More

    ತಾಜ್ ಮಹಲ್ ಕೂಡ ಹಿಂದೂ ದೇವಸ್ಥಾನ ಆಗಿತ್ತು ಎಂಬುದಕ್ಕೆ ಪುರಾವೆಗಳಿವೆ!

    ಭಾರತದ ಇತಿಹಾಸದ ಪುಟಗಳಲ್ಲಿ ತಾಜ್‌ಮಹಲ್‌ಗೆ ಪ್ರೀತಿಯ ಸಂಕೇತ ಎಂಬ ಹೆಸರು ನೀಡಲಾಗಿದೆ. ಶಹಜಹಾನ್ ತಾನು ಅತ್ಯಂತ ಹೆಚ್ಚು ಪ್ರೀತಿಸುತ್ತಿದ್ದ ಪತ್ನಿ ಮುಮ್ತಾಜ್ ಮೃತಪಟ್ಟಾಗ ಆಕೆಯ ನೆನಪಿಗಾಗಿ ಇದನ್ನು ಕಟ್ಟಿಸಿದ್ದ ಎಂದು ನಾವು ಪುಸ್ತಕಗಳಲ್ಲಿ ಓದಿದ್ದೇವೆ. ಆದರೆ ಕೆಲವು ಇತಿಹಾಸಕಾರರು ಇದನ್ನು ಒಪ್ಪುವುದಿಲ್ಲ. ಇದೆಲ್ಲ ಸುಳ್ಳಿನ ಕಂತೆ ಎಂಬುದು ಅವರ ಖಚಿತ ಅಭಿಪ್ರಾಯ. ತಾಜ್‌ ಮಹಲನ್ನು ಶಹಜಹಾನ್ ಕಟ್ಟಿಸಲಿಲ್ಲ. ಅಲ್ಲಿ ಮೊದಲೇ ಬೃಹತ್ತಾದ ಒಂದು ಹಿಂದೂ ದೇವಸ್ಥಾನ ಇತ್ತು. ಅದಕ್ಕೆ ಶಹಜಹಾನ್ ಕಾಲದಲ್ಲಿ ಇಸ್ಲಾಮಿಕ್ ರೂಪ ನೀಡಲಾಯಿತು ಎನ್ನುತ್ತಾರೆ ಪ್ರಸಿದ್ಧ ಇತಿಹಾಸಕಾರ ಪುರುಷೋತ್ತಮ್ ನಾಗೇಶ್ ಓಕ್. ತಾಜ್‌ಮಹಲ್‌ನ ನಿಜರೂಪವನ್ನು ಅವರು ತಮ್ಮ ಒಂದು ಪುಸ್ತಕದಲ್ಲಿ ತೆರೆದಿಟ್ಟಿದ್ದಾರೆ.

    ಭಾರತಕ್ಕೆ ದಾಳಿ ಮಾಡಿದ ನಂತರ ಲೂಟಿ ಮಾಡಿದ ಸಂಪತ್ತನ್ನು ಶಹಜಹಾನ್, ತಾಜ್‌ಮಹಲ್ ಇರುವ ಸ್ಥಳದಲ್ಲಿ ಮುಚ್ಚಿಟ್ಟಿದ್ದ. ಅಲ್ಲಿ ಯಾರೂ ಬರಬಾರದು ಎಂಬ ಕಾರಣಕ್ಕೆ ಅದೊಂದು ಸಮಾಧಿಸ್ಥಳ ಎಂದು ಪ್ರಚಾರ ಮಾಡಿದ. ಒಂದು ವೇಳೆ ಅದು ಮುಮ್ತಾಜ್‌ಳ ಸಮಾಧಿ ಸ್ಥಳವೇ ಆಗಿದ್ದರೆ ಆ ವಿಷಯವನ್ನು ಇತಿಹಾಸದ ಪುಟಗಳಲ್ಲಿ ಅಚ್ಚೊತ್ತುವಂತೆ ಕಲ್ಲುಗಳಲ್ಲಿ ಕೆತ್ತಿಸುತ್ತಿದ್ದನಲ್ಲವೇ? ಆದರೆ ಮುಮ್ತಾಜ್‌ಳನ್ನು ಅಲ್ಲಿ ಯಾವಾಗ, ಯಾವ ದಿನದಂದು ದಫನ್ ಮಾಡಲಾಯಿತು ಎಂಬುದರ ಉಲ್ಲೇಖ ಎಲ್ಲಿಯೂ ಇಲ್ಲ. ಆಮೇರದ ರಾಜ ಜೈಸಿಂಗ್‌ನ ಮೇಲೆ ಶಹಜಹಾನ್ ದಬ್ಬಾಳಿಕೆ ಮಾಡಿ, ಅವನ ಮಹಲನ್ನು, ಅಂದರೆ ತಾಜ್‌ಮಹಲನ್ನು, ಕಬಳಿಸಿದ್ದಲ್ಲದೆ ಅವನಿಂದ ವಶಪಡಿಸಿಕೊಂಡ ಸಂಪತ್ತನ್ನು ಅದರ ನೆಲಮಾಳಿಗೆಯಲ್ಲಿ ಬಚ್ಚಿಟ್ಟ. ಆ ಸಂಪತ್ತು ಈಗಲೂ ಅಲ್ಲೇ ಇದೆ ಎಂದು ಹೇಳಲಾಗುತ್ತದೆ.

    ಇತಿಹಾಸಕಾರ ಪಿ.ಎನ್. ಓಕ್ ಹೇಳುವ ಪ್ರಕಾರ, ಮುಮ್ತಾಜ್ ಬಗ್ಗೆ ಶಹಜಹಾನ್‌ಗೆ ಹೇಳಿಕೊಳ್ಳುವಂತಹ ಪ್ರೀತಿಯೇನೂ ಇರಲಿಲ್ಲ. ಆಕೆ ಅವನ ಮೊದಲ ರಾಣಿಯೇನಲ್ಲ. ಅಂತಹ ಸಾವಿರಾರು ಸುಂದರ ಸ್ತ್ರೀಯರು ಅವನ ಬಳಿ ಇದ್ದರು. ಹಾಗಾಗಿ ಯಾವುದೋ ಒಬ್ಬ ಪತ್ನಿಯನ್ನು ಶಹಜಹಾನ್ ಯಾಕೆ ಲೆಕ್ಕಕ್ಕೆ ಇಟ್ಟುಕೊಳ್ಳುತ್ತಾನೆ? ಮುಮ್ತಾಜ್ ಬದುಕಿದ್ದಾಗ ಅವಳ ಹೆಸರಿನಲ್ಲಿ ಯಾವ ಮಹಲನ್ನೂ ನಿರ್ಮಿಸಲಾರದ ಶಹಜಹಾನ್, ಆಕೆ ಸತ್ತ ಮೇಲೆ ಯಾಕೆ ಮಹಲು ನಿರ್ಮಿಸುತ್ತಾನೆ? ಮುಮ್ತಾಜ್ ಸತ್ತಿದ್ದು 1631ರಲ್ಲಿ, ಬುರ್ಹಾನ್‌ಪುರದ ಬುಲಾರಾ ಮಹಲ್‌ನಲ್ಲಿ. ಅವಳ ಪಾರ್ಥಿವ ಶರೀರವನ್ನು ಹೂಳಿದ್ದು ಅಲ್ಲೇ. ಅದಾದ ಆರು ತಿಂಗಳ ನಂತರ, ರಾಜಕುಮಾರ ಶಾ ಶುಜಾನ ಮೇಲ್ವಿಚಾರಣೆಯಲ್ಲಿ ಮುಮ್ತಾಜ್‌ಳ ಶವವನ್ನು ಆಗ್ರಾಕ್ಕೆ ತರಲಾಯಿತಂತೆ. ಆಗ್ರಾದ ದಕ್ಷಿಣದಲ್ಲಿ ಅದನ್ನು ಹೂಳಲಾಯಿತು. ಕೆಲ ಸಮಯದ ನಂತರ ಮತ್ತೆ ಅದನ್ನು ತಂದು ತಾಜ್‌ಮಹಲ್‌ನಲ್ಲಿ ಹೂಳಲಾಯಿತು. ಆಗ ಆ ಸ್ಥಳವನ್ನು ಶಹಜಹಾನ್ ಎಷ್ಟು ಸುಂದರವಾಗಿ ಸಜ್ಜುಗೊಳಿಸಿದನೆಂದರೆ, ಅದನ್ನು ನೋಡಿದವರೆಲ್ಲರೂ ಶಹಜಹಾನ್, ಮುಮ್ತಾಜ್‌ಳನ್ನು ತುಂಬಾ ಪ್ರೀತಿಸುತ್ತಾನೆ ಅಂತಲೇ ಅಂದುಕೊಂಡರು. ಅಷ್ಟೇ ಅಲ್ಲ, ತಾಜ್‌ಮಹಲನ್ನು ಪ್ರೇಮದ ಪ್ರತೀಕ ಎಂದು ಸಿಕ್ಕಸಿಕ್ಕಲ್ಲೆಲ್ಲ ಬರೆಯತೊಡಗಿದರು.

    ಮುಮ್ತಾಜ್ ಮೃತಪಟ್ಟಿದ್ದು, ಶಹಜಹಾನ್ ‘ಬಾದ್‌ಷಾ’ ಸ್ಥಾನವನ್ನು ಅಲಂಕರಿಸಿ 2-3 ವರ್ಷ ಕಳೆದ ನಂತರ. ಭಾರತದ ಇತಿಹಾಸದಲ್ಲೆಲ್ಲೂ ಅವರಿಬ್ಬರ ಪ್ರೇಮದ ಉಲ್ಲೇಖವೇ ಇಲ್ಲ. ಕೆಲವು ಬ್ರಿಟಿಷ್ ಇತಿಹಾಸಕಾರರು ಈ ಕಲ್ಪಿತ ಪ್ರೇಮದ ಬಗ್ಗೆ ಅಲ್ಲಲ್ಲಿ ಉಲ್ಲೇಖಿಸಿದ್ದನ್ನೇ ಭಾರತೀಯ ಇತಿಹಾಸಕಾರರು ವಿಸ್ತರಿಸಿ ಬರೆದರು. ತಾಜ್‌ಮಹಲ್‌ನ ಆವರಣದಲ್ಲಿ ಅತಿಥಿಗೃಹ, ಕಾವಲುಗಾರರ ಕೋಣೆಗಳು, ಹಸುಗಳನ್ನು ಕಟ್ಟುವ ಕೊಟ್ಟಿಗೆ ಮುಂತಾದವೆಲ್ಲ ಇವೆ. ಸಮಾಧಿ ಸ್ಥಳದಲ್ಲಿ ಇವೆಲ್ಲವನ್ನೂ ನಿರ್ಮಿಸುವ ಅವಶ್ಯಕತೆ ಏನಿತ್ತು?

    ಈ ಕಾರಣಕ್ಕಾಗಿಯೇ, ಇದು ಒಂದು ಹಿಂದು ದೇವಾಲಯವಾಗಿತ್ತು ಎನ್ನುವುದು ಸಾಬೀತಾಗುತ್ತದೆ ಎಂದು ಪಿ.ಎನ್. ಓಕ್ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ಇದಕ್ಕೆ ಪೂರಕವಾಗಿ ಅವರು ಹಲವು ಸಾಕ್ಷೃಗಳನ್ನು ಒದಗಿಸಿದ್ದಾರೆ. ತಾಜ್‌ಮಹಲ್ ಮೇಲಿನ ಕಳಶ ಹಿಂದು ದೇವಸ್ಥಾನದ ಕಳಶದಂತಿದೆ. ದೇವಸ್ಥಾನಗಳ ಮೇಲೆ ಚಿನ್ನದ ಕಳಶ ಸ್ಥಾಪಿಸುವ ಸಂಪ್ರದಾಯ ಮೊದಲಿನಿಂದಲೂ ಇದೆ. ತಾಜ್‌ಮಹಲ್‌ನ ನಿರ್ಮಾಣ ಕಾರ‌್ಯ 1632ರಲ್ಲಿ ಆರಂಭವಾಗಿ 1653ರಲ್ಲಿ ಪೂರ್ಣಗೊಂಡಿತು ಎಂದು ಇತಿಹಾಸದ ಪುಸ್ತಕಗಳಲ್ಲಿ ಇದೆ. ಮುಮ್ತಾಜ್‌ಳ ಸಾವು 1631ರಲ್ಲಿ ಸಂಭವಿಸಿರುವಾಗ ಅದೇ ವರ್ಷ ಹೇಗೆ ಆಕೆಯ ಪಾರ್ಥಿವ ಶರೀರವನ್ನು ತಾಜ್‌ಮಹಲ್‌ನಲ್ಲಿ ಹೂಳಲು ಸಾಧ್ಯ? ಆಗ ಇನ್ನೂ ತಾಜ್‌ಮಹಲ್ ನಿರ್ಮಾಣವೇ ಆಗಿರಲಿಲ್ಲ ಅಲ್ಲವೇ? ಅದರ ನಿರ್ಮಾಣ ಆರಂಭವಾಗಿದ್ದೇ 1632ರಲ್ಲಿ.

    ನಿಜ ಹೇಳಬೇಕೆಂದರೆ, 1632ರಲ್ಲಿ ಅಲ್ಲಿದ್ದ ಹಿಂದೂ ದೇವಸ್ಥಾನಕ್ಕೆ ಇಸ್ಲಾಮಿಕ್ ರೂಪ ನೀಡುವ ಕಾರ‌್ಯ ಆರಂಭವಾಯಿತು. 1649ರಲ್ಲಿ ಅದರ ಮುಖ್ಯ ದ್ವಾರ ನಿರ್ಮಾಣವಾಯಿತು. ಅದರ ಮೇಲೆ ಕುರಾನ್‌ನ ಬರಹಗಳನ್ನು ಅಳವಡಿಸಲಾಯಿತು. ಭಾರತಕ್ಕೆ ಪ್ರವಾಸ ಬಂದಿದ್ದ ಜೆ.ಆಲ್ಬರ್ಟ್ ಮಂಡೇಸ್ಲೋ ಎಂಬಾತ, ಮುಮ್ತಾಜಳ ಸಾವಿನ ಏಳು ವರ್ಷಗಳ ನಂತರ ‘ವಾಯೇಜಸ್ ಆ್ಯಂಡ್ ಟ್ರಾವೆಲ್ಸ್ ಇಂಟು ದ ಈಸ್ಟ್ ಇಂಡೀಸ್’ ಎಂಬ ಪುಸ್ತಕ ಬರೆದಿದ್ದಾನೆ. ತಾನು ಆಗ್ರಾದಲ್ಲಿ ಆಗ ಕಂಡ ದೃಶ್ಯಗಳನ್ನು ಅದರಲ್ಲಿ ದಾಖಲಿಸಿದ್ದಾನೆ. ಆದರೆ ಅದರಲ್ಲೆಲ್ಲೂ ತಾಜ್‌ಮಹಲ್ ನಿರ್ಮಾಣ ಕುರಿತ ಉಲ್ಲೇಖ ಇಲ್ಲ. 20 ಸಾವಿರ ಕಾರ್ಮಿಕರು 22 ವರ್ಷಗಳ ಕಾಲ ತಾಜ್‌ಮಹಲ್ ನಿರ್ಮಾಣ ಮಾಡಿದ್ದು ನಿಜವೇ ಆಗಿದ್ದರೆ ಅಷ್ಟು ದೊಡ್ಡ ಕಾರ್ಯವನ್ನು ಮಂಡೇಸ್ಲೊ ತನ್ನ ಪುಸ್ತಕದಲ್ಲಿ ಖಂಡಿತವಾಗಿಯೂ ಉಲ್ಲೇಖ ಮಾಡುತ್ತಿದ್ದನಲ್ಲವೇ?

    ತಾಜ್‌ಮಹಲ್‌ನ ಮುಖ್ಯದ್ವಾರದ ಕಟ್ಟಿಗೆಯ ಕಾರ್ಬನ್ ಡೇಟಿಂಗ್ ಟೆಸ್ಟ್ ಅನ್ನು ಅಮೆರಿಕದ ಪ್ರಯೋಗಾಲಯದಲ್ಲಿ ಮಾಡಿದ್ದಾರೆ. ಆ ಕಟ್ಟಿಗೆ ಶಹಜಹಾನ್‌ನ ಕಾಲಕ್ಕಿಂತ ಮುನ್ನೂರು ವರ್ಷ ಹಳೆಯದು ಎಂಬುದು ಅದರಲ್ಲಿ ಸಾಬೀತಾಗಿದೆ. ಅದಲ್ಲದೇ ಸಮಾಧಿಯನ್ನು ಮಹಲ್ ಅಂತ ಕರೆದಿದ್ದೇಕೆ ಎಂಬುದು ಕೂಡ ಯೋಚಿಸಬೇಕಾದ ಸಂಗತಿ. ತಾಜ್‌ಮಹಲ್ ಮೊದಲೇ ಇತ್ತು, ಅದನ್ನು ಸಮಾಧಿಯಾಗಿ ಬದಲಾವಣೆ ಮಾಡಲಾಯಿತು ಎಂಬ ಅಂಶ ಇದರಿಂದ ಸಾಬೀತಾಗುತ್ತದೆ. ಶಹಜಹಾನ್ ತಪ್ಪು ಮಾಡಿದ್ದು ಇಲ್ಲೇ. ಅದರ ಸ್ವರೂಪವನ್ನು ಆತ ಬದಲಿಸಿದ. ಆದರೆ ಹೆಸರು ಬದಲಿಸುವಲ್ಲಿ ಎಡವಿಬಿಟ್ಟ.

    ನೆಮ್ಮದಿಯಾಗಿ ನಿದ್ದೆ ಮಾಡ್ಬೇಕಂದ್ರೆ ಜಾಸ್ತಿ ಹಣ ಮಾಡ್ಬೇಡಿ, ಇಲ್ಲಾಂದ್ರೆ ಈ ರೀತಿ ಆಗುತ್ತೆ ಅಂದ್ರು ಕೆಜಿಎಫ್​ ಬಾಬು!

    VIDEO: ಹೊರಗಿಟ್ಟಿರೋ ಶೂಸ್​ ಧರಿಸೋ ಮುನ್ನ ಎಚ್ಚರ: ಪ್ರಾಣಕ್ಕೇ ಕುತ್ತಾದೀತು! ತುಮಕೂರಿನ ಶಾಕಿಂಗ್​ ವಿಡಿಯೋ ನೋಡಿ…

    ಐಷಾರಾಮಿ ಜೀವನಕ್ಕಾಗಿ ಕೆಟ್ಟ ಕೆಲ್ಸಕ್ಕೆ ಇಳಿದಿದ್ದ ಯೂಟ್ಯೂಬರ್ ಅರೆಸ್ಟ್​: ಮನೆಯಲ್ಲಿ ಮೂಟೆಗಟ್ಟಲೆ ಚಪ್ಪಲಿ, ಶೂಗಳು ಪತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts