More

    ತಂದೆ ಮಾತಿಗೆ ಮಗನ ಬೆಂಬಲ: ಟಾಲಿವುಡ್​ನಲ್ಲಿ ಅಲ್ಲೋಲ್ಲ ಕಲ್ಲೋಲ ಸೃಷ್ಟಿಸುತ್ತಾ ನಾಗಚೈತನ್ಯ ಹೇಳಿಕೆ

    ಹೈದರಾಬಾದ್​: ಅಕ್ಕಿನೇನಿ ನಾಗಾರ್ಜುನ, ನಾಗಚೈತನ್ಯ, ರಮ್ಯಾಕೃಷ್ಣ ಮತ್ತು ಕೃತಿಶೆಟ್ಟಿ ಕಾಂಬಿನೇಷನ್​ನಲ್ಲಿ ಮೂಡಿಬಂದಿರುವ “ಬಂಗಾರರಾಜು” ಚಿತ್ರದ ಜನವರಿ 14ರಂದು ಬೆಳ್ಳಿತೆರೆಗೆ ಅಪ್ಪಳಿಸಲಿದೆ. ಇಡೀ ಚಿತ್ರತಂಡ ಪ್ರಚಾರದ ಕೆಲಸದಲ್ಲಿ ಬಿಜಿಯಾಗಿದ್ದು, ಇದರ ನಡುವೆ ವೈಯಕ್ತಿಕ ಜೀವನದ ಬಗ್ಗೆ ಪ್ರಶ್ನೆ ಮಾಡಿದ ಮಾಧ್ಯಮಗಳ ವಿರುದ್ಧ ನಟ ನಾಗಚೈತನ್ಯ ಹರಿಹಾಯ್ದಿದ್ದಾರೆ.

    ಸಮಂತಾ ಮತ್ತು ನಾಗಚೈತನ್ಯ ಡಿವೋರ್ಸ್​ ಆಗಿ ಸಾಕಷ್ಟು ದಿನಗಳೇ ಕಳೆದಿದ್ದರೂ ಮಾಧ್ಯಮಗಳು ಮಾತ್ರ ಆ ಬಗ್ಗೆ ಈಗಲೂ ಪ್ರಶ್ನಿಸುವುದನ್ನು ಕೇಳಿ ನಾಗಚೈತನ್ಯ ಕುಪಿತಗೊಂಡರು. ಬಂಗಾರರಾಜು ಚಿತ್ರದ ಪ್ರಚಾರದ ವೇಳೆ ಮಾಧ್ಯಮದವರು ಡಿವೋರ್ಸ್​ ವಿಚಾರ ಪ್ರಸ್ತಾಪಿಸಿದ್ದಕ್ಕೆ ಗರಂ ಆದ ನಾಗಚೈತನ್ಯ, ಇಬ್ಬರ ಒಳಿತಿಗಾಗಿ ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್​ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಅವರು ಕೂಡ ಸಂತೋಷವಾಗಿದ್ದಾರೆ ಮತ್ತು ನಾನು ಕೂಡ ಸಂತೋಷವಾಗಿದ್ದೇನೆ ಎಂದು ಹೇಳಿದರು.

    ಇದಾದ ಬಳಿಕ ಆಂಧ್ರದ ಸಿನಿಮಾ ಟಿಕೆಟ್​ ದರ ಕಡಿತದ ಬಗ್ಗೆ ಮಾತನಾಡಿದ ನಾಗಚೈತನ್ಯ, ದರ ಇಳಿಕೆಯಿಂದ ನಮಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಹೇಳಿದ್ದ ತಂದೆ ನಾಗಾರ್ಜುನರ ಹೇಳಿಕೆಯನ್ನು ಮಗ ಕೂಡ ಬೆಂಬಲಿಸಿದರು. ದರ ಏರಿಕೆ ಬಗ್ಗೆ ಚರ್ಚೆಯಾದಾಗ ಬಜೆಟ್​ ಒಳಗೆ ಸಿನಿಮಾ ಮುಗಿಸಲು ಮೊದಲೇ ಪ್ಲಾನ್​ ಮಾಡಿದ್ದೆವು ಎಂದಿದ್ದಾರೆ.

    ಒಂದು ವೇಳೆ ಸಿನಿಮಾ ಟಿಕೆಟ್​ ದರ ಮತ್ತೆ ಏರಿಕೆಯಾದರೆ, ನಮಗದು ಬೋನಸ್​ ಇದ್ದಂಗೆ. ಏನೇ ಇರಲಿ ಬಂಗಾರರಾಜು ಸಿನಿಮಾ ಜನವರಿ 14ರಂದು ಬಿಡುಗಡೆಯಾಗಲಿದೆ ಎಂದು ನಾಗಚೈತನ್ಯ ಹೇಳಿದರು. ಆದರೆ, ಚಿತ್ರರಂಗದಲ್ಲಿ ಬಹುತೇಕರು ದರ ಇಳಿಕೆಯನ್ನು ಖಂಡಿಸಿದ್ದಾರೆ. ಬಿಗ್​ ಬಜೆಟ್​ ಸಿನಿಮಾಗಳಿಗೆ ಇದರಿಂದ ಹೊಡೆತ ಬೀಳಲಿದೆ ಎಂದು ಅನೇಕ ನಟರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ, ಆಂಧ್ರ ಸರ್ಕಾರ ಮಾತ್ರ ದರ ಇಳಿಕೆ ನಿಲುವಿನಿಂದ ಬದಲಾಗಿಲ್ಲ. ಇದೀಗ ಚಿತ್ರರಂಗದಲ್ಲಿ ಭಿನ್ನ ನಿಲುವು ಇರುವುದನ್ನು ನೋಡಿದರೆ ಟಾಲಿವುಡ್​ನಲ್ಲಿ ಎಲ್ಲವೂ ಸರಿಯಿಲ್ಲ ಎಂಬಂತೆ ಕಾಣುತ್ತದೆ. (ಏಜೆನ್ಸೀಸ್​)

    ಸೈನಾ ನೆಹ್ವಾಲ್​ ಬಳಿ ಕ್ಷಮೆಯಾಚಿಸಿದ್ರೂ ಮುಗಿಯದ ವಿವಾದ: ತೀವ್ರ ಟೀಕೆಯ ಬಳಿಕ ಸಿದ್ಧಾರ್ಥ್​ಗೆ ಮತ್ತೊಂದು ಶಾಕ್​!

    ಶೂನ್ಯ ಕೋವಿಡ್​ ನಿಯಮ: ಚೀನಾ ಜನರ ಸದ್ಯದ ಪರಿಸ್ಥಿತಿ ನೋಡಿದ್ರೆ ಬೆಚ್ಚಿಬೀಳೋದು ಗ್ಯಾರೆಂಟಿ..!

    ಐಪಿಎಲ್ ಹೊಸ ತಂಡಗಳಿಗೆ ಹರಾಜಿಗೆ ಮುನ್ನವೇ 3 ಆಟಗಾರರು; ರಾಹುಲ್, ಹಾರ್ದಿಕ್‌ಗೆ ಸಾರಥ್ಯ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts