More

  ಪತಿಯನ್ನು ಕೊಂದವರಿಗೆ ಆಕರ್ಷಕ ಬಹುಮಾನ: ವ್ಯಾಟ್ಸ್ಆ್ಯಪ್ ಸ್ಟೇಟಸ್​ ಹಾಕಿ ಸುಪಾರಿ ಕೊಟ್ಟ ಪತ್ನಿ!

  ಲಕ್ನೋ: ಮದುವೆಯಾದ ನಂತರ ಪ್ರತಿಯೊಬ್ಬರು ತಾವು ಸಂತೋಷದಿಂದ ಇರಬೇಕೆಂದು ಬಯಸುತ್ತಾರೆ. ಆದರೆ ಎಷ್ಟೇ ಖುಷಿಯಾಗಿರಬೇಕೆಂದುಕೊಂಡರೂ ಯಾವುದಾದರೂ ಒಂದು ವಿಚಾರಕ್ಕೆ ಆಗಾಗ ಜಗಳಗಳು ನಡೆಯುತ್ತಲೇ ಇರುತ್ತದೆ. ಇದಕ್ಕೆ ಹಲವಾರು ಕಾರಣಗಳಿದ್ದು, ಆ ಜಗಳಗಳನ್ನು ಆಗಾಗಲೇ ಪರಿಹರಿಸಿಕೊಳ್ಳಬೇಕು. ಇಲ್ಲದಿದ್ದರೆ ಕ್ರಮೇಣ ಸಂಸಾರದಲ್ಲಿ ಬಿರುಗಾಳಿ ಎದ್ದೇಳಬಹುದು. ಇಂತಹದ್ದೇ ಘಟನೆ ನಡೆದಿದೆ.

  ಇದನ್ನೂ ಓದಿ: ಕೇಜ್ರಿವಾಲ್ ಸಿಂಹ, ಹೆಚ್ಚು ಕಾಲ ಜೈಲಿನಲ್ಲಿಡಲು ಸಾಧ್ಯವಿಲ್ಲ: ಸುನೀತಾ ಕೇಜ್ರಿವಾಲ್

  ತನ್ನ ಪತಿಯನ್ನು ಕೊಂದಿದ್ದವರಿಗೆ ಬರೋಬ್ಬರಿ 50 ಸಾವಿರ ರೂ. ನೀಡುವುದಾಗಿ ಪತ್ನಿಯೊಬ್ಬಳು ತನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ಘೋಷಿಸಿದ್ದಾಳೆ ಎಂದು ಆರೋಪಿಸಿ ಗಂಡ ಪೊಲೀಸರಿಗೆ ದೂರು ನೀಡಿರುವ ಘಟನೆ ಆಗ್ರಾದ ಬಹ್ ಜಿಲ್ಲೆಯಲ್ಲಿ ನಡೆದಿದೆ. ತನ್ನ ಪತ್ನಿಯ ವಾಟ್ಸಾಪ್ ಸ್ಟೇಟಸ್ ನೋಡಿ ಗಾಬರಿಗೊಂಡ ಪತಿ ಪೊಲೀಸರಿಗೆ ದೂರು ನೀಡಿದ್ದು, ನನಗೆ ಬೆದರಿಕೆ ಹಾಕಿದ್ದಾರೆ ಎಂದು ಪತ್ನಿಯ ಸ್ನೇಹಿತನ ಮೇಲೂ ದೂರು ನೀಡಲಾಗಿದೆ. ಪತಿಯ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

  ಪೊಲೀಸರಿಗೆ ನೀಡಿದ ದೂರಿನಲ್ಲಿ ಏನಿದೆ?: ಜುಲೈ 9, 2022 ರಂದು ಮಧ್ಯಪ್ರದೇಶದ ಭಿಂಡ್‌ನ ಹಳ್ಳಿಯೊಂದರ ಹುಡುಗಿಯನ್ನು ವಿವಾಹವಾದೆ. ಮದುವೆಯ ನಂತರ ಆಗಾಗ್ಗೆ ನಮ್ಮಿಬ್ಬರ ನಡುವೆ ಮನಸ್ತಾಪಗಳು ಉಂಟಾದವು. ಐದು ತಿಂಗಳ ನಂತರ ಡಿಸೆಂಬರ್ 2022 ರಲ್ಲಿ ಅವರ ಪತ್ನಿ ತನ್ನ ತಂದೆ ತಾಯಿಯ ಮನೆಗೆ ಹೋದಳು ಮತ್ತು ಅಂದಿನಿಂದ ಅಲ್ಲಿಯೇ ವಾಸವಿದ್ದಾಳೆ.

  ಡಿಸೆಂಬರ್ 21, 2023 ರಂದು ಭಿಂಡ್​ನಿಂದ ಹಿಂತಿರುಗುವಾಗ, ಮಾವನ ಮನೆಯವರು ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದರು. ಇದಾದ ಕೆಲವೇ ದಿನಗಳಲ್ಲಿ ನನ್ನ ಪತ್ನಿ ನನ್ನ ಪತಿಯನ್ನು ಕೊಲ್ಲುವ ವ್ಯಕ್ತಿಗೆ 50 ಸಾವಿರ ರೂ. ಬಹುಮಾನ ನೀಡುವುದಾಗಿ ತನ್ನ ವಾಟ್ಸಾಪ್‌ನಲ್ಲಿ ಸ್ಟೇಟಸ್​ನಲ್ಲಿ ಹಾಕಿಕೊಂಡಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾನೆ.

  ನನ್ನ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದೇನೆ’ ಎಂದು ಪತ್ನಿಯ ಸ್ಟೇಟಸ್‌ನಲ್ಲಿ ಬರೆಯಲಾಗಿದೆ ಎಂದು ಯುವಕ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಪತಿಯನ್ನು ಕೊಂದವರಿಗೆ 50,000 ರೂಪಾಯಿ ಬಹುಮಾನ ನೀಡಲಾಗುವುದು. ಪತ್ನಿಯ ವಿರುದ್ಧ ಪೊಲೀಸರಿಗೆ ದೂರು ನೀಡಿ ರಕ್ಷಣೆ ಕೋರಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಬಹ್ ಪೊಲೀಸ್ ಠಾಣೆ ಪ್ರಭಾರಿ ಶ್ಯಾಮ್ ಸಿಂಗ್ ತಿಳಿಸಿದ್ದಾರೆ.

  ನನ್ನದು ಪಕ್ಕಾ ಲವ್‌ ಮ್ಯಾರೇಜ್‌, ಆದರೆ ಒಂದು ಕಂಡೀಷನ್….: ನಟ ವಿಜಯ್​ ಮನದಾಳದ ಮಾತು!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts