More

    ಸ್ಥಳೀಯ ಹೋರಾಟಗಾರರ ಗುಂಡೇಟಿಗೆ ತಾಲಿಬಾನ್​ ಜಿಲ್ಲಾ ಮುಖ್ಯಸ್ಥ ಸೇರಿ 50 ಉಗ್ರರು ಫಿನಿಶ್​..!

    ಕಾಬುಲ್​: ಆಫ್ಘಾನಿಸ್ತಾನದ ಅಂದರಾಬ್ ವಲಯದಲ್ಲಿ ತಾಲಿಬಾನ್​ ಉಗ್ರರು ಮತ್ತು ಪಂಜ್​ಶೀರ್​ ಹೋರಾಟಗಾರರ ನಡುವೆ ನಡೆದ ಸಂಘರ್ಷದಲ್ಲಿ​ ತಾಲಿಬಾನ್​ನ ಬಾನು ಜಿಲ್ಲೆಯ ಮುಖ್ಯಸ್ಥ ಹಾಗೂ ಆತನ ಮೂವರು ಸಹಾಯಕರನ್ನು ಪಂಜ್​ಶೀರ್​ ಹೋರಾಟಗಾರರು ಹೊಡೆದುರುಳಿಸಿದ್ದಾರೆ ಎಂಬ ಮಾಹಿತಿ ಮಂಗಳವಾರ ಹೊರಬಿದ್ದಿದೆ.

    ಇಷ್ಟೇ ಅಲ್ಲದೆ, ಆಘ್ಫಾನ್​ನ ಫಜ್ರ್​ ವಲಯದಲ್ಲಿ 50 ತಾಲಿಬಾನ್​ ಉಗ್ರರನ್ನು ಹೊಡೆದುರುಳಿಸಲಾಗಿದ್ದು, ಇತರೆ 20 ಉಗ್ರರನ್ನು ಬಂಧಿಸಿರುವ ಬಗ್ಗೆ ಮಾಹಿತಿದೆ. ಪ್ರತಿರೋಧದ ಪಡೆಯಲ್ಲಿ ಓರ್ವ ಹೋರಾಟಗಾರ ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.

    ತಾಲಿಬಾನ್ ಬಂಡುಕೋರರು ಕೇಂದ್ರ ಪಂಜಶೀರ್ ಪ್ರಾಂತ್ಯವನ್ನು ಸುತ್ತುವರಿದಿದ್ದು, ಮಾತುಕತೆಯ ಮೂಲಕ ಸಮಸ್ಯೆಯನ್ನು ಪರಿಹರಿಸಲು ಶ್ರಮಿಸುತ್ತಿದ್ದಾರೆಂದು ಹೇಳಲಾಗಿದೆ. ಇನ್ನು ತಾಲಿಬಾನಿಗಳು ಉತ್ತರ ಆಫ್ಘಾನ್​ನಲ್ಲಿ ಕಳೆದ ವಾರ ತಾವು ಕಳೆದುಕೊಂಡಿದ್ದ ಮೂರು ಜಿಲ್ಲೆಗಳನ್ನು ಮರಳಿ ವಶಕ್ಕೆ ಪಡೆದುಕೊಂಡಿರುವುದಾಗಿ ತಾಲಿಬಾನ್​ ವಕ್ತಾರ ಸೋಮವಾರ ತಿಳಿಸಿದ್ದಾರೆ.

    ಬಘಲಾನ್​ ಪ್ರಾಂತ್ಯದ ಬನೋ, ದೇಹ್​​ ಸಲೇಹ್​ ಮತ್ತು ಪುಲ್​ ಇ ಹೆಸರ್ ಜಿಲ್ಲೆಗಳನ್ನು ಸ್ಥಳೀಯ ಸೇನೆ ವಶಕ್ಕೆ ಪಡೆದುಕೊಂಡಿದ್ದವು. ಆಗಸ್ಟ್ 15ರಂದು ತಾಲಿಬಾನಿಗಳು ರಾಜಧಾನಿ ಕಾಬೂಲ್ ಅನ್ನು ವಶಪಡಿಸಿಕೊಂಡ ನಂತರ ತಾಲಿಬಾನ್‌ಗೆ ಸಶಸ್ತ್ರ ಪ್ರತಿರೋಧದ ನೀಡಿದ ಮೊದಲ ಹೆಜ್ಜೆ ಇದಾಗಿತ್ತು. ಆದರೆ, ಸೋಮವಾರ ಮೂರು ಜಿಲ್ಲೆಗಳನ್ನು ತಾಲಿಬಾನಿಗಳು ಮತ್ತೆ ತಮ್ಮ ತೆಕ್ಕೆಗೆ ಹಾಕಿಕೊಂಡಿದ್ದಾರೆ. ಅಲ್ಲದೆ, ತಾಲಿಬಾನ್​ಗೆ ಸಿಂಹಸ್ವಪ್ನ ಆಗಿರುವ ಪಂಜಶೀರ್ ಬಳಿಯ ಬಡಕ್ಷಾನ್, ತಖರ್ ಮತ್ತು ಅಂದರಬ್ ವಲಯಗಳಿಗೂ ತಾಲಿಬಾನ್​ ಎಂಟ್ರಿ ನೀಡಿದೆ.

    ಸೋವಿಯತ್ ವಿರೋಧಿ ಮುಜಾಹಿದ್ದೀನ್ ಕಮಾಂಡರ್ ಅಹ್ಮದ್ ಶಾ ಮಸೂದ್ ಅವರ ಮಗ ಅಹ್ಮದ್ ಮಸೂಸ್​ ಪರ ನಿಷ್ಠೆಯನ್ನು ಹೊಂದಿರುವ ಪಡೆಗಳು 2001ನೇ ಇಸವಿಗೂ ಮೊದಲು ತಾಲಿಬಾನ್ ಅನ್ನು ವಿರೋಧಿಸಿ, ಕಾಬೂಲ್​ನ ವಾಯುವ್ಯ ಪರ್ವತ ಪ್ರದೇಶವಾದ ಪಂಜ್​ಶೀರ್​ ಕಣಿವೆಯಲ್ಲಿ ತಮ್ಮನ್ನು ತಾವು ಸ್ಥಾಪಿಸಿಕೊಂಡಿದ್ದಾರೆ. ಮಸೂದ್ ಅವರ ಪಡೆಗಳಲ್ಲಿ ನಿಯಮಿತ ಸೇನೆ ಮತ್ತು ವಿಶೇಷ ಪಡೆಗಳು ಸೇರಿವೆ. ಅಫ್ಘಾನಿಸ್ತಾನವನ್ನು ಒಳಗೊಂಡ ಸರ್ಕಾರವನ್ನು ರಚಿಸಲು ಮಾತುಕತೆಗೆ ಕರೆ ನೀಡಿವೆ. ಆದರೆ, ತಾಲಿಬಾನ್ ಪಡೆಗಳು ಕಣಿವೆಯನ್ನು ಪ್ರವೇಶಿಸಲು ಪ್ರಯತ್ನಿಸಿದರೆ ವಿರೋಧಿಸುವುದಾಗಿಯು ಭರವಸೆ ನೀಡಿದ್ದಾರೆ. (ಏಜೆನ್ಸೀಸ್​)

    ಕೇವಲ 87 ರೂಪಾಯಿಗೆ ಮನೆ ಮಾರಾಟ! ಆದರೆ ಷರತ್ತು ಅನ್ವಯ, ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ

    ಅಮೆರಿಕ ಪಡೆಗೆ ತಾಲಿಬಾನ್ ವಾರ್ನಿಂಗ್; 31ರೊಳಗೆ ಅಫ್ಘನ್ ತೊರೆಯುವಂತೆ ತಾಕೀತು

    ಮೇಡಂ ನಿಮ್ಮನ್ನು ಮದುವೆ ಆಗಲು ಬಯಸಿದ್ದೇನೆ! ನೆಟ್ಟಿಗನ ಪ್ರಪೋಸ್​ಗೆ ನಟಿ ಖುಷ್ಬೂ ಕೊಟ್ಟ ಉತ್ತರ ಹೀಗಿತ್ತು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts