More

    ಮಣ್ಣು ಉಳಿಸಿ ಅಭಿಯಾನ: ಪ್ರತ್ಯೇಕ ಕಾರ್ಯನೀತಿಗಾಗಿ 195 ದೇಶಗಳ ಮುಖ್ಯಸ್ಥರಿಗೆ ಸದ್ಗುರು ಆಗ್ರಹ

    ಐವರಿಕೋಸ್ಟ್: ಮಣ್ಣು ರಕ್ಷಣೆ ಸಲುವಾಗಿ ಈಶ ಫೌಂಡೇಷನ್​​ನ ಸದ್ಗುರು ನೂರು ದಿನಗಳಲ್ಲಿ 27 ರಾಷ್ಟ್ರಗಳ ಮೂಲಕ 30 ಸಾವಿರ ಕಿಲೋಮೀಟರ್ ದೂರವನ್ನು ಏಕಾಂಗಿಯಾಗಿ ಬೈಕ್​ನಲ್ಲಿ ಪ್ರಯಾಣಿಸಿ ಜಾಗೃತಿ ಮೂಡಿಸಲು ಪಣತೊಟ್ಟಿದ್ದು, ಅದರ ಅಂಗವಾಗಿ ಅವರು ಸದ್ಯ ಐವರಿಕೋಸ್ಟ್​ನ ಅಬಿಡ್ಜಾನ್​​ಗೆ ತೆರಳಿದ್ದಾರೆ. ಮಾತ್ರವಲ್ಲ ಅಲ್ಲಿನ ಯುಎನ್​ಸಿಸಿಡಿಯ ಕಾಪ್​ 15ನೇ ಅಧಿವೇಶನದಲ್ಲಿ 195 ರಾಷ್ಟ್ರಗಳ ಮುಖ್ಯಸ್ಥರನ್ನು ಉದ್ದೇಶಿಸಿ ಮಾತನಾಡಿದರು.

    ಈ ಸಂದರ್ಭದಲ್ಲಿ ಒಂದು ಬಹುಮುಖ್ಯ ಉದ್ದೇಶವನ್ನು ಪ್ರಸ್ತುತ ಪಡಿಸಿದ ಸದ್ಗುರು, ಕೃಷಿ ಮಣ್ಣಿನಲ್ಲಿ ಕನಿಷ್ಠ ಶೇ. 3ರಿಂದ 6 ಸಾವಯವ ಅಂಶವಿರುವುದನ್ನು ಖಚಿತಪಡಿಸಿಕೊಳ್ಳುವುದು ಮತ್ತು ಅದನ್ನು ಸಾಧಿಸಲು ಮೂರು ಹಂತಗಳ ಕಾರ್ಯತಂತ್ರವನ್ನು ಒದಗಿಸಿದರು.

    ಈ ಸಭೆಯಲ್ಲಿ ಪ್ರಪಂಚದ ಎಲ್ಲ ದೇಶಗಳ ಭಾಗಿದಾರಿಕೆಯು ವಿಶ್ವಾದ್ಯಂತ ಕೃಷಿ ಭೂಮಿಯ ಅವನತಿಯನ್ನು ಹಿಮ್ಮೆಟ್ಟಿಸುವ ಗುರಿಯನ್ನು ಹೊಂದಿರುವ ಸರ್ಕಾರಿ ಕಾರ್ಯನೀತಿ ಬದಲಾವಣೆಯ ಪ್ರಯತ್ನಗಳನ್ನು ದ್ವಿಗುಣಗೊಳಿಸುವ ಒಂದು ಪ್ರಮುಖ ಅವಕಾಶವಾಗಿದೆ ಮತ್ತು ಹಾಗೆ ಮಾಡುವುದರಿಂದ ನಾಗರಿಕತೆಯನ್ನು ಮಣ್ಣಿನ ಅಳಿವಿನ ಅಂಚಿನಿಂದ ಹಿಂದಿರುಗಿಸುತ್ತದೆ ಎಂದು ಸದ್ಗುರು ಒತ್ತಿ ಹೇಳಿದರು.

    ದೊಡ್ಡ ಪ್ರಮಾಣದಲ್ಲಿ ಮಣ್ಣನ್ನು ಉಳಿಸಲು ನಾವು ಆಳವಾಗಿ ಬೇರೂರಿರುವ ಜನಾಂದೋಲನವನ್ನು ರೂಪಿಸಬೇಕಾಗಿದೆ. ನಾವು ಎದುರಿಸುತ್ತಿರುವ ಪರಿಸರ ಸಮಸ್ಯೆಯ ಸಂಕೀರ್ಣ ಸ್ವರೂಪದ ಹೊರತಾಗಿಯೂ, ಪರಿಹಾರದ ಕ್ರಮವನ್ನು ಸಂಕ್ಷಿಪ್ತವಾಗಿ ಮತ್ತು ಸರಳವಾದ ರೀತಿಯಲ್ಲಿ ವ್ಯಕ್ತಪಡಿಸಿದ ಏಕ-ಮನಸ್ಸಿನ ಕೇಂದ್ರಬಿಂದುವಾಗಿ ಮಾರ್ಪಡಿಸಿದರೆ ಮಾತ್ರ ಯಶಸ್ವಿ ಜನಾಂದೋಲ ರಚಿಸಬಹುದು. ನಮ್ಮ ಪರಿಸರ ಕಾಳಜಿಯ ಪ್ರಯತ್ನದ ಇತಿಹಾಸವು ಕೆಲವೇ ಕೆಲವು ನಿಸ್ಸಂದಿಗ್ಧವಾದ ಯಶಸ್ಸನ್ನು ತೋರಿದೆ. ಹೆಚ್ಚಾಗಿ ನಾವು ಸಂಕೀರ್ಣವಾದ ವೈಜ್ಞಾನಿಕ ವಾದಗಳನ್ನು ಸರಳವಾದ ಕ್ರಿಯೆಗಳಾಗಿ ಪರಿವರ್ತಿಸಲು ವಿಫಲರಾಗಿದ್ದೇವೆ. 1987ರ ಮಾಂಟ್ರಿಯಲ್ ಪ್ರೋಟೋಕಾಲ್​ಅನ್ನು ಇಲ್ಲಿಯವರೆಗಿನ ಏಕೈಕ ಅತ್ಯಂತ ಯಶಸ್ವಿ ಅಂತಾರಾಷ್ಟ್ರೀಯ ಒಪ್ಪಂದವೆಂದು ಶ್ಲಾಘಿಸಲಾಗುತ್ತದೆ. ಏಕೆಂದರೆ ಅದು ಕೇವಲ ಓಝೋನ್ ಪದರದ ಸವಕಳಿಯನ್ನು ನಿಲ್ಲಿಸುವಷ್ಟಕ್ಕೆ ಸೀಮಿತವಾಗಿತ್ತು ಎಂದು ಸದ್ಗುರು ಹೇಳಿದರು.

    ಮಣ್ಣು ಉಳಿಸಿ ಅಭಿಯಾನ: ಪ್ರತ್ಯೇಕ ಕಾರ್ಯನೀತಿಗಾಗಿ 195 ದೇಶಗಳ ಮುಖ್ಯಸ್ಥರಿಗೆ ಸದ್ಗುರು ಆಗ್ರಹ

    ಅದೇ ರೀತಿಯಲ್ಲಿ, ವಿವಿಧ ರೀತಿಯ ಮಣ್ಣಿನ ಪರಿಸ್ಥಿತಿಗಳಲ್ಲಿ, ವಿವಿಧ ಕೃಷಿ-ಹವಾಮಾನ ವಲಯಗಳಲ್ಲಿ ಮತ್ತು ಸಾಂಸ್ಕೃತಿಕ ಮತ್ತು ಆರ್ಥಿಕ ಸಂಪ್ರದಾಯಗಳ ವಿಭಿನ್ನ ಸಂದರ್ಭಗಳಲ್ಲಿ ಮಣ್ಣಿನ ಅವನತಿಯ ಸಮಸ್ಯೆಯನ್ನು ಹೇಗೆ ನಿರ್ವಹಿಸುವುದು ಎಂಬುದರ ಕುರಿತು ಅನೇಕ ವೈಜ್ಞಾನಿಕ ಸೂಕ್ಷ್ಮ ವ್ಯತ್ಯಾಸಗಳಿವೆ. ಅದೇನೇ ಇದ್ದರೂ, ಒಂದು ಪ್ರಮುಖ ಉದ್ದೇಶವನ್ನು ಪ್ರಸ್ತುತ ಪಡಿಸಲು ಸಾಧ್ಯವಿದೆ. ಕೃಷಿ ಮಣ್ಣಿನಲ್ಲಿ ಕನಿಷ್ಠ ಶೇ. 3ರಿಂದ 6 ಸಾವಯವ ಅಂಶವಿದೆ ಎಂದು ಖಚಿತಪಡಿಸಿಕೊಳ್ಳುವುದು. ಇದು ನಮ್ಮ ಮಣ್ಣನ್ನು ಜೀವಂತವಾಗಿರಿಸುತ್ತದೆ ಮತ್ತು ಎಲ್ಲಾ ಕೃಷಿ ಭೂಮಿಯಲ್ಲಿ ಸುಸ್ಥಿರವಾಗಿ ಅಭಿವೃದ್ಧಿ ಹೊಂದುತ್ತದೆ ಎಂದು ಹೇಳಿದರು.

    ಕೃಷಿ ಮಣ್ಣಿನಲ್ಲಿ ಕನಿಷ್ಠ ಶೇ. 3ರಿಂದ 6 ಸಾವಯವ ಅಂಶವನ್ನು ಖಾತ್ರಿಪಡಿಸುವ ಈ ವ್ಯಾಪಕ ಉದ್ದೇಶವನ್ನು ಪ್ರಾಯೋಗಿಕ ಮೂರು ಹಂತಗಳ ಕಾರ್ಯತಂತ್ರದೊಂದಿಗೆ ಸಾಧಿಸಬಹುದು ಎಂಬುದನ್ನು ಅವರು ವಿವರಿಸಿದರು.

    ಮೊದಲನೆಯದಾಗಿ ಈ ಮಿತಿಯನ್ನು ತಲುಪಲು ಆಕರ್ಷಕ ಪ್ರೋತ್ಸಾಹವನ್ನು ನೀಡುವ ಮೂಲಕ ಶೇ. 3ರಿಂದ 6 ಸಾವಯವ ಅಂಶದ ಕನಿಷ್ಠ ಮಿತಿಯನ್ನು ಸಾಧಿಸಲು ನಾವು ರೈತರಿಗೆ ಮಹತ್ವಾಕಾಂಕ್ಷೆಯನ್ನು ಕೊಡಬೇಕಾಗಿದೆ. ಇಂತಹ ಪ್ರೋತ್ಸಾಹಗಳು ರೈತರಲ್ಲಿ ಮಹತ್ವಾಕಾಂಕ್ಷೆಯ ಜನಾಂಗವನ್ನೇ ಸೃಷ್ಟಿಸುತ್ತವೆ. ಕೆಲವು ವರ್ಷಗಳಲ್ಲಿ ಒಂದು ಹಂತದ ಅನುಷ್ಠಾನದ ಕಾರ್ಯಕ್ರಮ ಇರಬೇಕು ಎಂಬುದು ಗಮನಿಸಬೇಕು. ಮೊದಲ ಹಂತವು ಸ್ಫೂರ್ತಿಯನ್ನು ಒದಗಿಸುವುದು, ನಂತರ ಎರಡನೇ ಹಂತವು ಪ್ರೋತ್ಸಾಹವನ್ನು ಒದಗಿಸುವುದು ಮತ್ತು ಅಂತಿಮವಾಗಿ ಮೂರನೇ ಹಂತದಲ್ಲಿ ಕೃಷಿಗೆ ಹಾನಿಕರವಾದ ಕೆಲವು ಪದ್ಧತಿಗಳನ್ನು ನಿಲ್ಲಿಸಲು ಪ್ರೋತ್ಸಾಹ ನೀಡುವುದು ಎಂಬುದನ್ನು ತಿಳಿಸಿದರು.

    ಎರಡನೆಯ ಹಂತದಲ್ಲಿ ನಾವು ರೈತರಿಗೆ ಕೊಡುವ ಇಂಗಾಲದ ಕ್ರೆಡಿಟ್ ಪ್ರೋತ್ಸಾಹಕಗಳನ್ನು ಸುಗಮಗೊಳಿಸಬೇಕಾಗಿದೆ. ಇಂಗಾಲದ ಕ್ರೆಡಿಟ್ ಪ್ರಯೋಜನಗಳನ್ನು ಪಡೆಯಲು ರೈತರಿಗೆ ಪ್ರಸ್ತುತ ಪ್ರಕ್ರಿಯೆಗಳು ತುಂಬಾ ಸಂಕೀರ್ಣವಾಗಿವೆ. ಆದ್ದರಿಂದ ಗಮನಾರ್ಹವಾದ ಸರಳೀಕರಣದ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟರು.

    ಮಣ್ಣು ಉಳಿಸಿ ಅಭಿಯಾನ: ಪ್ರತ್ಯೇಕ ಕಾರ್ಯನೀತಿಗಾಗಿ 195 ದೇಶಗಳ ಮುಖ್ಯಸ್ಥರಿಗೆ ಸದ್ಗುರು ಆಗ್ರಹಮೂರನೆಯದಾಗಿ ಶೇ. 3ರಿಂದ 6 ಸಾವಯವ ಅಂಶದ ಮಟ್ಟವನ್ನು ಹೊಂದಿರುವ ಮಣ್ಣಿನಿಂದ ಬೆಳೆದ ಆಹಾರಕ್ಕಾಗಿ ನಾವು ಉತ್ತಮ ಗುಣಮಟ್ಟದ ಗುರುತನ್ನು ಅಭಿವೃದ್ಧಿಪಡಿಸಬೇಕಾಗಿದೆ. ಇದನ್ನು ಮಾಡುವುದರ ಜೊತೆಗೆ ಅಂತಹ ಆಹಾರಗಳನ್ನು ಸೇವಿಸುವ ವಿವಿಧ ಆರೋಗ್ಯ, ಪೌಷ್ಟಿಕಾಂಶ ಮತ್ತು ರೋಗಗಳನ್ನು ತಡೆಗಟ್ಟುವ ಆರೋಗ್ಯ ಪ್ರಯೋಜನಗಳನ್ನು ನಾವು ಸ್ಪಷ್ಟವಾಗಿ ಹೇಳಬೇಕು. ಈ ಉಪಕ್ರಮದ ಪರಿಣಾಮವಾಗಿ, ಜನರು ಹೆಚ್ಚು ಆರೋಗ್ಯಕರ, ಹೆಚ್ಚು ಉತ್ಪಾದಕ ಮತ್ತು ಹೆಚ್ಚು ಪ್ರತಿರೋಧಕರಾಗುತ್ತಾರೆ. ಇದರಿಂದಾಗಿ ಆಯುರ್​​ವೃದ್ಧಿ ಮತ್ತು ನಮ್ಮ ಆರೋಗ್ಯ ರಕ್ಷಣಾ ವ್ಯವಸ್ಥೆಗಳ ಮೇಲೆ ಕಡಿಮೆ ಒತ್ತಡ ಉಂಟಾಗುತ್ತದೆ ಎಂದರು.

    ಸದ್ಯ ಸಮಯ ಮೀರುತ್ತಿದ್ದರೂ ಅದೃಷ್ಟವಶಾತ್ ನಮಗೆ ಏನು ಮಾಡಬೇಕೆಂದು ತಿಳಿದಿದೆ. ಸೂಕ್ತವಾದ ಸರ್ಕಾರದ ಕಾರ್ಯನೀತಿಗಳ ಅಭಿವೃದ್ಧಿಯೊಂದಿಗೆ, ಮಣ್ಣಿನ ಅವನತಿಯನ್ನು ನಾವು ಹಿಮ್ಮೆಟ್ಟಿಸಬಹುದು. ಪ್ರಪಂಚದಾದ್ಯಂತ ಕ್ಷಿಪ್ರವಾದ ಸರ್ಕಾರಿ ನೀತಿ ವಿಕಸನದ ಈ ಕಾರ್ಯವನ್ನು ಸುಗಮಗೊಳಿಸಲು, ಮಣ್ಣು ಉಳಿಸಿ ಅಭಿಯಾನವು 195 ದೇಶಗಳಲ್ಲಿ ಪ್ರತಿಯೊಂದಕ್ಕೂ ಶಿಫಾರಸುಗಳ ಕೈಪಿಡಿಯನ್ನು ರಚಿಸುತ್ತಿದೆ. ಹೆಚ್ಚಿನ ವಿವರಗಳನ್ನು ಅಭಿಯಾನದ ವೆಬ್‌ಸೈಟ್‌ savesoil.org ನಲ್ಲಿ ಪಡೆಯಬಹುದು ಎಂದು ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts