More

    ಯಶ್​ ಫ್ಯಾನ್ಸ್​ಗೆ ಗುಡ್​ನ್ಯೂಸ್​: KGF-3 ಶೂಟಿಂಗ್​, ಸಿನಿಮಾ ಬಿಡುಗಡೆ ಕುರಿತ ಮಹತ್ವದ ಮಾಹಿತಿ ಇದು!

    ಬೆಂಗಳೂರು​: ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಕೆಜಿಎಫ್​ ಚಾಪ್ಟರ್​-2 ಸಿನಿಮಾ ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸಿದೆ. ಸಾವಿರ ಕೋಟಿ ರೂಪಾಯಿ ದಾಟಿದ ಕನ್ನಡದ ಮೊದಲ ಹಾಗೂ ಭಾರತದ ನಾಲ್ಕನೇ ಸಿನಿಮಾ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಇದೀಗ ಅಭಿಮಾನಿಗಳ ಗಮನ ಕೆಜಿಎಫ್​ ಚಾಪ್ಟರ್​ 3 ಕಡೆಗಿದೆ. ಕೆಜಿಎಫ್​-2ನಲ್ಲಿ ಮೂರನೇ ಭಾಗದ ಸುಳಿವು ನೀಡಿದ್ದು, ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲದಂತಾಗಿದೆ. ಆದರೆ, ಕೆಜಿಎಫ್​ 3 ಯಾವಾಗ ಆರಂಭವಾಗುತ್ತದೆ? ಮತ್ತು ಯಾವಾಗ ಬಿಡುಗಡೆಯಾಗಲಿದೆ? ಎಂಬ ಪ್ರಶ್ನೆಯು ಹುಟ್ಟಿಕೊಂಡಿದ್ದು, ಅದಕ್ಕೆ ಉತ್ತರ ಇಲ್ಲಿದೆ.

    ಬೇಸರದ ವಿಚಾರ ಏನೆಂದರೆ, ಕೆಜಿಎಫ್​ 3 ಸದ್ಯಕ್ಕಂತೂ ಬರುವುದಿಲ್ಲ. ಕೆಜಿಎಫ್​-2ಗೆ ಕಾದಿದ್ದಷ್ಟೇ ಸಮಯವನ್ನು ಅಮೂರನೇ ಭಾಗಕ್ಕೂ ಕಾಯಬೇಕಾಗುತ್ತದೆ. ಚಿತ್ರತಂಡ ಕೆಜಿಎಫ್​ 3 ಕುರಿತ ಕೆಲವೊಂದಿಷ್ಟು ಸುಳಿವು ಬಿಟ್ಟರೆ, ಹೆಚ್ಚೇನು ಹೇಳಿಲ್ಲ. ಯಶ್​ ಸೇರಿದಂತೆ ಕೆಜಿಎಫ್​ 2 ಚಿತ್ರದ ಕಲಾವಿದರು ಹೇಳಿರುವ ಪ್ರಕಾರ ಕೆಜಿಎಫ್​ 3 ಬರುವುದು ಗ್ಯಾರೆಂಟಿ. ಆದರೆ, ಯಾವಾಗ ಬರುತ್ತದೆ? ಶೂಟಿಂಗ್​ ಆರಂಭ ಯಾವಾಗ? ಯಾವ ವರ್ಷ ಬಿಡುಗಡೆಯಾಗಬಹುದು ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಮುಂದಿದೆ ಓದಿ.

    ಎಲ್ಲವೂ ಅಂದುಕೊಂಡಂತೆ ನಡೆದರೆ, ಕೆಜಿಎಫ್​-3 ಚಿತ್ರದ ಶೂಟಿಂಗ್​ 2023ರ ಅಂತ್ಯದಲ್ಲಿ ಪ್ರಾರಂಭವಾಗಲಿದೆ. ನಟ ಯಶ್​ 2024ಕ್ಕೆ ಶೂಟಿಂಗ್​ನಲ್ಲಿ ತೊಡಗಿಕೊಳ್ಳುವ ಸಾಧ್ಯತೆ ಇದೆ. ಎಡಿಟಿಂಗ್​ ಮತ್ತು ವಿಎಫ್​ಎಕ್ಷ್​ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿಕೊಂಡು 2025ನೇ ವರ್ಷಕ್ಕೆ ಚಿತ್ರಮಂದಿರಗಳಿಗೆ ಲಗ್ಗೆ ಇಡುವ ಸಾಧ್ಯತೆ ಇದೆ ಎಂಬ ಮಾತುಗಳು ಟಾಲಿವುಡ್​ ಗಲ್ಲಿಯಿಂದ ಕೇಳಿಬರುತ್ತದೆ. ಏಕೆಂದರೆ, ಸದ್ಯ ಪ್ರಶಾಂತ್​ ನೀಲ್​ ತೆಲುಗಿನಲ್ಲಿ ಬೀಡುಬಿಟ್ಟಿರುವುದರಿಂದ ಪ್ರಶಾಂತ್​ ಕುರಿತ ಸುದ್ದಿಗಳು ಟಾಲಿವುಡ್​ನಲ್ಲಿ ಹೆಚ್ಚು ಪ್ರಕಟವಾಗುತ್ತಿವೆ.

    ಸದ್ಯ ನಿರ್ದೇಶಕ ಪ್ರಶಾಂತ್​ ನೀಲ್​ ಪ್ರಭಾಸ್​ ನಟನೆಯ ಸಲಾರ್​ ಚಿತ್ರದ ಮೇಲೆ ಸಂಪೂರ್ಣ ಗಮನ ಹರಿಸಿದ್ದಾರೆ. ಕೆಜಿಎಫ್​-2 ಬಿಡುಗಡೆಗೆ ಕೊಂಚ ಸಮಯ ತೆಗೆದುಕೊಂಡಿದ್ದ ಪ್ರಶಾಂತ್​ ಇದೀಗ ಮತ್ತೆ ಸಲಾರ್​ ಶೂಟಿಂಗ್​​ನಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರ ಮುಗಿಯಲು ಒಂದು ವರ್ಷಕ್ಕೂ ಅಧಿಕ ಸಮಯ ತೆಗೆದುಕೊಳ್ಳಲಿದೆ. ಸಲಾರ್​ ಪೂರ್ಣಗೊಂಡ ಬಳಿಕ ಜೂ.ಎನ್​ಟಿಆರ್​ ಅವರ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ. ಆ ಚಿತ್ರ ಮುಗಿಯಲು ಮತ್ತೆ ಒಂದು ವರ್ಷ ಆಗಬಹುದು. ಇದಾದ ಬಳಿಕ ಕೆಜಿಎಫ್​ 3 ಕೈಗೆತ್ತಿಕೊಂಡರು ಒಂದು ವರ್ಷ ಶೂಟಿಂಗ್​ ಅಂತಾ ಲೆಕ್ಕ ಹಾಕಿದರೂ ಕನಿಷ್ಟ ಅಂದ್ರು ಇನ್ನು 3 ವರ್ಷ ಆಗುತ್ತದೆ.

    ಮತ್ತೊಮ್ಮೆ ಕೆಜಿಎಫ್​ ಚಿತ್ರತಂಡದ ದೃಶ್ಯ ವೈಭವ ಹಾಗೂ ಪವರ್​ಫುಲ್​ ಆ್ಯಕ್ಷನ್​ ಚಿತ್ರವನ್ನು ನೋಡಲು ಇನ್ನಷ್ಟು ವರ್ಷಗಳು ಕಾಯಬೇಕಾಗಿರುವುದು ಒಂದು ಮಟ್ಟಿಗೆ ಬೇಸರ ಉಂಟು ಮಾಡಿರುವುದಂತೂ ಸತ್ಯ. ಆದರೂ ಕಾದಷ್ಟು ಮತ್ತೊಂದು ಒಳ್ಳೆಯ ಸಿನಿಮಾ ಸಿಗಲಿದೆ ಎಂಬುದೇ ಸಮಾಧಾನಕರ ಸಂಗತಿಯು ಆಗಿದೆ. ಮುಂದಿನ ದಿನಗಳಲ್ಲಿ ಯಾವ ಅಪ್​ಡೇಟ್​ಗಳು ಈ ಸಿನಿಮಾ ಬಗ್ಗೆ ಬರಲಿವೆ ಎಂದು ಕಾದು ನೋಡಬೇಕಿದೆ. ಈ ಮೇಲಿನ ಮಾಹಿತಿ ಸಿನಿ ಮೂಲಗಳಿಂದ ಬಂದದ್ದಾಗಿದೆ. ಆದರೆ, ಚಿತ್ರತಂಡ ಏನನ್ನೂ ಹೇಳಿಲ್ಲ. ಮುಂದಿನ ದಿನಗಳಲ್ಲಿ ಚಿತ್ರತಂಡ ಏನು ಹೇಳಲಿದೆ ಎಂಬುದೇ ಕುತೂಹಲಕಾರಿಯಾಗಿದೆ. (ಏಜೆನ್ಸೀಸ್​)

    ಹೃದಯಾಘಾತದಿಂದ ಕೊರಿಯೋಗ್ರಾಫರ್ ಟೀನಾ ಸಿಧು ಗೋವಾದಲ್ಲಿ ನಿಧನ

    ಕಾಸರಗೋಡಿನ ನಟಿ-ರೂಪದರ್ಶಿ ಸಂಶಯಾಸ್ಪದ ಸಾವು: ಮೃತಳ ಮನೆಯಲ್ಲಿ ಪತ್ತೆಯಾಯ್ತು ಅಪಾಯಕಾರಿ ವಸ್ತು!

    ಆ್ಯಸಿಡ್ ದಾಳಿ ಪ್ರಕರಣ: ಎಸ್ಕೇಪ್​ ಆಗಲು ಹೈಡ್ರಾಮ ಮಾಡಿದ ಆರೋಪಿ ನಾಗೇಶ್​ ಕಾಲಿಗೆ ಗುಂಡೇಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts