More

    ಗರ್ಭಿಣಿ ಎಂದು ಗೊತ್ತಿಲ್ಲದೆ ವಿಮಾನವೇರಿದ ಮಹಿಳೆಯಿಂದ ಗಂಡು ಮಗುವಿಗೆ ಜನ್ಮ: ಆಗಸದಲ್ಲಿ ಮಹಾ ಪವಾಡ!

    ಸಾಲ್ಟ್​ ಲೇಕ್​ ಸಿಟಿ: ತಾನು ನೀರಿಕ್ಷಿಸಿದ ಸರ್ಪ್ರೈಸ್​ ಘಟನೆಯೊಂದಕ್ಕೆ ಅಮರಿಕ ಮಹಿಳೆ ಲಾವಿನಿಯಾ ಮೌಂಗಾ ಸಾಕ್ಷಿಯಾಗಿದ್ದಾಳೆ. ಅವಳ ತವರುಭೂಮಿ ಉತಾಹ್​ದ ಸಾಲ್ಟ್​ ಲೇಕ್​ ಸಿಟಿಯಿಂದ ಹವಾಯಿಗೆ ಹೋಗಲು ಕಳೆದ ಬುಧವಾರ ವಿಮಾನವೇರಿದ ಆಕೆಗೆ ಮಾರ್ಗಮಧ್ಯೆಯೇ ಹೆರಿಗೆ ನೋವು ಕಾಣಿಸಿಕೊಂಡು ವಿಮಾನ ಹವಾಯಿ ತಲುಪುವ ಮುನ್ನವೇ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

    ಅಚ್ಚರಿಯೆಂದರೆ ಮೌಂಗಾಗೆ ತಾನು ಗರ್ಭಿಣಿ ಎಂಬುವ ಐಡಿಯಾನೇ ಇರಲಿಲ್ಲ. ಈಗ ನೋಡಿದರೆ ಮಗುವಿಗೆ ಜನ್ಮ ನೀಡಿರುವುದು ಸ್ವತಃ ಆಕೆಗೂ ಅಚ್ಚರಿಯಾಗಿದೆ. ಅಂದರೆ, ಮೌಂಗಾಗೆ ಕೇವಲ ಮೂರೇ ತಿಂಗಳಿಗೆ ಮಗುವಾಗಿದೆ. ಈ ಬಗ್ಗೆ ಮೌಂಗಾ ತಂದೆಯನ್ನು ಕೇಳಿದಾಗ, ಆಕೆಗೆ ತಾನು ಗರ್ಭಿಣಿ ಎನ್ನುವ ನಿರೀಕ್ಷೆಯೇ ಇರಲಿಲ್ಲ ಎಂದು ಹೇಳಿದರು.

    ಮಗುವಿಗೆ ರೇಮಂಡ್​ ಕೈಮನಾ ವಾಡೆ ಕೋಬ್​ ಲವಕಿ ಮೌಂಗಾ ಎಂದು ತಾಯಿ ಹೆಸರಿಟ್ಟಿದ್ದಾಳೆ. ಹರಿಗೆಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಮಾನದಲ್ಲೇ ಮಗುವೊಂದು ಜನನವಾಗಿದೆ ಎಂದು ಘೋಷಣೆ ಕೂಗಿದಾಗ ಎಲ್ಲರು ಚಪ್ಪಾಳೆ ತಟ್ಟಿ ಅಭಿನಂದಿಸುವ ದೃಶ್ಯ ವಿಡಿಯೋದಲ್ಲಿದೆ.

    ಪ್ರಯಾಣಿಕರು ಯಾರು ತಮ್ಮ ಸ್ಥಾನಗಳನ್ನು ಬಿಟ್ಟು ಬರಬಾರದು ಇದ್ದಲ್ಲಿಯೇ ಇರಿ. ತಾಯಿ ಮತ್ತು ಮಗುವಿಗೆ ಕೆಲವು ವೈದ್ಯಕೀಯ ನೆರವಿನ ಅಗತ್ಯವಿದೆ ಎಂದು ಘೋಷಣೆ ಕೂಗಿರುವುದು ಸಹ ವಿಡಿಯೋದಲ್ಲಿ ಇದೆ.

    ಈ ವಿಡಿಯೋವನ್ನು ಆರಂಭದಲ್ಲಿ ಟಿಕ್​ಟಾಕ್​ನಲ್ಲಿ ಶೇರ್​ ಮಾಡಲಾಗಿದ್ದು ಭಾರಿ ವೈರಲ್​ ಆಗಿದೆ. ಅದೃಷ್ಟವೆಂದರೆ, ವಿಮಾನದಲ್ಲಿ ನರ್ಸ್​ ಮತ್ತು ವೈದ್ಯರಿದ್ದರು. ಹೀಗಾಗಿ ಹೆರಿಗೆ ಸುಲಭವಾಗಿದೆ. ಆದರೆ, ಮಗು 26 ರಿಂದ 27 ವಾರಗಳ ಮುಂಚಿತವಾಗಿಯೇ ಹುಟ್ಟಿರುವುದರಿಂದ ವೈದ್ಯರ ಹೆಚ್ಚಿನ ತಪಾಸಣೆ ಮತ್ತು ಚಿಕಿತ್ಸೆಯ ಅಗತ್ಯವಿದೆ. ಸದ್ಯ ತಾಯಿ ಮತ್ತು ಮಗು ಆರೋಗ್ಯವಾಗಿಯೇ ಇದೆ. ನಿಜಕ್ಕೂ ಇದು ಪವಾಡವೇ ಎಂದು ವೈದ್ಯರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ.

    ತಾನು ಗರ್ಭಿಣಿ ಎಂದು ಗೊತ್ತಿಲ್ಲದೆ ವಿಮಾನವೇರಿದ ಮಹಿಳೆ ಇಳಿಯುವಾಗ ಮಗುವಿನ ತಾಯಿಯಾಗಿ ಇಳಿದಿದ್ದು, ಅಚ್ಚರಿಯೇ ಸರಿ. ಹವಾಲಿಯಲ್ಲಿ ವಿಮಾನ ಇಳಿದ ಮೌಂಗಾಗೆ ಸಹಪ್ರಯಾಣಿಕರು ಅಭಿನಂದಿಸಿದರು. ಬಳಿಕ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ.

    ಇದೀಗ ಮೌಂಗಾ, ಸಹೋದರಿಯರು ದೇಣಿಗೆ ಸಂಗ್ರಹಿಸಲು ಗೋ ಫಂಡ್‌ ಮಿ ಪುಟವನ್ನು ಪ್ರಾರಂಭಿಸಿದ್ದು, ಮಗುವಿನ ಆರೋಗ್ಯವು ಉತ್ತಮಗೊಳ್ಳುವವರೆಗೂ ಹವಾಯಿಯಲ್ಲಿ ಸ್ವಲ್ಪ ಸಮಯದವರೆಗೆ ಇರಬೇಕಾಗಿರುವುದರಿಂದ ಹಣವು ತಾಯಿಗೆ ಸಾಕಷ್ಟು ಸಹಾಯ ಮಾಡುತ್ತದೆ. ಹೀಗಾಗಿ ಸಹಾಯ ಮಾಡಿ ಎಂದು ದೇಣಿಗೆಯನ್ನು ಕೇಳಿದ್ದಾರೆ. (ಏಜೆನ್ಸೀಸ್​)

    ನಂದಿಗ್ರಾಮದಲ್ಲಿ ಮರು ಎಣಿಕೆ ಇಲ್ಲ: ಪಂಚರಾಜ್ಯ ಫೈಟ್​

    ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ‌ ಮತ್ತೊಂದು ಎಡವಟ್ಟು; ನಾಪತ್ತೆಯಾಗಿದ್ದ ಸೋಂಕಿತನ ಮೃತದೇಹ ಆಸ್ಪತ್ರೆ ಶವಾಗಾರದಲ್ಲೇ ಪತ್ತೆ!

    ವಿಶ್ವದ ಶ್ರೀಮಂತ ದಂಪತಿ ಡಿವೋರ್ಸ್​: 27 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯವಾಡಿದ ಬಿಲ್​ ಗೇಟ್ಸ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts