More

    ಶಾಪಿಂಗ್​ಗೆಂದು ಹೋದ ಸ್ನೇಹಿತೆಯರು ರಾತ್ರಿಯಾದ್ರೂ ಮನೆಗೆ ಬಾರಲೇ ಇಲ್ಲ: ಬೆಳಗ್ಗೆ ಪಾಲಕರಿಗೆ ಕಾದಿತ್ತು ಶಾಕ್​!

    ಜಗಿತ್ತಲ: ಒಂದೇ ದಿನದಲ್ಲಿ ಮೂವರು ಸ್ನೇಹಿತೆಯರು ಸಾವಿಗೀಡಾಗಿರುವ ಘಟನೆ ತೆಲಂಗಾಣದ ಜಗಿತ್ತಲ ಜಿಲ್ಲೆಯಲ್ಲಿ ಬಿರುಗಾಳಿ ಎಬ್ಬಿಸಿದೆ.

    ಗಂಗಾಜಲ (19), ಮಲ್ಲಿಕಾ (19) ಮತ್ತು ವಂದನಾ (16) ಮೃತ ದುರ್ದೈವಿಗಳು. ಮೂವರು ಕೂಡ ಜಗಿತ್ತಲ ಉಪನಗರದ ಉಪ್ಪರಿಪೇಟ್​ ನಿವಾಸಿಗಳು. ಮೂವರು ಕೂಡ ಸಂಬಂಧಿಕರಾಗಿದ್ದು, ಚಿಕ್ಕ ವಯಸ್ಸಿನಿಂದಲೇ ಒಳ್ಳೆಯ ಸ್ನೇಹಿತೆಯರಾಗಿದ್ದರು. ಮೂವರಲ್ಲಿ ಗಂಗಾಜಲ ಮತ್ತು ಮಲ್ಲಿಕಾ ಕಳೆದ ಆಗಸ್ಟ್​ನಲ್ಲಿ ಮದುವೆ ಆಗಿತ್ತು. ವಂದನಾ ಓದು ಮುಂದುವರಿಸಿದ್ದಳು. ಏನಾಗಿದೆಯೋ ತಿಳಿದಿಲ್ಲ. ಆದರೆ ಮೂವರ ಮೃತದೇಹ ಊರಿನ ಹೊರವಲಯದ ಕೆರೆಯಲ್ಲಿ ಗುರುವಾರ ಬೆಳಗ್ಗೆ ಪತ್ತೆಯಾಗಿದೆ.

    ಕಳೆದ ಕೆಲವು ದಿನಗಳಿಂದ ಮಲ್ಲಿಕಾ ಅನಾರೋಗ್ಯದಿಂದ ಬಳಲುತ್ತಿದ್ದಳು. ಆಕೆಯ ತಂದೆ 10 ದಿನಗಳ ಹಿಂದೆ ವೈದ್ಯಕೀಯ ಪರೀಕ್ಷೆಗೆಂದು ಮನೆಗೆ ಕರೆತಂದಿದ್ದರು. ಇನ್ನೊಂದೆಡೆ ಗಂಗಾಜಲ ಕೂಡ ಒಂದು ವಾರದ ಹಿಂದಷ್ಟೇ ತವರು ಮನೆಗೆ ಹಿಂದಿರುಗಿದ್ದಳು. ಬುಧವಾರ ಸಂಜೆ ಮಲ್ಲಿಕಾ, ಗಂಗಾಜಲ ಮತ್ತು ವಂದನಾ ಶಾಪಿಂಗ್​ ಹೋಗುತ್ತೇನೆಂದು ಪಾಲಕರಿಗೆ ಹೇಳಿ ಮನೆಯಿಂದ ಹೊರಟವರು ರಾತ್ರಿಯಾದರೂ ಮನೆಗೆ ಹಿಂತಿರುಗಲೇ ಇಲ್ಲ.

    ಮಕ್ಕಳು ಬರುವಿಕೆಯನ್ನು ಇಡೀ ರಾತ್ರಿ ಎದುರು ನೋಡಿದ ಪಾಲಕರಿಗೆ ಬಹಳ ನಿರಾಸೆಯ ಜತೆಗೆ ಆತಂಕವೂ ಉಂಟಾಯಿತು. ಮರುದಿನ ಗುರುವಾರ ಬೆಳಗ್ಗೆ ಪೊಲೀಸ್​ ಠಾಣೆಗೆ ತೆರಳಿ ದೂರು ಸಹ ನೀಡಿದ್ದರು. ಇದಾದ ಕೆಲವೇ ಸಮಯದಲ್ಲಿ ಪೊಲೀಸ್​ ಠಾಣೆಗೆ ಮಾಹಿತಿ ಒಂದು ಬಂದಿತು. ಧರ್ಮಸಮುದ್ರಂ ಕರೆಯಲ್ಲಿ ಎರಡು ಮೃತದೇಹಗಳಿವೆ ಎಂಬ ಮಾಹಿತಿ ಅದಾಗಿತ್ತು. ಮೂವರು ಸ್ನೇಹಿತೆಯರ ಪಾಲಕರನ್ನು ಜತೆಗೆ ಕರೆದೊಯ್ದು ನೋಡಿದಾಗ ಆ ಎರಡು ಮೃತದೇಹ ಮಲ್ಲಿಕಾ ಮತ್ತು ಗಂಗಾಜಲ ಎಂಬುದು ತಿಳಿಯಿತು. ಇದಾದ ಎರಡೇ ಗಂಟೆಯಲ್ಲಿ ವಂದನಾ ಮೃತದೇಹವೂ ಕೂಡ ಅದೇ ಕೆರೆಯಲ್ಲಿ ಪತ್ತೆಯಾಯಿತು.

    ಒಂದೇ ಸಮಯದಲ್ಲಿ ಮೂವರು ಆತ್ಮಹತ್ಯೆ ಮಾಡಿಕೊಂಡಿರಬಹುದಾ? ಅಥವಾ ಮೂವರಲ್ಲಿ ಒಬ್ಬರು ಆಕಸ್ಮಿಕವಾಗಿ ಕೆರೆಗೆ ಬಿದ್ದಾಗ ಕಾಪಾಡಲು ಹೋಗಿ ಮೂವರು ನೀರು ಪಾಲಾಗಿರಬಹುದಾ? ಎಂಬ ಪ್ರಶ್ನೆ ಇದೀಗ ಮೂಡಿದೆ. ಮದುವೆಯಾದ ಎರಡೇ ತಿಂಗಳಲ್ಲಿ ಮಲ್ಲಿಕಾ ಮತ್ತು ಗಂಗಾಜಲ ಮೃತಪಟ್ಟಿದ್ದಾರೆ. ಹೆಣ್ಣು ಮಕ್ಕಳನ್ನು ಕಳೆದುಕೊಂಡು ಕುಟುಂಬದಲ್ಲಿ ಇದೀಗ ಶೋಕ ಸಾಗರ ಆವರಿಸಿದೆ.

    ಅನಾರೋಗ್ಯದಿಂದ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಮಲ್ಲಿಕಾ ತಂದೆ ಹೇಳಿದ್ದಾರೆ. ಗಂಗಾಜಲ ತಂದೆಯು ಕೂಡ ಅದೇ ಕಾರಣವನ್ನು ನೀಡಿದ್ದಾರೆ. ಇಬ್ಬರು ನೀರಿಗೆ ಬಿದ್ದಾಗ ಅವರನ್ನು ಕಾಪಾಡುವ ನಿಟ್ಟಿನಲ್ಲಿ ವಂದನಾ ಮೃತಪಟ್ಟಿರಬಹುದು ಎಂದು ಆಕೆಯ ಪಾಲಕರು ಹೇಳಿದ್ದಾರೆ. ಇದೀಗ ಮೂವರು ಹೆಣ್ಣು ಮಕ್ಕಳನ್ನು ಕಳೆದುಕೊಂಡು ಕುಟುಂಬ ಶೋಕ ಸಾಗರಲ್ಲಿ ಮುಳುಗಿದೆ. (ಏಜೆನ್ಸೀಸ್​)

    ಫೇಸ್​ಬುಕ್​ ಇನ್ಮುಂದೆ ಫೇಸ್​ಬುಕ್​ ಆಗಿ ಉಳಿಯಲ್ಲ: ಘೋಷಣೆ ಆಯ್ತು ಹೊಸ ಹೆಸರು!

    ಕಳ್ಳರಿಗೆ ಹೆದರಿ ರಾಗಿಮೂಟೆಯಲ್ಲಿ ಚಿನ್ನಾಭರಣ ಬಚ್ಚಿಟ್ಟ ಪತ್ನಿ! ಮುಂದಾಗಿದ್ದು ಎಡವಟ್ಟು, ಆದ್ರೂ ಸುಖಾಂತ್ಯ ಕಂಡ ಪ್ರಕರಣ

    ಕೆಆರ್​ಎಸ್​ ಅಣೆಕಟ್ಟೆ ಭರ್ತಿ: ಜಲಾಶಯಕ್ಕೆ 28 ದಿನದಲ್ಲಿ 12 ಅಡಿ ನೀರು

    ಮುಂದಿನ ಮೂರು ವರ್ಷಗಳವರೆಗೆ ಆರ್​ಬಿಐ ಗವರ್ನರ್​ ಆಗಿ ಶಕ್ತಿಕಾಂತ್​ ದಾಸ್​ ಮರು ನೇಮಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts