ರೈಲಿನ ಕಿಟಕಿಯಿಂದ ಕೈ ತೂರಿ ಮೊಬೈಲ್​ ದೋಚಲು ಯತ್ನಿಸಿದ ಖದೀಮನಿಗೆ 10 ಕಿ.ಮೀ ನರಕ ದರ್ಶನ!

ಪಟನಾ: ರೈಲಿನ ಕಿಟಕಿಯಿಂದ ಪ್ರಯಾಣಿಕರೊಬ್ಬರ ಮೊಬೈಲ್​ ಫೋನ್​ ಕದಿಯಲು ಯತ್ನಿಸಿದ ಖದೀಮನೊಬ್ಬ ಪ್ರಯಾಣಿಕರ ಕೈಗೆ ತ್ರಿಶಂಕು ಸ್ಥಿತಿಯಲ್ಲಿ ಸಿಕ್ಕಿಬಿದ್ದು, ನರಕಯಾತನೆ ಅನುಭವಿಸಿದ ಘಟನೆ ಬಿಹಾರದಲ್ಲಿ ನಡೆದಿದೆ. ಸೆ.14ರಂದು ನಡೆದಿರುವ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಬೆಗುಸರೈನಿಂದ ಖಗರಿಯಾ ಕಡೆಗೆ ಹೊರಟ್ಟಿದ್ದ ರೈಲು, ಸಾಹೇಬ್​ಪುರದ ಕಮಲ್​ ಸ್ಟೇಷನ್​ನಲ್ಲಿ ನಿಲ್ಲಿಸಿದ್ದಾಗ, ಖದೀಮನೊಬ್ಬ ಕಿಟಕಿಯಿಂದ ಪ್ರಯಾಣಿಕರೊಬ್ಬರ ಮೊಬೈಲ್​ ಫೋನ್​ ಕದಿಯಲು ಯತ್ನಿಸಿದ್ದಾನೆ. ಆದರೆ, ತಕ್ಷಣ ಎಚ್ಚರಗೊಂಡ ಪ್ರಯಾಣಿಕ, ಕಿಟಕಿಯಿಂದ ರೈಲಿನ ಒಳಗೆ ತೂರಿದ್ದ ಖದೀಮ ಕೈಗಳನ್ನು ಹಿಡಿದುಕೊಂಡಿದ್ದಾರೆ. … Continue reading ರೈಲಿನ ಕಿಟಕಿಯಿಂದ ಕೈ ತೂರಿ ಮೊಬೈಲ್​ ದೋಚಲು ಯತ್ನಿಸಿದ ಖದೀಮನಿಗೆ 10 ಕಿ.ಮೀ ನರಕ ದರ್ಶನ!