More

    ಬೆಳ್ಳಂಬೆಳಗ್ಗೆ ಹೆದ್ದಾರಿಯಲ್ಲಿ ಪತ್ತೆಯಾಯ್ತು ಮೂವರ ಮೃತದೇಹ: ಸಿಸಿಟಿವಿ ಕ್ಯಾಮೆರಾ ಹಿಂದೆ ಬಿದ್ದ ಪೊಲೀಸರು!

    ಹೈದರಾಬಾದ್​: ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಓರ್ವ ಯುವತಿ ಸೇರಿದಂತೆ ಮೂವರು ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ಗುರುವಾರ ಬೆಳಗ್ಗೆ ತೆಲಂಗಾಣದ ಔಶಾಪುರದಲ್ಲಿ ನಡೆದಿದೆ.

    ಇದೊಂದು ಹಿಟ್​ ಆ್ಯಂಡ್​ ರನ್​ ಕೇಸ್​ ಆಗಿದ್ದು, ಅಪಘಾತ ಸಂಭವಿಸಿದ ಸ್ಥಳದ ಪಕ್ಕದಲ್ಲಿರುವ ಟೋಲ್​ ಪ್ಲಾಜಾ ಸೇರಿದಂತೆ ಇತರೆ ಪ್ರದೇಶಗಳಲ್ಲಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಔಶಾಪುರದಲ್ಲಿರುವ ರಾಷ್ಟ್ರೀಯ ಹೆದ್ದಾರಿ 163ರಲ್ಲಿ ಗುರುವಾರ ನಸುಕಿನ ಜಾವವೇ ಈ ದುರ್ಘಟನೆ ಸಂಭವಿಸಿದೆ.

    ಮೃತರನ್ನು ಜನಗಾಂವ್ ಜಿಲ್ಲೆಯ​ ದೇವರುಪ್ಪುಳ ಮಂಡಲದ ಸಿಂಗರಾಜುಪಲ್ಲಿ ಗ್ರಾಮದ ನಿವಾಸಿ ಹಾಗೂ ಖಾಸಗಿ ಕಂಪನಿ ಉದ್ಯೋಗಿ ಪಲಡುಗು ನವೀನ್​ (25), ಜನಗಾಂವ್ ಜಿಲ್ಲೆಯ ಘಾನ್ಪುರ್​ ಮಂಡಲದ ಕೊಥಪಲ್ಲಿ ನಿವಾಸಿ ಹಾಗೂ ಖಾಸಗಿ ಕಂಪನಿ ಉದ್ಯೋಗಿ ದಾಸರಿ ನವೀನ್​ (23) ಮತ್ತು ಕರೀಮ್​ನಗರ ಜಿಲ್ಲೆಯ ಮೆಟಪಲ್ಲಿ ಮಂಡಲದ ಮೆಟ್ಲಾಚಿತ್ತಾಪುರ್​ ಗ್ರಾಮದ ನಿವಾಸಿ ಹಾಗೂ ವಿದ್ಯಾರ್ಥಿನಿ ಎನ್​. ವನಿತಾ (21) ಎಂದು ಗುರುತಿಸಲಾಗಿದೆ. ಮೃತಪಟ್ಟು ಮೂವರು ಸಂತ್ರಸ್ತರು ಸಂಬಂಧಿಕರು ಎಂದು ಘಾಟ್ಕೇಸರ್​ ಪೊಲೀಸ್ ಠಾಣೆಯ ಇನ್ಸ್​ಪೆಕ್ಟರ್​ ಎನ್​.ಚಂದ್ರಬಾಬು ತಿಳಿಸಿದ್ದಾರೆ.

    ಮೂವರು ಜನಗಾಂವ್​ ಜಿಲ್ಲೆಯಿಂದ ಉಪ್ಪಾಳ್​ ಕಡೆಗೆ ಬೈಕ್​ನಲ್ಲಿ ಬರುವಾಗ ಅಪಘಾತ ಸಂಭವಿಸಿದೆ. ಮೂವರು ಕೂಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಾಹನ ಸವಾರರು ಗುರುವಾರ ಬೆಳಗ್ಗೆ ಮೃತದೇಹಗಳನ್ನು ನೋಡಿ 5.30ರ ಸುಮಾರಿಗೆ ಪೊಲೀಸರಿಗೆ ಮಾಹಿತಿ ನೀಡಿದಾಗ, ತಕ್ಷಣ ಸ್ಥಳಕ್ಕೆ ಧಾವಿಸಿದ ಗಸ್ತು ತಂಡ, ಸ್ಥಳ ಪರಿಶೀಲನೆ ನಡೆಸಿ, ಶವಪರೀಕ್ಷೆಗೆ ರವಾನಿಸಿದ್ದಾರೆ.

    ಬೈಕ್ ನೋಂದಣಿ ವಿವರಗಳು ಮತ್ತು ಮೃತರ ಐಡಿ ಕಾರ್ಡ್‌ಗಳ ಆಧಾರದ ಮೇಲೆ ಪೊಲೀಸರು ಸಂತ್ರಸ್ತರನ್ನು ಗುರುತಿಸಿದ್ದಾರೆ. ವೈಯಕ್ತಿಕ ಕೆಲಸದ ಮೇಲೆ ಮೂವರು ನಗರಕ್ಕೆ ಬರುತ್ತಿದ್ದರು. ರಸ್ತೆಯ ಎಡಭಾಗದಲ್ಲಿ ಇರುವಾಗ ಅವರಿಗೆ ಅಪರಿಚಿತ ವಾಹನ ಹೊಡೆದಿದೆ. ಸಂತ್ರಸ್ತರು ಪಕ್ಕದ ಸರ್ವಿಸ್ ರಸ್ತೆಯಿಂದ ಹೆದ್ದಾರಿಗೆ ಪ್ರವೇಶಿಸಿದ ಕೂಡಲೇ ಭಾರೀ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡೆದಿರಬಹುದು ಎಂದು ಶಂಕಿಸಲಾಗಿದೆ ಎಂದು ಮಲ್ಕಾಜ್‌ಗಿರಿ ಎಸಿಪಿ ಶ್ಯಾಮ್ ಪ್ರಸಾದ ರಾವ್ ತಿಳಿಸಿದ್ದಾರೆ.

    ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304-ಎ (ಉದ್ದೇಶಪೂರ್ವಕ ಅಥವಾ ನಿರ್ಲಕ್ಷ್ಯದ ಕೃತ್ಯದಿಂದಾಗಿ ಸಾವಿಗೆ ಕಾರಣವಾಗುತ್ತದೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. (ಏಜೆನ್ಸೀಸ್​)

    ಮಗನಿಗೆ PSI ಕೆಲ್ಸ ಕೊಡಿಸೋ ಆಸೆಗೆ ಬಿದ್ದು 30 ಲಕ್ಷ ರೂ. ಕಳ್ಕೊಂಡ ಮಂಡ್ಯ ರೈತ: ಬಡ್ಡಿ ಕಟ್ಟಲಾಗದೇ ಕಣ್ಣೀರಿಡ್ತಿದೆ ಕುಟುಂಬ

    ಬಂಡಾಯ ನಾಯಕ ಏಕನಾಥ್​ ಶಿಂಧೆ ಸಿಡಿಸಿದ ಹೊಸ ಬಾಂಬ್​ಗೆ ಮಹಾ ವಿಕಾಸ್​ ಅಘಾಡಿ ಮತ್ತಷ್ಟು ಗಢಗಢ!

    ಸತತ 5 ದಿನ ಪೆಟ್ರೋಲ್​ ಬಂಕ್​ ಮುಂದಿನ ಕ್ಯೂನಲ್ಲಿ ನಿಂತಿದ್ದ ವ್ಯಕ್ತಿ ದುರಂತ ಸಾವು! ಲಂಕಾದಲ್ಲಿ ದುರ್ಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts