More

    ಗಂಡನ ವಿರುದ್ಧ ಗಂಭೀರ ಆರೋಪ ಮಾಡಿ ಮತ್ತೊಂದು ದೂರು ದಾಖಲಿಸಿದ ಐಪಿಎಸ್​ ಅಧಿಕಾರಿ ವರ್ತಿಕಾ ಕಟಿಯಾರ್

    ಬೆಂಗಳೂರು: ಐಪಿಎಸ್​-ಐಎಫ್​ಎಸ್​ ಅಧಿಕಾರಿ ದಂಪತಿ ನಡುವೆ ಕಾನೂನು ಸಮರ ಮುಂದುವರಿದಿದ್ದು, ಪತಿಯ ವಿರುದ್ಧ ಐಪಿಎಸ್​ ಅಧಿಕಾರಿ ವರ್ತಿಕಾ ಕಟಿಯಾರ್​ ಗಂಭೀರ ಆರೋಪ ಮಾಡಿದ್ದಾರೆ.

    ಪತಿ ಹಾಗೂ ಐಎಫ್ಎಸ್ ಅಧಿಕಾರಿ ನಿತೀನ್ ಸುಭಾಶ್ ಲೋಲಾ ವಿರುದ್ಧ ಆ್ಯಸಿಡ್​ ದಾಳಿ ಮತ್ತು ಜೀವ ಬೆದರಿಕೆಯ ಗಂಭೀರ ಆರೋಪವನ್ನು ಪತ್ನಿ ವರ್ತಿಕಾ ಮಾಡಿದ್ದಾರೆ. ಸದ್ಯ ವರ್ತಿಕಾ ಅವರು ನಗರದ ಸಂಶೋಧನೆ ಹಾಗೂ ತರಬೇತಿ ಕೇಂದ್ರದ ಡಿಸಿಪಿ ಆಗಿದ್ದಾರೆ.

    ಕಳೆದ ಮೇ 28ರಂದು ವಾಟ್ಸ್​ಆ್ಯಪ್​ ಗ್ರೂಪ್ ಕಾಲ್​ನಲ್ಲಿ ಆ್ಯಸಿಡ್ ಹಾಕುವುದಾಗಿ ಬೆದರಿಸಿದ್ದಾರೆ. ಅಲ್ಲದೆ, ಪ್ರಕರಣ ಹಿಂಪಡೆಯುವಂತೆ ಒತ್ತಡ ಹೇರಿದ್ದಾರೆ. ಮೇ 29ರಂದು ಲಾಕ್​ಡೌನ್ ಆದೇಶ ಉಲ್ಲಂಘಿಸಿ ಅನಧಿಕೃತವಾಗಿ ಬೆಂಗಳೂರಿನ ಕಚೇರಿಗೆ ಆಗಮಿಸಿ, ದೈಹಿಕವಾಗಿ ಹಲ್ಲೆ ಮಾಡುವುದಕ್ಕೆ‌ ಸಂಚು ರೂಪಿಸಿದ್ದಾರೆ. ಪೋಷಕರಿಗೆ ಕರೆ ಮಾಡಿ ಮನೆ ವಿಳಾಸ ತಿಳಿಸುವಂತೆ ನಿತಿನ್​ ಒತ್ತಾಯ ಮಾಡಿದ್ದಾರೆಂದು ಆರೋಪಿಸಿ, ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ಕೆಲ ತಿಂಗಳ ಹಿಂದೆ ಕೌಟುಂಬಿಕ ಕಲಹ ಹಿನ್ನೆಲೆ ದಂಪತಿ ದೂರವಾಗಿದ್ದರು.‌‌ ಇದಾದ ಬಳಿಕ ವರದಕ್ಷಿಣೆ ಕಿರುಕುಳ ಆರೋಪ ಮಾಡಿ ಗಂಡನ ವಿರುದ್ಧ ಫೆಬ್ರುವರಿಯಲ್ಲಿ ಕಬ್ಬನ್ ಪಾರ್ಕ್‌ ಪೊಲೀಸ್ ಠಾಣೆಗೆ ವರ್ತಿಕಾ ದೂರು ನೀಡಿದ್ದರು. ಈ ಪ್ರಕರಣ ದೆಹಲಿ ಪೊಲೀಸರಿಗೆ ಹಸ್ತಾಂತರವಾಗಿತ್ತು.

    ಈ ನಡುವೆ ನಿತಿನ್​, ಮಗು ನೋಡಲು ಬಿಡುತ್ತಿಲ್ಲ ಎಂದು ರಾಷ್ಟ್ರೀಯ ಮಕ್ಕಳ‌ ರಕ್ಷಣಾ ಆಯೋಗ‌ದ ಮೊರೆ ಹೋಗಿದ್ದರು. ಪ್ರಾಥಮಿಕ ವಿಚಾರಣೆ ನಡೆಸಿದ ಆಯೋಗ ಡಿಜಿಪಿ‌‌‌ ಪ್ರವೀಣ್ ಸೂದ್​ಗೆ ವರ್ಟಿಕಾ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಶಿಫಾರಸ್ಸು ಮಾಡಿತ್ತು.‌ ಈ ಬೆಳವಣಿಗೆ ಬೆನ್ನಲ್ಲೇ ಗಂಡನ ವಿರುದ್ಧ ಇದೀಗ ವರ್ತಿಕಾ ಮತ್ತೊಂದು ದೂರು ನೀಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ಮನೆ ಹೊರಗಡೆ ನಿಂತಿದ್ದ ಯುವತಿ ಮೇಲೆರಗಿದ ನೆರೆಮನೆಯಾತ: ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ

    ದಶಕದಲ್ಲಿ ಶೇಕಡ 28 ಮಾರುಕಟ್ಟೆ ಪಾಲು ಹೆಚ್ಚಳ; ಭಾರತೀಯ ಐಟಿ ಕಂಪನಿಗಳ ಸಾಧನೆ

    18 ಪುಟಗಳ ಸುದೀರ್ಘ ಪತ್ರಿಕಾ ಪ್ರಕಟಣೆ ಹೊರಡಿಸಿ ರೋಹಿಣಿ ಸಿಂಧೂರಿ ಆರೋಪಕ್ಕೆ ಶಿಲ್ಪಾನಾಗ್​ ತಿರುಗೇಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts