More

    ದಲಿತ ವ್ಯಕ್ತಿಯ ಅಂತ್ಯಕ್ರಿಯೆಗೆ ಅಡ್ಡಿ: ತೆಗೆದಿದ್ದ ಗುಂಡಿ ಮುಚ್ಚಿಸಿ ಅಮಾನವೀಯತೆ ಮೆರೆದ ಪೊಲೀಸರು

    ತುಮಕೂರು: ದಲಿತ ವ್ಯಕ್ತಿಯ ಅಂತ್ಯ ಸಂಸ್ಕಾರಕ್ಕೆ ಪೊಲೀಸರು ಅಡ್ಡಿಪಡಿಸಿರುವ ಘಟನೆ ತುಮಕೂರು ನಗರದ ಭೀಮಸಂದ್ರದಲ್ಲಿ ಸೋಮವಾರ (ಜ.24) ನಡೆದಿದೆ.

    ಮಣ್ಣು ಮಾಡುವ ಜಾಗ ಬೇರೆಯವರಿಗೆ ಸೇರಿದ್ದು ಎಂದು ಅಂತ್ಯ ಸಂಸ್ಕಾರವನ್ನು ನಿಲ್ಲಿಸಿದ್ದಾರೆ. ಅಲ್ಲದೆ, ತೆಗೆದಿದ್ದ ಗುಂಡಿಯನ್ನು ಮುಚ್ಚಿಸುವ ಮೂಲಕ ಪೊಲೀಸರು ಅಮಾನವೀಯತೆ ಮೆರೆದಿದ್ದಾರೆ.

    ಮಂಜುನಾಥ್ (50) ಎಂಬುವರ ಅಂತ್ಯ ಸಂಸ್ಕಾರಕ್ಕೆ ಕುಟುಂಬ ಮುಂದಾಗಿತ್ತು. ಬೆಳಗ್ಗೆ 10 ಗಂಟೆಗೆ ಮೃತದೇಹ ತರಲಾಗಿತ್ತು. ಈ ವೇಳೆ ಹೋಯ್ಸಳ ಜೀಪ್​​ನಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಮೃತರ ಕುಟುಂಬವನ್ನು ತಡೆದಿದ್ದಾರೆ. ಈ ಮುಂಚೆ ಇದೇ ಜಾಗದಲ್ಲಿ ದಲಿತ ಮಹಿಳೆಯ ಅಂತ್ಯ ಸಂಸ್ಕಾರವನ್ನು ಮಾಡಿದ್ದರು. ಇದೀಗ ಈ ಜಾಗ ಸೌಭಾಗ್ಯಮ್ಮ ಎಂಬುವರ ಹೆಸರಿಗೆ ಸೇರಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ.

    ಸೌಭಾಗ್ಯಮ್ಮರ ಹೆಸರಿನಲ್ಲೇ ಭೂಮಿ ಇರುವ ಬಗ್ಗೆ ದಾಖಲೆ ಇದೆ ಎಂದು ಪೊಲೀಸರು ವಾದಿಸಿದ್ದು, ಹೆಣದ‌ ಮುಂದೆಯೇ ಪೊಲೀಸ್ ಮತ್ತು ಕುಟುಂಬಸ್ಥರ ನಡುವೆ ವಾಕ್ಸಮರ ನಡೆದಿದೆ. ಸದ್ಯ ಅಂತ್ಯಸಂಸ್ಕಾರವಾಗದೇ ವಿವಾದಿತ ಸ್ಥಳದಲ್ಲೇ ಇರುವ ಮೃತದೇಹಕ್ಕೆ ಅಂತ್ಯಸಂಸ್ಕಾರ ನಡೆಸಲು ಅನುವು ಮಾಡಿಕೊಡಿ ಎಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ.

    ಬೆಳಗ್ಗೆ 10 ಗಂಟೆಯಿಂದಲೂ ಹೆಣ ಇಟ್ಟುಕೊಂಡು ಅಂತ್ಯ ಸಂಸ್ಕಾರಕ್ಕೆ ಕಾಯುತ್ತಿದ್ದಾರೆ. ಇದು ದಲಿತರಿಗೆ ಅಂತ ಇರೋ ಇಮಾಮ್ತಿ ಜಮೀನು ಎಂದು ದಲಿತ ಕುಟುಂಬದವರು ಹೇಳುತ್ತಿದ್ದಾರೆ. ಮೊದಲಿನಿಂದಲೂ ಇದೇ ಜಾಗದಲ್ಲಿ 400 ಕ್ಕೂ ಹೆಚ್ಚು ಅಂತ್ಯಸಂಸ್ಕಾರ ಮಾಡಿದ್ದೇವೆ ಎಂದು ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್​)

    ಐಪಿಎಲ್‌ಗೆ ಸೇರ್ಪಡೆಯಾದ ಹೊಸ ತಂಡ ಲಖನೌ ಹೆಸರು ಅನಾವರಣ

    ಮೆಕ್ಕೆಜೋಳ ತುಂಬಿದ ಲಾರಿ ಪಲ್ಟಿ; ವಾಹನದಲ್ಲಿದ್ದ ಮೂವರು ಉಸಿರುಗಟ್ಟಿ ಸ್ಥಳದಲ್ಲೇ ಸಾವು

    ಗ್ರಾಪಂ ಕಚೇರಿಯಲ್ಲೇ ಪ್ರೇಮಿಗಳ ಮದುವೆ, ಪೌರೋಹಿತ್ಯ ವಹಿಸಿದ ಪಿಡಿಒ! ನಂಜನಗೂಡಲ್ಲಿ ನವಜೋಡಿ ಪ್ರಕರಣ ಸುಖಾಂತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts