More

    ಉತ್ತರ ಪ್ರದೇಶದ ಮತ್ತೊಬ್ಬ ಸಚಿವ ಕರೊನಾಗೆ ಬಲಿ: ಸಂತಾಪ ಸೂಚಿಸಿದ ಪ್ರಧಾನಿ ಮೋದಿ

    ನವದೆಹಲಿ/ಲಖನೌ: ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾತ್ ನೇತೃತ್ವದ ಬಿಜೆಪಿ​ ಸರ್ಕಾರದಲ್ಲಿ ಕಂದಾಯ ಮತ್ತು ಪ್ರವಾಹ ನಿಯಂತ್ರಣ ಸಚಿವರಾಗಿದ್ದ ವಿಜಯ್​ ಕಶ್ಯಪ್​ ಅವರು ಮಹಾಮಾರಿ ಕರೊನಾ ಸೋಂಕಿಗೆ ಬಲಿಯಾಗಿದ್ದಾರೆ.

    ಕಶ್ಯಪ್​ (56) ಅವರು ಮುಜಾಫರ್​ನಗರದ ಛರ್ಥವಾಲ್​ ಕ್ಷೇತ್ರದ ಜನಪ್ರತಿನಿಧಿ. ಮಂಗಳವಾರ ಗುರಗಾಂವ್​ನ ಮೆದಂತಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಶ್ಯಪ್​ ಅವರು ಕರೊನಾದಿಂದ ಮೃತಪಟ್ಟ ಉತ್ತರ ಪ್ರದೇಶದ ಮೂರನೇ ಸಚಿವರು. ಕಳೆದ ವರ್ಷ ಸಚಿವರಾದ ಕಮಲ್​ ರಾಣಿ ವರುಣ್​ ಮತ್ತು ಚೇತನ್​ ಚೌಹಾಣ್​ ಮಹಾಮಾರಿಗೆ ಬಲಿಯಾಗಿದ್ದಾರೆ.

    ಕಶ್ಯಪ್​ ಸಾವಿಗೆ ಕಂಬನಿ ಮಿಡಿದಿರುವ ಪ್ರಧಾನಿ ನರೇಂದ್ರ ಮೋದಿ, ಕಶ್ಯಪ್​ ಅವರು ಸಾರ್ವಜನಿಕ ಹಿತಾಸಕ್ತಿ ಕಾರ್ಯಗಳಿಗೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರು ಎಂದು ಸ್ಮರಿಸಿದ್ದಾರೆ.

    ಬಿಜೆಪಿ ನಾಯಕ ಮತ್ತು ಉತ್ತರ ಪ್ರದೇಶದ ಸಚಿವ ವಿಜಯ್​ ಕಶ್ಯಪ್​ ಅವರು ಮೃತಪಟ್ಟರೆಂಬ ಸುದ್ದಿ ಕೇಳಿ ದುಃಖವಾಯಿತು. ಅವರು ತಳಮಟ್ಟಕ್ಕೆ ಸಂಪರ್ಕ ಹೊಂದಿದ್ದ ನಾಯಕರಾಗಿದ್ದರು ಮತ್ತು ಯಾವಾಗಲೂ ಸಾರ್ವಜನಿಕ ಹಿತಾಸಕ್ತಿ ಕೆಲಸಗಳಿಗಾಗಿ ತಮ್ಮನ್ನು ಅರ್ಪಿಸಿಕೊಂಡಿದ್ದರು. ಈ ದುಃಖದಲ್ಲಿ ನಾನೂ ಕೂಡ ಕುಟುಂಬದ ಭಾಗವಾಗಿದ್ದೇನೆ. ಸಾವಿಗೆ ಸಂತಾಪ ತಿಳಿಸುತ್ತಾ, ದುಃಖ ಭರಿಸುವ ಶಕ್ತಿ ನೀಡಲೆಂದು ಕೋರುತ್ತೇನೆ ಎಂದು ಪ್ರಧಾನಿ ಮೋದಿ ಟ್ವೀಟ್​ ಮಾಡಿದ್ದಾರೆ.

    ಪ್ರಧಾನಿ ಮಾತ್ರವಲ್ಲದೆ, ಉತ್ತರ ಪ್ರದೇಶದ ಸಿಎಂ ಯೋಗಿ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್​ ಸಿಂಗ್​ ಕೂಡ ಕಶ್ಯಪ್​ ಸಾವಿಗೆ ಸಂತಾಪ ಸೂಚಿಸಿದ್ದಾರೆ. (ಏಜೆನ್ಸೀಸ್​)

    ಹಣ ಕೊಟ್ಟರಷ್ಟೇ ಆರೈಕೆ, ಇಲ್ಲವಾದರೆ ಸಿಗದು ಚಿಕಿತ್ಸೆ!; ಮಡಿಕೇರಿಯಲ್ಲಿ ಧನದಾಹಿ ವೈದ್ಯ, ವಿಜಯವಾಣಿ-ದಿಗ್ವಿಜಯ ತನಿಖೆಯಲ್ಲಿ ಭ್ರಷ್ಟಾಚಾರ ಬಯಲು

    ಪತಿಯ ಆತ್ಮಹತ್ಯೆ ಬಳಿಕ ಯುವಕನನ್ನು ಮದ್ವೆಯಾದ ಲೇಡಿ ಕಾನ್ಸ್​ಟೇಬಲ್​ಗೆ ಕಾದಿತ್ತು ಬಿಗ್​ ಶಾಕ್​!

    ಕೇಳುವವರಿಲ್ಲ ‘ಮೂಕ’ ರೋದನ: ಮನೆಯಲ್ಲಿರುವವರೇ ನಾಲ್ವರು, ಎಲ್ಲರೂ ಮೂಕರೇ..!!!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts