More

    ಕುಮಟಾದಲ್ಲಿ ಬಿಳಿ ಹೆಬ್ಬಾವು ಪತ್ತೆ! ಅಪರೂಪದ ಅತಿಥಿಯನ್ನು ರಕ್ಷಿಸಿ ಕಾಡಿಗೆ ಬಿಟ್ಟ ಉರಗ ಪ್ರೇಮಿ ಪವನ್ ನಾಯ್ಕ

    ಉತ್ತರಕನ್ನಡ: ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ಅಪರೂಪದ ಬಿಳಿ ಹೆಬ್ಬಾವು ಪತ್ತೆಯಾಗಿದ್ದು, ಉರಗ ಪ್ರೇಮಿ ಪವನ್ ನಾಯ್ಕ ಅವರು ರಕ್ಷಣೆ ಮಾಡಿ, ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬಂದಿದ್ದಾರೆ.

    ಕುಮಟಾ ತಾಲೂಕಿನ ಮಿರ್ಜಾನಿನ ರಾಮನಗರದಲ್ಲಿ ಬಿಳಿ ಹೆಬ್ಬಾವು ಪತ್ತೆಯಾಗಿದೆ. ಸುಬ್ರಹ್ಮಣ್ಯ ನಾಯ್ಕ ಅವರ ಮನೆ ಬಳಿ ಅಪರೂಪದ ಅತಿಥಿ ಆಗಮನವಾಗಿತ್ತು. ಅದನ್ನು ನೋಡಿ ಅಲ್ಲಿನ ಜನರು ಭಯಭೀತಗೊಂಡಿದ್ದರು.

    ಕುಮಟಾದಲ್ಲಿ ಬಿಳಿ ಹೆಬ್ಬಾವು ಪತ್ತೆ! ಅಪರೂಪದ ಅತಿಥಿಯನ್ನು ರಕ್ಷಿಸಿ ಕಾಡಿಗೆ ಬಿಟ್ಟ ಉರಗ ಪ್ರೇಮಿ ಪವನ್ ನಾಯ್ಕ

    ಹಾವು ಇರುವ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಉರಗ ಪ್ರೇಮಿ ಪವನ್ ನಾಯ್ಕ, ಹಾವನ್ನು ಸೆರೆಹಿಡಿದರು. ಭಯದ ನಡುವೆಯೂ ಬಿಳಿ ಹೆಬ್ಬಾವನ್ನು ಕಣ್ತುಂಬಿಕೊಳ್ಳಲು ಸಾಕಷ್ಟು ಮಂದಿ ನೆರೆದಿದ್ದರು.

    ಈ ಬಿಳಿ ಹೆಬ್ಬಾವು ಕರ್ನಾಟಕದಲ್ಲಿ ತುಂಬಾ ವಿರಳವಾಗಿ ಕಂಡುಬರುತ್ತದೆ. ಇದು ಕರ್ನಾಟಕದಲ್ಲಿ ಸೆರೆ ಸಿಕ್ಕಿರುವ ಎರಡನೇ ಬಿಳಿ ಹೆಬ್ಬಾವು ಆಗಿದೆ. ಸೆರೆ ಹಿಡಿದ ಹೆಬ್ಬಾವುವನ್ನು ಸುರಕ್ಷಿತವಾಗಿ ಕಾಡಿಗೆ ಬಿಡುಗಡೆ ಮಾಡಲಾಯಿತು. (ಏಜೆನ್ಸೀಸ್​)

    ಕಷ್ಟಗಳನ್ನು ಎದುರಿಸಲು ಆಗ್ತಿಲ್ಲ… ಮಗು ಕೊಂದು ಸಾವಿನ ಹಾದಿ ಹಿಡಿಯಲು ಹೋದ ತಾಯಿಯ ಸ್ಥಿತಿ ಗಂಭೀರ

    ಬಾಲಿವುಡ್​ನ ಪ್ರಸ್ತುತ ಸ್ಥಿತಿಯನ್ನು ರಾಹುಲ್​ ಗಾಂಧಿಗೆ ಹೋಲಿಸಿ ಸ್ವರಾ ಭಾಸ್ಕರ್​ ಕೊಟ್ಟ ವಿವರಣೆ ಹೀಗಿದೆ…

    ಮಗುವಿನ ಆರೋಗ್ಯಕ್ಕೆ ತಾಯಿಯ ಆರೈಕೆ; ಗರ್ಭಧರಿಸುವ ಮುನ್ನ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts