More

    ಮುಖ್ಯ ಸ್ವಿಚ್​ ಬಿಟ್ಟು ರಿಮೋಟ್​ನಿಂದ TV ಆಫ್​ ಮಾಡಿದ್ರೂ​ ನಷ್ಟ​: ವರ್ಷದ ವಿದ್ಯುತ್​ ಬಿಲ್​ ಕೇಳಿದ್ರೆ ದಂಗಾಗ್ತೀರಾ!

    ನವದೆಹಲಿ: ಇಂದು ಇಡೀ ಪ್ರಪಂಚದಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಟಿವಿ ಇದೆ. ಅದರಲ್ಲೂ ತಿಂಗಳಾಂತ್ಯದ ವಿದ್ಯುತ್​ ಬಿಲ್​ನಲ್ಲಿ ಟಿವಿಯ ಕೊಡುಗೆಯೂ ಬಹುಮುಖ್ಯವಾಗಿದೆ. ಭಾರತದ ಸುಮಾರು 70 ರಷ್ಟು ಮನೆಗಳಲ್ಲಿ ಟಿವಿಯ ಮುಖ್ಯ ಸ್ವಿಚ್​ ಆಫ್ ಮಾಡುವುದೇ ಇಲ್ಲ. ಬಹುತೇಕರು ಕೇವಲ ರಿಮೋಟ್​ನಿಂದ ಆಫ್​ ಮಾಡಿ ಸುಮ್ಮನಾಗುತ್ತಾರೆಂದು ಸಮೀಕ್ಷೆ ಒಂದರ ಪ್ರಕಾರ ತಿಳಿದುಬಂದಿದೆ.

    ಈ ರೀತಿಯಾಗಿ ಟಿವಿ ಸ್ವಿಚ್ ಆಫ್​ ಮಾಡಿದರೆ ಆಗಲೂ ವಿದ್ಯುತ್​ ಬಳಕೆಯಾಗುತ್ತಿರುತ್ತದೆ. ಇದು ಕೂಡ ನಿಮ್ಮ ಮನೆಯ ಬಜೆಟ್​ ಮೇಲೆ ಗೊತ್ತಿಲ್ಲದೇ ಪರಿಣಾಮ ಬೀರುವುದರಲ್ಲಿ ಸಂಶಯವೇ ಇಲ್ಲ. ಹೀಗಾಗಿ ಎಲೆಕ್ಟ್ರಾನಿಕ್​ ಸಾಧನಗಳನ್ನು ಬಳಸುವಾಗ ಕೆಲವೊಂದು ಸಲಹೆಗಳನ್ನು ಅನುಸರಿಸಿದರೆ, ವಿದ್ಯುತ್​ ಬಿಲ್​ ಭಾರ ಕೊಂಚ ಕಡಿಮೆ ಆಗಲಿದೆ. ಇಲ್ಲವಾದರೆ, ನಮಗೆ ಗೊತ್ತಿಲ್ಲದೇ ನಮ್ಮ ಜೇಬಿನಿಂದ ಸುಮ್ಮನೇ ಹಣ ಪಾವತಿಸಬೇಕಾಗುತ್ತದೆ.

    ಎಂದಿಗೂ ಎಲೆಕ್ಟ್ರಾನಿಕ್​ ಉಪಕರಣಗಳನ್ನು ಸ್ಟ್ಯಾಂಡ್​ಬೈ ಮೋಡ್​ನಲ್ಲಿ ಬಿಡಬಾರದು. ಏಕೆಂದರೆ ಸ್ಟ್ಯಾಂಡ್​ಬೈ ಮೋಡ್​ನಲ್ಲಿದ್ರೆ ಪ್ಲಗ್​ ಸಾಕೆಟ್​ನಿಂದ ವಿದ್ಯುತ್​ ಬಳಕೆ ಮುಂದುವರಿಯುತ್ತದೆ. ಟಿವಿ ಮಾಡೆಲ್​, ಅದರ ಟೆಕ್ನಾಲಜಿ ಮತ್ತು ಗಾತ್ರವು ಸ್ಟ್ಯಾಂಡ್​ಬೈ ಮೋಡ್​ನಲ್ಲಿರುವ ಟಿವಿ ವಿದ್ಯುತ್​ ಬಳಕೆಯನ್ನು ಅವಲಂಬಿಸಿರುತ್ತದೆ. ಕೇವಲ ರಿಮೋಟ್​ನಲ್ಲಿ ಆಫ್​ ಮಾಡುವುದರಿಂದ ವರ್ಷಕ್ಕೆ ಖರ್ಚಾಗುವ ವಿದ್ಯುತ್​ ಬೆಲೆ ಕೇಳಿದರೆ ನೀವು ನಿಜಕ್ಕೂ ಅಚ್ಚರಿ ಪಡುತ್ತೀರಾ.

    ಪರಿಣಿತರ ಪ್ರಕಾರ ಟಿವಿ ಸ್ಟ್ಯಾಂಡ್​ಬೈ ಮೋಡ್​ನಲ್ಲಿದ್ದರೆ, ಪ್ರತಿ ಗಂಟೆಗೆ ಅಂದಾಜು 0.5 ವ್ಯಾಟ್​ ಖರ್ಚಾಗುತ್ತದೆ. ಇದರಿಂದ ತಿಂಗಳಿಗೆ ಸುಮಾರು 5 ರೂಪಾಯಿವರೆಗೂ ವಿದ್ಯುತ್​ ಬಿಲ್​ ಬರುತ್ತದೆ. ಟಿವಿಯು ಹವಾನಿಯಂತ್ರಣ ಅಥವಾ ಹೀಟರ್‌ನಂತಹ ಕಾಲೋಚಿತ ಸಾಧನವಲ್ಲ. ಅದನ್ನು ಪ್ರತಿನಿತ್ಯವೂ ಬಳಸುವ ಕಾರಣ ಸ್ಟ್ಯಾಂಡ್​ಬೈ ಮೋಡ್​ ಅಭ್ಯಾಸ ಮಾಡಿಕೊಂಡರೆ ವರ್ಷಪೂರ್ತಿ ಅಂದಾಜು ನೂರಾರು ರೂಪಾಯಿ ವಿದ್ಯುತ್ ಬಿಲ್ ತೆರಬೇಕಾಗುತ್ತದೆ. (ಏಜೆನ್ಸೀಸ್​)

    ಬದುಕಿನ ದೊಡ್ಡ ಬಲವನ್ನು ಕಳೆದುಕೊಂಡೆ: ಸಿನಿಮಾ ಯಶಸ್ಸಿನ ಖುಷಿಯ ಬೆನ್ನಲ್ಲೇ ನೇಹಾ ಶೆಟ್ಟಿ ಮನೆಯಲ್ಲಿ ದುರಂತ

    ದೀಪಿಕಾ ಮೈಮಾಟಕ್ಕೆ ಕಂಗನಾ ‘ಕೆಂಗಣ್ಣು’: ಗೆಹ್ರಾಯಿಯಾಂ ಚಿತ್ರದ ಬಗ್ಗೆ ಟೀಕಾಸ್ತ್ರ

    ನಾಗಚೈತನ್ಯರ ಮೊದಲ ಪತ್ನಿ ಮತ್ತು ಬೆಡ್​ರೂಮ್​ ರಹಸ್ಯಗಳ ಬಗ್ಗೆ ಬೋಲ್ಡ್​ ಆಗಿ ಮಾತನಾಡಿದ್ದರು ಸಮಂತಾ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts