More

    ಮಣ್ಣು ಮಾಡಿ ಬಂದ ಮಾರನೇ ದಿನವೇ ಕುಟುಂಬಸ್ಥರಿಗೆ ಕಾದಿತ್ತು ಶಾಕ್​: ತಮಿಳುನಾಡಿನಲ್ಲಿ ಅಚ್ಚರಿಯ ಘಟನೆ!

    ಈರೋಡ್​: ಅಂತ್ಯಕ್ರಿಯೆಗೆ ಹೋದ ಸಂದರ್ಭದಲ್ಲಿ ವೃದ್ಧನೊಬ್ಬನಿಗೆ ಎಚ್ಚರವಾಯ್ತು… ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ ಮಹಿಳೆ ಸ್ಮಶಾನಕ್ಕೆ ಹೋಗುವಾಗ ಕಣ್ತೆರೆದಳು… ಶವಾಗಾರದಲ್ಲಿ ಇಟ್ಟ ವ್ಯಕ್ತಿಯ ಕೈಕಾಲು ಅಲುಗಾಡಿ ಉಸಿರಾಡಿಸಿದ… ಹೆಣದ ಮುಂದೆ ಕುಟುಂಬಸ್ಥರು ಗೋಳೋ ಎಂದು ಅಳುತ್ತಿರುವಾಗಲೇ ಆ ವ್ಯಕ್ತಿ ಎದ್ದು ಕುಳಿತ…

    ಇತ್ತೀಚಿನ ದಿನಗಳಲ್ಲಿ ನಂಬಲಸಾಧ್ಯ ಎನ್ನುವಂಥ ಇಂಥ ಅವೆಷ್ಟೋ ಘಟನೆಗಳು ನಡೆಯುತ್ತಲೇ ಇವೆ. ಈ ವ್ಯಕ್ತಿ ಮೃತಪಟ್ಟಿದ್ದಾನೆ, ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ ನಂತರ ಅಂಥ ವ್ಯಕ್ತಿಗಳು ಬದುಕಿ ಬರುತ್ತಿರುವ ಘಟನೆಗಳು ಇವಾಗಿದ್ದು, ಈ ಪವಾಡಗಳ ಸಾಲಿಗೆ ಇದೀಗ ಮತ್ತೊಂದು ಘಟನೆ ಸೇರಿಕೊಂಡಿದೆ.

    55 ವರ್ಷದ ವ್ಯಕ್ತಿಯನ್ನು ಸತ್ತಿದ್ದಾನೆ ಎಂದು ಭಾವಿಸಿ ಆತನನ್ನು ಭಾನುವಾರ ಸಂಜೆ ಕುಟುಂಬಸ್ಥರು ಮಣ್ಣು ಮಾಡಿ ಬಂದಿದ್ದರು. ಆದರೆ, ಮೃತ ವ್ಯಕ್ತಿ ಸೋಮವಾರ ಸಂಜೆ ಮನೆಗೆ ಮರಳಿದ್ದು, ಆತನನ್ನು ನೋಡಿ ಕುಟುಂಬಸ್ಥರೆಲ್ಲ ಆಘಾತಕ್ಕೆ ಒಳಗಾಗಿದ್ದಾರೆ. ಈ ಘಟನೆ ತಮಿಳುನಾಡಿನ ಈರೋಡ್​ ಜಿಲ್ಲೆಯ ಬನಗಲದಪುರದಲ್ಲಿ ನಡೆದಿದೆ.

    ದಿನಗೂಲಿ ನೌಕರನಾಗಿರುವ ಮೂರ್ತಿ ಕೆಲವು ದಿನಗಳ ಹಿಂದೆ ಕಬ್ಬು ಕಟಾವು ಮಾಡಲೆಂದು ತಿರ್ಪೂರ್​ಗೆ ಹೋಗಿದ್ದರು. ಭಾನುವಾರ ಬೆಳಗ್ಗೆ ಸಂಬಂಧಿಕರಿಂದ ಮೂರ್ತಿ ಪುತ್ರ ಕಾರ್ತಿ ಕರೆ ಸ್ವೀಕರಿಸಿದ್ದ. ಬಸ್​ ನಿಲ್ದಾಣದ ಹತ್ತಿರ ನಿಮ್ಮ ತಂದೆಯ ಶವ ಪತ್ತೆಯಾಗಿದೆ ಎಂದು ಹೇಳುವುದನ್ನು ಕೇಳಿ ಶಾಕ್​ ಆಗಿದ್ದ. ಬಳಿಕ ಸ್ಥಳಕ್ಕೆ ಧಾವಿಸಿ ಬಂದ ಪುತ್ರ ಅದು ತನ್ನ ತಂದೆಯ ಮೃತದೇಹ ಎಂದು ಖಚಿತಪಡಿಸಿದ ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಇದಾದ ಬಳಿಕ ಪ್ರಕರಣ ದಾಖಲಿಸಿಕೊಂಡ ಸತ್ಯಮಂಗಲಂ ಠಾಣಾ ಪೊಲೀಸರು ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರ ಮಾಡುತ್ತಾರೆ. ಬಳಿಕ ಕುಟುಂಬಸ್ಥರು ಭಾನುವಾರ ಸಂಜೆ ಅಂತ್ಯಕ್ರಿಯೆ ನೆರವೇರಿಸುತ್ತಾರೆ. ಇದಾದ ಮಾರನೇ ದಿನ ಅಂದರೆ ಸೋಮವಾರ ಸಂಜೆ ಮೂರ್ತಿ ಮನೆಗೆ ಬಂದಿದ್ದನ್ನು ನೀಡಿ ಇಡೀ ಕುಟುಂಬ ಒಂದು ಕ್ಷಣ ಆಘಾತಕ್ಕೆ ಒಳಗಾಗುತ್ತಾರೆ.

    ನಮ್ಮ ಕಣ್ಣುಗಳನ್ನು ನಾವೇ ನಂಬಲು ಆಗಲಿಲ್ಲ. ನಮ್ಮ ತಂದೆ ಮನಗೆ ಬಂದರು. ನನ್ನ ತಂದೆಯ ಸಾವಿನ ಸುದ್ದಿ ಕೇಳಿ ಆಘಾತವಾಗಿತ್ತು ಮತ್ತು ಅವರು ಮನೆಗೆ ಕಾಲಿಟ್ಟಾಗ ಅಷ್ಟೇ ಆಘಾತ ಮತ್ತೊಮ್ಮೆ ಆಯಿತು ಎಂದು ಕಾರ್ತಿ ಹೇಳಿದ್ದಾರೆ. ಇದಾದ ಬಳಿಕ ಕಾರ್ತಿ ಮತ್ತೆ ಪೊಲೀಸರಿಗೆ ಈ ವಿಚಾರವನ್ನು ತಿಳಿಸಿದ್ದಾರೆ. ಇದೀಗ ಮೊದಲು ಪತ್ತಯಾಗಿದ್ದ ವ್ಯಕ್ತಿಯ ಮೃತದೇಹ ಯಾರದ್ದು ಎಂದು ಪತ್ತೆಹಚ್ಚಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇದೀಗ ಈರೋಡ್​ ಜಿಲ್ಲೆಯಲ್ಲಿ ಈ ವಿಚಾರ ಬಹಳ ಚರ್ಚೆಯಾಗುತ್ತಿದೆ. (ಏಜೆನ್ಸೀಸ್​)

    ಲಂಕಾದಲ್ಲಿ ಯೋಧರು vs ಪೊಲೀಸರು: ಮತ್ತಷ್ಟು ಬಿಗಡಾಯಿಸಿದ ಪರಿಸ್ಥಿತಿ, ಸರ್ಕಾರಿ ನೌಕರರ ಮನೆಗೆ ನುಗ್ಗಲು ಯತ್ನ

    ಬಳ್ಳಾರಿಯ ಸಬ್​ ರಿಜಿಸ್ಟ್ರಾರ್ ಕರ್ಮಕಾಂಡ: ಮಾಡೆಲ್​ ಜತೆ ಮಂಚವೇರಿ ಮಗು ಕರುಣಿಸಿದವನ ಕರಾಳ ಕತೆಯಿದು

    ಮದ್ಯದ ಕಿಕ್ ಇಳಿಸಿದ ಸಾಫ್ಟ್​ವೇರ್: ಪೂರೈಕೆಯಾಗದೆ ಮಾಲೀಕರು ಕಂಗಾಲು, ಇಂದು ಪ್ರತಿಭಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts