More

    ಒಂದೇ ಸಮಯದಲ್ಲಿ 2 ಬಾರಿ ಬೈಕ್​ ಸವಾರನ ಜೀವ ಉಳಿಸಿದ ಹೆಲ್ಮೆಟ್! ವಿಡಿಯೋ ನೋಡಿದ್ರೆ ನೀವೆಂದು ಹೆಲ್ಮೆಟ್ ಮರೆಯೊಲ್ಲ

    ನವದೆಹಲಿ: ದೇಶದ ಕೆಲವು ಜನರಿಗೆ ಈಗಲೂ ಹೆಲ್ಮೆಟ್ ಮಹತ್ವದ ಬಗ್ಗೆ ತಿಳಿದಿಲ್ಲ. ಪೊಲೀಸರ​ ದಂಡಾಸ್ತ್ರದಿಂದ ತಪ್ಪಿಸಿಕೊಳ್ಳಲು ಬಲವಂತವಾಗಿ ಹೆಲ್ಮೆಟ್​ ಧರಿಸುವವರು ಇದ್ದಾರೆ. ಇನ್ನು ಕೆಲವರು ಕೇಶ ಶೈಲಿ ಹಾಳಾಗುತ್ತದೆ ಅಂತಾ ಹೆಲ್ಮೆಟ್​ ನಿರ್ಲಕ್ಷ್ಯ ಮಾಡುವವರನ್ನು ನೋಡಿದ್ದೇವೆ. ಆದರೆ, ಹೆಲ್ಮೆಟ್​ ನಮ್ಮ ಜೀವ ಉಳಿಸುವ ಸಾಧನ ಎಂಬುದು ಇನ್ನು ಕೆಲವು ಮಂದಿಗೆ ತಿಳಿದೇ ಇಲ್ಲ. ಆದರೆ, ಈ ಪ್ರಸ್ತುತ ವೈರಲ್​ ಆಗಿರುವ ವಿಡಿಯೋ ನೋಡಿದರೆ, ಖಂಡಿತವಾಗಿಯೂ ಹೆಲ್ಮೆಟ್​ ಮಹತ್ವ ಏನೆಂಬುದನ್ನು ತಿಳಿದೇ ತಿಳಿಯುತ್ತದೆ.

    ಹೌದು, ಹೆಲ್ಮೆಟ್​ ಧರಿಸಿದ್ದರಿಂದ ಬೈಕ್​ ಸವಾರನ ಪ್ರಾಣ ಒಂದೇ ಸಮಯದಲ್ಲಿ ಎರಡು ಬಾರಿ ಉಳಿದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಹೆಲ್ಮೆಟ್​ ಅಭಿಯಾನದ ಭಾಗವಾಗಿ ದೆಹಲಿ ಪೊಲೀಸರು ತಮ್ಮ ಟ್ವಿಟರ್​ನಲ್ಲಿ ಶೇರ್ ಮಾಡುವ ಮೂಲಕ ಹೆಲ್ಮೆಟ್​ ಮಹತ್ವವನ್ನು ಸಾರಿದ್ದಾರೆ. ಸದ್ಯ ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗಿದೆ.

    ವಿಡಿಯೋದಲ್ಲಿ ಏನಿದೆ?
    ವೇಗವಾಗಿ ಬರುವ ಬೈಕ್​ಗೆ ಕಾರೊಂದು ಅಡ್ಡಿಯಾದಾಗ ವಿಚಲಿತಗೊಂಡು ಬೈಕ್​ ನಿಯಂತ್ರಣ ಕಳೆದುಕೊಳ್ಳುವ ಸವಾರ, ಬೈಕ್​ ಸಮೇತ ಕೆಳಗೆ ಬೀಳುತ್ತಾನೆ. ಬಿದ್ದ ರಭಸಕ್ಕೆ ಎರಡ್ಮೂರು ಮೀಟರ್​ಗಳಷ್ಟು ಬೈಕ್​ ಸಮೇತ ಸವಾರ ಉಜ್ಜಿಕೊಂಡು ಹೋಗುತ್ತಾನೆ. ಈ ವೇಳೆ ಅಲ್ಲಿಯೇ ಇದ್ದ ವಿದ್ಯುತ್​ ಕಂಬಕ್ಕೆ ಬೈಕ್​ ಡಿಕ್ಕಿ ಹೊಡೆದ ಪರಿಣಾಮ, ಕಂಬ ಕುಸಿದು, ನೇರವಾಗಿ ಬೈಕ್​ ಸವಾರನ ಮೇಲೆ ಬೀಳುತ್ತದೆ. ಎದ್ದು ನಿಂತಿದ್ದ ಸವಾರ ಕಂಬ ಬಿದ್ದ ರಭಸಕ್ಕೆ ಮತ್ತೆ ಕುಸಿದು ಬಿದ್ದು, ಮತ್ತೆ ಏಳುತ್ತಾನೆ.

    ಅದೃಷ್ಟವಶಾತ್​ ಬೈಕ್​ ಸವಾರ ಹೆಲ್ಮೆಟ್​ ಧರಿಸಿದ್ದರಿಂದ ಒಂದೇ ಸಮಯದಲ್ಲಿ ಸಂಭವಿಸಿದ ಎರಡು ಅಪಘಾತದಿಂದ ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದಿದ್ದಾನೆ. ಹೆಲ್ಮೆಟ್​ ಇಲ್ಲದೇ ಹೋಗಿದ್ದರೆ, ಬೈಕ್​ ಸವಾರ ಸಾಯುವ ಸಾಧ್ಯತೆ ಇತ್ತು. ಇದೀಗ ಈ ವಿಡಿಯೋವನ್ನು ಹೆಲ್ಮೆಟ್​ ಬಗ್ಗೆ ಅರಿವು ಮೂಡಿಸಲೆಂದು ದೆಹಲಿ ಪೊಲೀಸರು ಟ್ವಿಟರ್​ನಲ್ಲಿ ಶೇರ್​ ಮಾಡಿದ್ದು, ಹೆಲ್ಮೆಟ್​ ಧರಿಸುವುದರಿಂದ ಒಂದಲ್ಲ, ಎರಡಲ್ಲ ಅನೇಕ ಬಾರಿ ಜೀವ ಉಳಿಸುತ್ತದೆ ಎಂದು ಅಡಿಬರಹ ಬರೆದುಕೊಂಡಿದ್ದಾರೆ.

    ನಿನ್ನೆಯಷ್ಟೇ ಶೇರ್​ ಆಗಿರುವ ವಿಡಿಯೋ 1 ಮಿಲಿಯನ್​ಗೂ ಅಧಿಕ ವೀಕ್ಷಣೆ ಕಂಡಿದೆ. 26 ಸಾವಿರಕ್ಕೂ ಅಧಿಕ ಲೈಕ್ಸ್​ ಮತ್ತು 5 ಸಾವಿರಕ್ಕೂ ಅಧಿಕ ರೀಟ್ವೀಟ್​ ಮಾಡಲಾಗಿದೆ. ವಿಡಿಯೋ ನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.​

    ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪೂರ್ಣ ಮುಖವನ್ನು ಮುಚ್ಚುವ ಹೆಲ್ಮೆಟ್‌ಗಳನ್ನು ಸರಿಯಾಗಿ ಧರಿಸಿದರೆ, ಮಾರಣಾಂತಿಕ ಗಾಯಗಳನ್ನು ಶೇಕಡಾ 64 ರಷ್ಟು ಮತ್ತು ಮೆದುಳಿನ ಗಾಯಗಳನ್ನು ಶೇಕಡಾ 74 ರಷ್ಟು ಕಡಿಮೆ ಮಾಡಬಹುದು ಎಂದು ಹೇಳಿದೆ. (ಏಜೆನ್ಸೀಸ್​)

    ರೈಲಿನ ಕಿಟಕಿಯಿಂದ ಕೈ ತೂರಿ ಮೊಬೈಲ್​ ದೋಚಲು ಯತ್ನಿಸಿದ ಖದೀಮನಿಗೆ 10 ಕಿ.ಮೀ ನರಕ ದರ್ಶನ!

    ಮಳೆಗೆ ಹೆದರಿ ಮನೆಯಿಂದ ಹೊರಬಂದರೂ ಬಿಡಲಿಲ್ಲ ಜವರಾಯ: ಆಶ್ರಯ ಪಡೆದ ಕಟ್ಟಡವೇ ಕುಸಿದು 10 ಸಾವು!

    ರಸ್ತೆ ದಾಟುವಾಗಲೇ 130 ಕಿ.ಮೀ ವೇಗದಲ್ಲಿ ಬಂದ ಕಾರು ಡಿಕ್ಕಿ: ಇಬ್ಬರು ಮಹಿಳಾ ಟೆಕ್ಕಿಗಳು ದುರ್ಮರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts