RRR ಚಿತ್ರ ವೀಕ್ಷಿಸುತ್ತಿದ್ದ ಅಭಿಮಾನಿ ಸಾವು: ಸಿನಿಮಾ ಮಧ್ಯದಲ್ಲೇ ನಡೆದ ಘಟನೆ ನೋಡಿ ಬೆಚ್ಚಿಬಿದ್ದ ಫ್ಯಾನ್ಸ್​!

ಹೈದರಾಬಾದ್​: ನಿನ್ನೆ (ಮಾ. 25) ವಿಶ್ವದಾದ್ಯಂತ ತೆರೆಕಂಡ ಆರ್​ಆರ್​ಆರ್​ ಸಿನಿಮಾ ಅದ್ಭುತ ಪ್ರತಿಕ್ರಿಯೆಯೊಂದಿಗೆ ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸಿದೆ. ಆರ್​ಆರ್​ಆರ್​ ಸಿನಿಮಾ ನೋಡಿದ ಜೂ. ಎನ್​ಟಿಆರ್​ ಮತ್ತು ರಾಮ್​ಚರಣ್​ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿದೆ. ಸಿನಿಮಾ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬರುತ್ತಿದ್ದು, ಸಂಭ್ರಮ ಮನೆ ಮಾಡಿರುವ ಮಧ್ಯೆಯೇ ದುರಂತ ಘಟನೆಯಿಂದ ನಡೆದು ಹೋಗಿದೆ. ಆಂಧ್ರ ಪ್ರದೇಶದ ಅನಂತಪುರದಲ್ಲಿರುವ ಎಸ್​ವಿ ಮ್ಯಾಕ್ಸ್​ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಣೆ ಮಾಡುವಾಗ ಅಭಿಮಾನಿಯೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ. ಸಿನಿಮಾ ನೋಡಲು ಕಾತುರರಾಗಿದ್ದ ಅಭಿಮಾನಿಯೊಬ್ಬರು ತಮ್ಮ ನೆಚ್ಚಿನ … Continue reading RRR ಚಿತ್ರ ವೀಕ್ಷಿಸುತ್ತಿದ್ದ ಅಭಿಮಾನಿ ಸಾವು: ಸಿನಿಮಾ ಮಧ್ಯದಲ್ಲೇ ನಡೆದ ಘಟನೆ ನೋಡಿ ಬೆಚ್ಚಿಬಿದ್ದ ಫ್ಯಾನ್ಸ್​!