More

  ಶ್ರೀನಗರಲ್ಲಿ ಪೊಲೀಸ್​ ಬಸ್​ ಮೇಲೆ ಉಗ್ರರ ದಾಳಿ: ಇಬ್ಬರು ಹುತಾತ್ಮ, 12 ಮಂದಿಗೆ ಗಾಯ, ಪ್ರಧಾನಿ ಸಂತಾಪ

  ಶ್ರೀನಗರ: ಪೊಲೀಸ್​ ಬಸ್​ ಗುರಿಯಾಗಿರಿಸಿಕೊಂಡು ಉಗ್ರರಿಬ್ಬರು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಪೊಲೀಸರು ಮೃತಪಟ್ಟಿದ್ದು, 12 ಮಂದಿ ಗಾಯಗೊಂಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಹೊರವಲಯದ ಜೆವಾನ್ ಬಳಿಯಿರುವ ಪೊಲೀಸ್​ ಕ್ಯಾಂಪ್​ನಲ್ಲಿ ನಡೆದಿದೆ.

  ವಿವಿಧ ರಕ್ಷಣಾ ಪಡೆಗಳು ನೆಲೆಸಿದ್ದ ಕ್ಯಾಂಪ್​ಗಳಿಂದಲೇ ಕೂಡಿರುವ ಹೆಚ್ಚು ಸುರಕ್ಷಿತ ಪ್ರದೇಶದಲ್ಲಿ ನಿಂತಿದ್ದ ಬಸ್​ ಮೇಲೆಯೇ ಉಗ್ರರು ದಾಳಿ ನಡೆಸಿದ್ದಾರೆ. ಪಾಟ್ನಾ ಚೌಕ್​ ಸಮೀಪವೇ ಘಟನೆ ನಡೆದಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

  ಸದ್ಯ ಉಗ್ರರ ಹುಡುಕಾಟಕ್ಕಾಗಿ ಘಟನೆ ನಡೆದ ಪ್ರದೇಶವನ್ನು ಸೇನಾ ಪಡೆಗಳು ಸುತ್ತುವರಿದಿದ್ದು, ಉಗ್ರರನ್ನು ಮಟ್ಟ ಹಾಕಲು ತೀವ್ರ ಶೋಧ ನಡೆಸುತ್ತಿದ್ದಾರೆ.

  ಘಟನೆ ಸಂಬಂಧ ಪ್ರಧಾನಿ ಮೋದಿ ಕಾರ್ಯಾಲಯ ಟ್ವೀಟ್​ ಮಾಡಿದ್ದು, ಘಟನೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಕೇಳಿದೆ. ಅಲ್ಲದೆ, ದಾಳಿಯಲ್ಲಿ ಹುತಾತ್ಮರಾದ ಪೊಲೀಸರಿಗೆ ಪ್ರಧಾನಿ ಮೋದಿ ಸೂಚಿಸಿದ್ದು, ಗಾಯಗಳುಗಳು ಶೀಘ್ರ ಚೇತರಿಸಿಕೊಳ್ಳಲು ಪ್ರಾರ್ಥಿಸಿದ್ದಾರೆ. (ಏಜೆನ್ಸೀಸ್​)

  ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತದ ಸಾಂಸ್ಕೃತಿಕ-ಆಧ್ಯಾತ್ಮಿಕ ಜಾಗೃತಿ

  ಹೊಸ ಕಾಶಿ, ದೇಶಕ್ಕೆ ಹೊಸ ದಿಶೆ: ಸ್ವಚ್ಛತೆ, ಸೃಜನೆ-ನವೋನ್ವೇಷಣೆ, ಸ್ವಾವಲಂಬಿ ಭಾರತ

  ಸಂಪಾದಕೀಯ | ತಾರ್ಕಿಕ ಅಂತ್ಯಕ್ಕೆ ತನ್ನಿ; ಪರ್ಸಂಟೇಜ್ ಆರೋಪದ ಗದ್ದಲ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts