More

    ಅನುಮಾನ ಬಂದ ಕೂಡಲೇ ಸಬ್​ ಇನ್ಸ್​ಪೆಕ್ಟರ್​ನನ್ನು ತಡೆದ ಪೊಲೀಸರಿಗೆ ಕಾದಿತ್ತು ಬಿಗ್​ ಶಾಕ್​..!

    ವಿಜಯವಾಡ: ಬೈಕ್​ನಲ್ಲಿ ಬರುತ್ತಿದ್ದ ಸಬ್​ ಇನ್ಸ್​ಪೆಕ್ಟರ್​ ಮೇಲೆ ಅನುಮಾನ ಮೂಡಿ ಆತನನ್ನು ತಡೆದು ಪೊಲೀಸರು ಪರಿಶೀಲನೆ ನಡೆಸುವಾಗ ಎಲ್ಲರು ಶಾಕ್​ ಆಗುವಂತಹ ಸಂಗತಿ ಬಯಲಾದ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.

    ಶಾಕಿಂಗ್​ ವಿಚಾರವೆಂದರೆ, ಪರಿಶೀಲನೆ ನಡೆಸಿದಾಗ ಆತ ಒರಿಜಿನಲ್​ ಪೊಲೀಸ್​ ಅಲ್ಲ, ಅವನೊಬ್ಬ ನಕಲಿ ಪೊಲೀಸ್​ ಎಂಬುದು ಗೊತ್ತಾಗಿದ್ದು, ವಿಶಾಖಪಟ್ಟಣದ ಅಂಕಪಲ್ಲಿ ಪಟ್ಟಣ ಪೊಲೀಸರು ನಕಲಿ ಎಸ್​ಐನನ್ನು ಬಂಧಿಸಿದ್ದಾರೆ. ಬಂಧಿತನನ್ನು ಪುಡಿ ಮಹೇಶ್​ ಅಲಿಯಾಸ್​ ಮತ್ಸ್ಯರಾಜು ಎಂದು ಗುರುತಿಸಲಾಗಿದೆ. ಈತ ಆಂಧ್ರದ ಚಿಡಿಕಡಾ ಮಂಡಲದ ವೀರಭದ್ರ ರಾವ್​ ಪೇಟಾ ಗ್ರಾಮದ ನಿವಾಸಿ.

    ಪೊಲೀಸರಿಗೆ ಸಿಕ್ಕಿಬಿದ್ದ ಬಳಿಕ ಎಸ್ಕೇಪ್​ ಆಗಲು ನಕಲಿ ಎಸ್​ಐ ಪ್ರಯತ್ನಿಸಿದಾದರೂ ಅದು ಸಾಧ್ಯವಾಗಲಿಲ್ಲ. ಪೊಲೀಸ್​ ಯೂನಿಫಾರ್ಮ್​, ಸ್ಟಾರ್ಸ್​ ಮತ್ತು ವಿಸಲ್​ ಗಾರ್ಡ್​ ಎಲ್ಲವನ್ನು ಖರೀದಿಸಿದ್ದಾನೆ. ಸಿನಿಮಾ ಶೂಟಿಂಗ್​ಗಾಗಿ ಎಸ್​ಐ ವೇಷ ದೋರೆಯುವ ವಿಶಾಖಪಟ್ಟಣಂ ಮಾರ್ಕೆಟ್​ನಲ್ಲಿ ಎಲ್ಲವನ್ನು ಖರೀದಿ ಮಾಡಿದ್ದಾನೆ.

    ಯೂನಿಫಾರ್ಮ್​ ಮಾತ್ರವಲ್ಲ ಆರೋಪಿ ನಕಲಿ ಐಡಿ ಕೂಡ ಸೃಷ್ಟಿ ಮಾಡಿಕೊಂಡಿದ್ದಾನೆ. ಡ್ರೈವಿಂಗ್​ ಲೈಸೆನ್ಸ್​ ಪಡೆದುಕೊಳ್ಳಲು ಆರೋಪಿ ಯೂನಿಫಾರ್ಮ್​ನಲ್ಲೇ ಆರ್​ಟಿಒ ಕಚೇರಿಗೆ ಹೋಗಿದ್ದ. ಗುರುವಾರ ಅಂಕಪಲ್ಲಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬೈಕ್​ ರೈಡ್​ ಮಾಡುವಾಗ ಅನುಮಾನ ಬಂದ ಹಿನ್ನೆಲೆಯಲ್ಲಿ ಮಹೇಶ್​ನನ್ನು ಬಂಧಿಸಲಾಗಿದೆ. ಆರೋಪಿ ಮೇಲೆ ವಂಚನೆ ಪ್ರಕರಣವನ್ನು ದಾಖಲಿಸಲಾಗಿದೆ. (ಏಜೆನ್ಸೀಸ್​)

    ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಹಲ್ಲೆ-ಅತ್ಯಾಚಾರ ಯತ್ನ ಕೇಸ್​: ತಾನೇ ಎಣೆದ ಬಲೆಗೆ ಸಿಲುಕಿಕೊಂಡ ಯುವತಿ?

    ಹಾಸ್ಟೆಲ್​ ರಹಸ್ಯ ಮುಚ್ಚಿಕೊಳ್ಳಲು ಯುವತಿಯ ನಾಟಕ: ಮೈಸೂರು ವಿದ್ಯಾರ್ಥಿನಿ ಅತ್ಯಾಚಾರ ಯತ್ನ ಕೇಸ್​ಗೆ ಟ್ವಿಸ್ಟ್!

    ಪಕ್ಕದಲ್ಲಿ ಖಾಲಿ ಇದೆ ಯಾರಾದ್ರೂ ಬರ್ತೀರಾ? ನೆಟ್ಟಿಗರಿಗೆ ಮಾಜಿ ನೀಲಿ ತಾರೆಯ ಬಿಗ್​ ಆಫರ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts