More

    2ನೇ ಅವಧಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಮೊದಲ ನಿರ್ಧಾರ ಘೋಷಿಸಿದ ಸಿಎಂ ಯೋಗಿ

    ಲಖನೌ: ಎರಡನೇ ಅವಧಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಬೆನ್ನಲ್ಲೇ ಮೊದಲ ನಿರ್ಧಾರ ಘೋಷಣೆ ಮಾಡಿರುವ ಯೋಗಿ ಆದಿತ್ಯನಾಥ್​ ಉಚಿತ ಪಡಿತರ ಯೋಜನೆಯನ್ನು ಮತ್ತೆ 3 ತಿಂಗಳವರೆಗೆ ವಿಸ್ತರಣೆ ಮಾಡಿದ್ದಾರೆ.

    ಇಂದು ಸುದ್ದಿಗೋಷ್ಠಿ ನಡೆಸಿದ ಸಿಎಂ ಯೋಗಿ, ಪ್ರಧಾನ ಮಂತ್ರಿ ಗರೀಬ್​ ಕಲ್ಯಾಣ ಅನ್ನ ಯೋಜನೆಯನ್ನು 2022ರ ಮಾರ್ಚ್ 31ರಿಂದ​ ಜೂನ್​ 30ರವರೆಗೆ ವಿಸ್ತರಣೆ ಮಾಡುವುದಾಗಿ ತಿಳಿಸಿದರು. ಇದರಿಂದ ರಾಜ್ಯದ 15 ಕೋಟಿ ಜನರಿಗೆ ಸಹಾಯವಾಗಲಿದೆ ಎಂದು ಹೇಳಿದರು.

    ಈ ಯೋಜನೆಯು ಪ್ರತಿ ಮನೆಗೆ ತಿಂಗಳಿಗೆ ಹೆಚ್ಚುವರಿಯಾಗಿ ಐದು ಕೆಜಿಯಷ್ಟು ಆಹಾರ ಧಾನ್ಯವನ್ನು ಒದಗಿಸುತ್ತದೆ. ಶನಿವಾರ ನಡೆದ ಸಿಎಂ ಯೋಗಿ ಆದಿತ್ಯನಾಥ್ ಅವರ ಹೊಸ ಸಚಿವ ಸಂಪುಟದ ಮೊದಲ ನಿರ್ಧಾರ ಇದಾಗಿದ್ದು, ಇದು ಪಾರದರ್ಶಕವಾಗಿ ಜಾರಿಯಾಗಲಿದೆ ಎಂದು ತಿಳಿಸಿದರು.

    ಉತ್ತರಪ್ರದೇಶದಲ್ಲಿ ಮೂರು ತಿಂಗಳ ಕಾಲ ಉಚಿತ ಪಡಿತರ ನೀಡಲಾಗುವುದು. ಬಡವರನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ನೀತಿಗಳು ಜನರಿಗೆ ತಲುಪಬೇಕು ಎಂದು ನೂತನ ಉಪಮುಖ್ಯಮಂತ್ರಿ ಬ್ರಿಜೇಶ್ ಪಾಠಕ್ ಹೇಳಿದ್ದಾರೆ. (ಏಜೆನ್ಸೀಸ್​)

    10 ಮಹಿಳೆಯರ ಜತೆ ದೈಹಿಕ ಸಂಬಂಧ ಹೊಂದಿದ್ದೇನೆ: ನಟನ ಹೇಳಿಕೆ ಖಂಡಿಸದೇ ಕೆಂಗಣ್ಣಿಗೆ ಗುರಿಯಾದ ನವ್ಯಾ!

    ಗ್ರಾಹಕರಿಗೆ ಮತ್ತೆ ಶಾಕ್​: 4ನೇ ಬಾರಿ ಪೆಟ್ರೋಲ್​-ಡೀಸೆಲ್​ ಬೆಲೆ ಏರಿಕೆ, ಐದು ದಿನದಲ್ಲಿ 3.10 ರೂ. ಹೆಚ್ಚಳ

    RRR ಚಿತ್ರ ವೀಕ್ಷಿಸುತ್ತಿದ್ದ ಅಭಿಮಾನಿ ಸಾವು: ಸಿನಿಮಾ ಮಧ್ಯದಲ್ಲೇ ನಡೆದ ಘಟನೆ ನೋಡಿ ಬೆಚ್ಚಿಬಿದ್ದ ಫ್ಯಾನ್ಸ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts