More

    ಅನಾರೋಗ್ಯ ಪೀಡಿತ ತಾಯಿಗೆ ಔಷಧ ತರಲು ಹೋಗ್ತಿದ್ದ ಯೂಕ್ರೇನ್​ ಮಹಿಳೆಗೆ ಗುಂಡಿಟ್ಟು ಹತ್ಯೆಗೈದ ರಷ್ಯಾ ಪಡೆ

    ಕೀಯೆವ್​/ಮಾಸ್ಕೋ: ಅನಾರೋಗ್ಯ ಪೀಡಿತ ತಾಯಿಗೆ ಔಷಧ ತರಲು ಹೊರ ಹೋಗಿದ್ದ ಯೂಕ್ರೇನಿಯನ್​ ಮಹಿಳೆಗೆ ರಷ್ಯಾ ಯೋಧರು ಗುಂಡಿಕ್ಕಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ಯೂಕ್ರೇನ್​ ರಾಜಧಾನಿ ಕೀಯೆವ್​ ಹೊರವಲಯದ ಗ್ರಾಮವೊಂದರಲ್ಲಿ ನಡೆದಿದೆ.

    ಮೃತ ಮಹಿಳೆಯನ್ನು ವಲೇರಿಯಾ ಮಕ್ಸೆಟ್ಸ್ಕಾ (31) ಎಂದು ಗುರುತಿಸಲಾಗಿದೆ. ರಷ್ಯಾ ಯೋಧರ ದಾಳಿಯಲ್ಲಿ ವಲೇರಿಯಾ ತಾಯಿ ಇರಿನಾ ಮತ್ತು ಕಾರು ಚಾಲಕನು ಕೂಡ ಮೃತಪಟ್ಟಿದ್ದಾನೆ. ತರಬೇತಿ ಪಡೆದ ವೈದ್ಯರಾಗಿದ್ದ ವಲೇರಿಯಾ, ಸ್ಥಳೀಯರಿಗೆ ಸಹಾಯ ಮಾಡುವ ಸಲುವಾಗಿ ರಷ್ಯಾ ಆಕ್ರಮಣ ಮಾಡಿದ ನಂತರವೂ ಯೂಕ್ರೇನ್‌ನಲ್ಲಿ ಉಳಿಯಲು ನಿರ್ಧರಿಸಿದ್ದರು. ತನ್ನ ತಾಯಿಯ ಔಷಧಿ ಖಾಲಿಯಾದ ಬಳಿಕ ದೇಶದಿಂದ ಪಲಾಯನ ಮಾಡಲು ವಲೇರಿಯಾ ನಿರ್ಧರಿಸಿದ್ದರು. ಯೂಕ್ರೇನ್​ನ ಪಶ್ಚಿಮ ಗಡಿಯ ಕಡೆಗೆ ತೆರಳುವಾಗ ರಷ್ಯಾ ಟ್ಯಾಂಕ್​ ಮಾಡಿ ಹತ್ಯೆ ಮಾಡಿದೆ.

    ವಲೇರಿಯಾ ಅವರು ಸಾಯುವ ಮುನ್ನ ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್‌ಮೆಂಟ್‌ (ಯುಎಸ್ಎಐಡಿ) ಜತೆ ಕೆಲಸ ಮಾಡುತ್ತಿದ್ದರು. ಯುಎಸ್ಎ​ಐಡಿ ನಿರ್ವಾಹಕಿ ಸಮಂತಾ ಪವರ್ ಅವರು ವಲೇರಿಯಾ ಸಾವನ್ನು ಖಚಿತಪಡಿಸಿದ್ದಾರೆ.

    ವಲೇರಿಯಾ ಅವರ ಮರಣವನ್ನು ತಿಳಿಸಲು ತುಂಬಾ ದುಃಖಿತಳಾಗಿದ್ದೇನೆ. ಹೆಮ್ಮೆಯ ಯೂಕ್ರೇನಿಯನ್ ಮತ್ತು ಯುಎಸ್ಎಐಡಿನ ಪ್ರೀತಿಯ ಪಾಲುದಾರರಾಗಿದ್ದರು. ವಲೇರಿಯಾ ಓರ್ವ ಪ್ರತಿಭಾವಂತ, ಸಾಮಾಜಿಕ ಒಗ್ಗಟ್ಟು ಮತ್ತು ತಪ್ಪು ಮಾಹಿತಿಯ ವಿರುದ್ಧ ಹೋರಾಡುವ ಸಹಾನುಭೂತಿಯ ನಾಯಕಿಯಾಗಿದ್ದಳು. ಆಕೆಯ 32 ನೇ ಹುಟ್ಟುಹಬ್ಬದಂದೇ ರಷ್ಯಾದ ಮಿಲಿಟರಿಯಿಂದ ಹತ್ಯೆಯಾಗಿದ್ದಾಳೆ ಎಂದು ಸಮಂತಾ ಪವರ್ ಹೇಳಿಕೆ ನೀಡಿದ್ದಾರೆ.

    ವಲೇರಿಯಾ ಯೂಕ್ರೇನ್​ನ ಡೊನೆಟ್ಸ್ಕ್‌ನಲ್ಲಿ ನಡೆದ ಶೆಲ್ ದಾಳಿಯಿಂದ ಬದುಕುಳಿದಿದ್ದರು. ಇದಾ ಬಳಿಕ ಕೈವ್‌ಗೆ ತೆರಳಿ, ಯುಎಸ್​ಎಐಡಿ ಜತೆ ಕೆಲಸ ಮಾಡಲು ಪ್ರಾರಂಭಿಸಿದರು. ಅವರು ಒಂದು ರೀತಿಯ ಧೈರ್ಯಶಾಲಿ ಮಹಿಳೆ ಎಂದು ಹೆಸರಾಗಿದ್ದರು. ವಲೇರಿಯಾ ತರಬೇತಿ ಪಡೆದ ವೈದ್ಯಯಾಗಿದ್ದು, ಆಕ್ರಮಣವು ಪ್ರಾರಂಭವಾದಾಗ ಕೈವ್ ಅನ್ನು ತೊರೆಯಬಹುದಿತ್ತು, ಆದರೆ ಇತರರಿಗೆ ಸಹಾಯ ಮಾಡಲು ಇಲ್ಲಿಯೇ ಉಳಿದಿದ್ದರು ಎಂದು ಸಮಂತಾ ಹೇಳಿದರು.

    ವಲೇರಿಯಾ ಡೊನೆಟ್ಸ್ಕ್​ದಲ್ಲಿ ಹುಟ್ಟಿ ಬೆಳೆದರು. ಅವರು 2014 ರಲ್ಲಿ ಕ್ರಿಮಿಯನ್ ಪೆನಿನ್ಸುಲಾದ ಮೇಲೆ ರಷ್ಯಾದ ಆಕ್ರಮಣದ ನಂತರ ಮಾನವೀಯ ಪ್ರತಿಕ್ರಿಯೆಯ ಭಾಗವಾಗಿ ಕೆಲಸ ಮಾಡಿದ್ದಾರೆ. (ಏಜೆನ್ಸೀಸ್​)

    ಹಾಟ್​​​ ಡ್ರೆಸ್​ ನೋಡಿ ತಮ್ಮ ಮೇಲೆ ಮುಗಿಬಿದ್ದ ವಿರೋಧಿಗಳಿಗೆ ಸಮಂತಾ ಕೊಟ್ಟ ಮಾತಿನ ಪಂಚ್​ ಹೀಗಿದೆ…

    ಸೊಸೆ ಮೇಲಿನ ಕೋಪಕ್ಕೆ 1 ತಿಂಗಳಿಂದ ಅತ್ತೆ ಮುಚ್ಚಿಟ್ಟಿದ್ದ ರಹಸ್ಯ ಮೊಮ್ಮಗಳನ್ನೇ ಬಲಿ ಪಡೆಯಿತು

    ಕುಟುಂಬ ಸಮೇತ ಹಂಪಿಗೆ ಭೇಟಿ ನೀಡಿದ ಹಿಂದು ಧಾರ್ಮಿಕ ದತ್ತಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ

    ರೌಡಿಗಳ ಜತೆ ಯೂನಿಫಾರ್ಮ್​ನಲ್ಲೇ ಮದ್ಯದ ಪಾರ್ಟಿ ನಡೆಸಿದ ಪೊಲೀಸ್​ ಅಧಿಕಾರಿಯ ಕರಾಳ ಮುಖವಿದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts