More

    ಟಿಸಿಎಸ್ ವರ್ಲ್ಡ್ 10ಕೆ ಮ್ಯಾರಥಾನ್​ನಲ್ಲಿ ಮಣ್ಣು ಉಳಿಸಿ ಅಭಿಯಾನಕ್ಕಾಗಿ ಓಡಿದ ಈಶ ಬ್ರಹ್ಮಚಾರಿಗಳು, ಸ್ವಯಂಸೇವಕರು

    ಬೆಂಗಳೂರು: ಮಣ್ಣು ಉಳಿಸುವ ತೀವ್ರ ಅವಶ್ಯಕತೆಯ ಕುರಿತು ಅರಿವು ಮೂಡಿಸಲು ಈಶ ಫೌಂಡೇಶನ್​ನ ಬ್ರಹ್ಮಚಾರಿಗಳು ಹಾಗು ಈಶ ಸ್ವಯಂಸೇವಕರು ಇಂದು ನಮ್ಮ ಬೆಂಗಳೂರಿನಲ್ಲಿ ನಡೆದ ಟಿಸಿಎಸ್ ವರ್ಲ್ಡ್ 10ಕೆ ಮ್ಯಾರಥಾನ್‌ನಲ್ಲಿ ಭಾಗವಹಿಸಿದರು.

    ಬೆಳಗ್ಗಿನ ಜಾವ 5:30 ಗೆ ಕಂಠೀರವ ಟಿಸಿಎಸ್ ವರ್ಲ್ಡ್ 10ಕೆ ಮ್ಯಾರಥಾನ್​ನಲ್ಲಿ ಮಣ್ಣು ಉಳಿಸಿ ಅಭಿಯಾನಕ್ಕಾಗಿ ಓಡಿದ ಈಶ ಬ್ರಹ್ಮಚಾರಿಗಳು, ಸ್ವಯಂಸೇವಕರುಸ್ಟೇಡಿಯಂನಿಂದ ಆರಂಭವಾದ ಮ್ಯಾರಾಥಾನ್​ನಲ್ಲಿ ಒಟ್ಟಾರೆ 110 ಈಶ ಸ್ವಯಂಸೇವಕರು ಹಾಗು ಬ್ರಹ್ಮಚಾರಿ/ಬ್ರಹ್ಮಚಾರಿಣಿಯರು ಪಾಲ್ಗೊಂಡರು. ಈಶ ಬ್ರಹ್ಮಚಾರಿಗಳು ಹಾಗು ಸ್ವಯಂಸೇವಕರು ಇದು ಸತತವಾಗಿ 5ನೇ ಬಾರಿ ಬೆಂಗಳೂರಿನ ಟಿಸಿಎಸ್ 10ಕೆ ಮ್ಯಾರಥಾನ್‌ನಲ್ಲಿ ಪಾಲ್ಗೊಂಡಿದ್ದಾರೆ.

    ಟಿಸಿಎಸ್ ವರ್ಲ್ಡ್ 10ಕೆ ಮ್ಯಾರಥಾನ್​ನಲ್ಲಿ ಮಣ್ಣು ಉಳಿಸಿ ಅಭಿಯಾನಕ್ಕಾಗಿ ಓಡಿದ ಈಶ ಬ್ರಹ್ಮಚಾರಿಗಳು, ಸ್ವಯಂಸೇವಕರು

    ಓಡುವುದು ಬಹುಶಃ ಬ್ರಹ್ಮಚಾರಿಗಳ ದಿನಚರಿಯ ಭಾಗವಾಗಿರದೇ ಇದ್ದರೂ, ಅವರು ಮ್ಯಾರಥಾನ್‌ನಲ್ಲಿ ಭಾಗವಹಿಸಲು ಅತ್ಯಂತ ಸೂಕ್ತವಾದವರು. ಅವರ ದೈನಂದಿನ ಸಾಧನೆಯು ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಹಾಗೂ ಚುರುಕುತನವನ್ನು ಹೆಚ್ಚಿಸಲು ಸದ್ಗುರುಗಳಿಂದ ವಿಶೇಷವಾಗಿ ವಿನ್ಯಾಸಗೊಳಿಸಲ್ಪಟ್ಟ ಯೋಗಾಭ್ಯಾಸಗಳನ್ನು ಒಳಗೊಂಡಿದೆ.

    ಟಿಸಿಎಸ್ ವರ್ಲ್ಡ್ 10ಕೆ ಮ್ಯಾರಥಾನ್​ನಲ್ಲಿ ಮಣ್ಣು ಉಳಿಸಿ ಅಭಿಯಾನಕ್ಕಾಗಿ ಓಡಿದ ಈಶ ಬ್ರಹ್ಮಚಾರಿಗಳು, ಸ್ವಯಂಸೇವಕರು

    ಶಕ್ತಿಯ ಉನ್ನತ ಆಯಾಮಗಳನ್ನು ಪೋಷಿಸಲು ಜೀವವ್ಯವಸ್ಥೆಯನ್ನು ಅಣಿಗೊಳಿಸಲು ಯೋಗಾಸನಗಳನ್ನು ಬಳಸಿಕೊಳ್ಳುವ ಶಾಸ್ತ್ರೀಯ ಯೋಗದ ರೂಪವಾದ ಹಠಯೋಗ ಮತ್ತು ಅಂಗಾಂಗಗಳ ಮೇಲೆ ಹತೋಟಿಯನ್ನು ಸಾಧಿಸಲು ಸಹಾಯ ಮಾಡುವ ಹಾಗೂ ಶರೀರದ ಶಕ್ತಿರಚನೆಯನ್ನು ಬಲಪಡಿಸುವ ಅಂಗಮರ್ದನ ಅವರ ದೈನಂದಿನ ಯೋಗಾಭ್ಯಾಸಗಳಲ್ಲಿ ಸೇರಿದೆ.

    ಇದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುವ ಇಚ್ಛೆಯಿದ್ದಲ್ಲಿ, ಈ ಕೆಳಗಿನ ಈ-ಮೇಲ್ ವಿಳಾಸಕ್ಕೆ ಬರೆಯಿರಿ [email protected] ಅಥವಾ ಈ ಸಂಖ್ಯೆಗೆ ಕರೆ ಮಾಡಿ : 9900509142

    ಮಣ್ಣು ಉಳಿಸಿ ಅಭಿಯಾನ: ಪ್ರತ್ಯೇಕ ಕಾರ್ಯನೀತಿಗಾಗಿ 195 ದೇಶಗಳ ಮುಖ್ಯಸ್ಥರಿಗೆ ಸದ್ಗುರು ಆಗ್ರಹ

    ಇಸ್ರೇಲ್​ ಆವಿಷ್ಕಾರಗಳಿಂದ ಪ್ರಪಂಚ ಕಲಿಯುವುದಿದೆ ಬಹಳ: ಟೆಲ್​ ಅವಿವ್​ನಲ್ಲಿ ಸದ್ಗುರು ಅಭಿಪ್ರಾಯ

    ಹಿಂದಿನ ಕಹಿಯಲ್ಲಿ ನಮ್ಮ ಮಕ್ಕಳ ಭವಿಷ್ಯವನ್ನು ಬಲಿಕೊಡಬಾರದು: ಪ್ಯಾಲೆಸ್ತೀನ್‌ನಿಂದ ಸದ್ಗುರುಗಳ ಮನವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts