸುರಿಮಳೆ: 6 ಕೋಟಿ ರೂ. ಬಹುಮಾನ ಘೋಷಿಸಿದ ಹರಿಯಾಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts