More

    ಭಾರತದಲ್ಲಿದೆ ಹೆಸರೇ ಇಲ್ಲದ ರೈಲು ನಿಲ್ದಾಣ: ಇದರ ಹಿಂದಿನ ಕರಾಳ ಕತೆ ಕೇಳಿದ್ರೆ ಬೆರಗಾಗ್ತೀರಾ!

    ನವದೆಹಲಿ: ಹೆಸರೇ ಇಲ್ಲದ ರೈಲು ನಿಲ್ದಾಣ ಭಾರತದಲ್ಲಿದೆ ಎಂದರೆ ಯಾರೂ ಸಹ ನಂಬುವುದಿಲ್ಲ. ಹೆಸರಿಲ್ಲದ ರೈಲು ನಿಲ್ದಾಣವಿರಲು ಹೇಗೆ ಸಾಧ್ಯ? ಹೆಸರಿಲ್ಲದ ರೈಲು ನಿಲ್ದಾಣವನ್ನು ಗುರುತಿಸುವುದಾದರೂ ಹೇಗೆ? ನಾಮಫಲಕ ತುಂಬಾ ಮುಖ್ಯ ಎನ್ನುವವರು ಈ ಸುದ್ದಿ ಓದಿದರೆ ಒಮ್ಮೆ ಅಚ್ಚರಿಗೀಡಾಗುವುದು ಖಂಡಿತ.

    ನಿಜವಾಗಿಯೂ ಹೆಸರಿಲ್ಲದ ರೈಲು ನಿಲ್ದಾಣವೊಂದು ದೇಶದಲ್ಲಿದೆ. ವಿಶೇಷವಾಗಿ ಅದು ಹೆಸರಿಲ್ಲದ ರೈಲು ನಿಲ್ದಾಣವೆಂದೇ ಖ್ಯಾತಿಯಾಗಿದೆ. ಪ್ರತಿ ನಿಲ್ದಾಣಕ್ಕೂ ಖಂಡಿತವಾಗಿ ಹೆಸರು ಇರಲೇಬೇಕು. ಆದರೆ, ಈ ರೈಲು ನಿಲ್ದಾಣ ಹೆಸರು ಕಳೆದುಕೊಂಡು ರೋಚಕ ಕತೆಯನ್ನು ಕೇಳಿದ್ರೆ ನಿಜಕ್ಕೂ ಅಚ್ಚರಿಯಾಗುತ್ತದೆ.

    ಹೆಸರೇ ಇಲ್ಲದ ರೈಲು ನಿಲ್ದಾಣವು ಪಶ್ಚಿಮ ಬಂಗಾಳದ ಆದ್ರಾ ರೈಲು ವಿಭಾಗದಲ್ಲಿ ಬರುತ್ತದೆ. ಈ ನಿಲ್ದಾಣ ಬಂಕುರಾ-ಮಾಸಗ್ರಾಮ್​ ರೈಲು ಮಾರ್ಗದಲ್ಲಿ ಬರುತ್ತದೆ. ರೈನಾ ಮತ್ತು ರೈನಾಗರ್​ ಎಂಬ ಎರಡು ಗ್ರಾಮಗಳ ನಡುವೆ ಈ ರೈಲು ನಿಲ್ದಾಣ ಬರುತ್ತದೆ.

    ಈ ನಿಲ್ದಾಣಕ್ಕೆ ಮೊದಲು ರೈನಗರ್​ ರೈಲು ನಿಲ್ದಾಣ ಎಂದು ಹೆಸರಿಡಲಾಗಿತ್ತು. ಆದರೆ, ರೈನಾ ಗ್ರಾಮಸ್ಥರು ಇದಕ್ಕೆ ವಿರೋಧ ವ್ಯಕ್ತಪಡಿಸಿ, ತಮ್ಮ ಊರಿನ ಹೆಸರಿಡುವಂತೆ ಒತ್ತಾಯಿಸಿದ್ದರು. ಇದೇ ವಿಚಾರವಾಗಿ ಎರಡು ಗ್ರಾಮಗಳ ನಡುವೆ ಕಿತ್ತಾಟವು ನಡೆಯುತ್ತಿತ್ತು. ಈ ಸುದ್ದಿ ಕೋಸ್ಟ್​ ರೈಲ್ವೇ ಬೋರ್ಡ್​ಗೆ ತಿಳಿದಿದೆ. ವಿವಾದವನ್ನು ಬಗೆಹರಿಸಲು ಅಧಿಕಾರಿಗಳು ಕೂಡ ಯತ್ನಿಸಿದರೂ, ಯಾವುದೇ ಫಲ ದೊರೆಯಲಿಲ್ಲ.

    ಇದಾದ ಬಳಿಕ ಒಂದು ನಿರ್ಧಾರಕ್ಕೆ ಬಂದು ರೈಲ್ವೇ ಬೋರ್ಡ್​ ನಾಮಫಲಕದಿಂದ ರೈನಗರ್​ ಹೆಸರನೇ ತೆಗೆದುಹಾಕಿದರು. ಮತ್ತೆ ಅದಕ್ಕೆ ಮರುನಾಮಕರಣ ಮಾಡಲು ಸಹ ಮುಂದಾಗಲಿಲ್ಲ. ಅಂದಿನಿಂದ ಅದು ಹೆಸರಿಲ್ಲದ ರೈಲು ನಿಲ್ದಾಣವಾಗಿಯೇ ಉಳಿದಿದೆ. ಇದರಿಂದಾಗಿ ಇಲ್ಲಿಗೆ ಬರುವ ಅನೇಕ ಪ್ರಯಾಣಿಕರು ತುಂಬಾ ತೊಂದರೆ ಎದುರಿಸುತ್ತಿದ್ದಾರೆ.

    ರೈಲು ನಿಲ್ದಾಣ ಹೆಸರಿಲ್ಲದೇ ಪ್ರಯಾಣಿಕರು ಸಹ ಗೊಂದಲಕ್ಕೀಡಾಗಿದ್ದಾರೆ. ಆದರೆ, ಅಧಿಕಾರಿಗಳು ಈಗಲೂ ಸಹ ರೈನಗರ್​ ಹೆಸರಿನಲ್ಲೇ ಟಿಕೆಟ್​ ಕೊಡುತ್ತಿದ್ದಾರೆ. ಆದರೆ, ನಾಮಫಲಕದಲ್ಲಿ ಮಾತ್ರ ಯಾವುದೇ ಹೆಸರಿಲ್ಲ. ಕೇವಲ ಹಳದಿ ಬಣ್ಣದ ಖಾಲಿ ಬೋರ್ಡ್​ ಮಾತ್ರ ಪ್ರಯಾಣಿಕರಿಗೆ ಪ್ರತಿ ಬಾರಿ ದರ್ಶನವಾಗುತ್ತಿದೆ. (ಏಜೆನ್ಸೀಸ್​)

    ತಿರುಪತಿಯ ಭಿಕ್ಷುಕನ ಮನೆಯಲ್ಲಿ ಕಂತೆ ಕಂತೆ ಹಣ: ಒಟ್ಟು ಮೊತ್ತ ಕೇಳಿ ದಂಗಾದ ಅಧಿಕಾರಿಗಳು!

    ಕೋವಿಡ್-19 ಎರಡನೇ ಅಲೆ ಬಂದಿದ್ದು ಹೇಗೆ?

    ಮೆಕ್ಸಿಕೊ ಬೆಡಗಿ ವಿಶ್ವ ಸುಂದರಿ; ಉಡುಪಿ ಮೂಲದ ಆಡ್ಲೆನ್​ಗೆ 4ನೇ ಸ್ಥಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts