ರಾಯದುರ್ಗ: ಮಹಿಳಾ ಟೆಕ್ಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್ನ ಗಾಚಿಬೌಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತಳನ್ನು ಸ್ಮೃತಿಖಾ ಫರೀದಾ (26) ಎಂದು ಗುರುತಿಸಲಾಗಿದೆ. ಈಕೆ ಒಡಿಶಾದ ಭುವನೇಶ್ವರ ಮೂಲದವಳು. ಸಾಫ್ಟ್ವೇರ್ ಇಂಜಿನಿಯರ್ ಆಗಿ ಹೈದರಾಬಾದ್ನಲ್ಲಿ ಕೆಲಸ ಮಾಡುತ್ತಿದ್ದ ಫರೀದಾ ಗೌಲಿದೊಡ್ಡಿಯಲ್ಲಿ ಮಹಿಳಾ ಪಿಜಿಯಲ್ಲಿ ಉಳಿದುಕೊಂಡಿದ್ದಳು.
ಸೋಮವಾರ ಬೆಳಗ್ಗೆ ತನ್ನ ಸಹೋದ್ಯೋಗಿ ಜಾನ್ಗೆ ಕರೆ ಮಾಡಿದ್ದಳು. ಇದಾದ ಬಳಿಕ ಆಕೆ ಹಾಸ್ಟೆಲ್ನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಹಾಸ್ಟೆಲ್ ಮ್ಯಾನೇಜರ್ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.
ಘಟನಾ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹವನ್ನು ಒಸ್ಮಾನಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಆತ್ಮಹತ್ಯೆಗೆ ಕಾರಣ ಏನೆಂಬುದು ಇನ್ನು ತಿಳಿದುಬಂದಿಲ್ಲ. ಸದ್ಯ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್)
ಒಂದು ವೇಳೆ ರಷ್ಯಾ-ಯೂಕ್ರೇನ್ ಯುದ್ಧಕ್ಕೆ ಮುಂದಾದ್ರೆ ಭಾರತದಲ್ಲಿ ಏನೆಲ್ಲಾ ದುಬಾರಿಯಾಗಲಿದೆ?
ಬಸ್ಗೆ ಪ್ರಯಾಣಿಕರನ್ನು ಹತ್ತಿಸಿ ರೈಟ್ ರೈಟ್… ಹೇಳುತ್ತಲೇ ಕೊನೆಯುಸಿರೆಳೆದ ತುಮಕೂರಿನ ಕಂಡಕ್ಟರ್
ತಗೊಂಡಿದ್ದು 10 ಸಾವಿರ, ಕಟ್ಟಿದ್ದು 7 ಲಕ್ಷ ರೂ.! ಆನ್ಲೈನ್ ಆ್ಯಪ್ನಲ್ಲಿ ಸಾಲ ಪಡೆದವನಿಗೆ ಬಂದ ಕಷ್ಟ ಅಷ್ಟಿಷ್ಟಲ್ಲ