More

    ರಸ್ತೆ ಗುಂಡಿ, ಅವೈಜ್ಞಾನಿಕ ಹಂಪ್​ನಿಂದಾಗಿ ಅಪಘಾತ: ಸಿಲ್ಲಿ ಲಲ್ಲಿ ಖ್ಯಾತಿಯ ನಟಿ ಸುನೇತ್ರಾ ಪಂಡಿತ್​ಗೆ ಗಾಯ

    ಬೆಂಗಳೂರು: ಶನಿವಾರ ತಡರಾತ್ರಿ ಸಿನಿಮಾ ಶೂಟಿಂಗ್​ ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಮನೆಗೆ ಹಿಂತಿರುಗುವಾಗ ಸಂಭವಿಸಿದ ಅಪಘಾತದಲ್ಲಿ ಸಿಲ್ಲಿ ಲಲ್ಲಿ ಖ್ಯಾತಿಯ ನಟಿ ಸುನೇತ್ರಾ ಪಂಡಿತ್​ ಗಾಯಗೊಂಡಿದ್ದಾರೆ.

    ಬಸವನಗುಡಿಯ ಎನ್​.ಆರ್​. ಕಾಲನಿ ಬಳಿಕ ಘಟನೆ ಸಂಭವಿಸಿದೆ. ಅವೈಜ್ಞಾನಿಕ ಹಂಪ್​ ಕ್ರಾಸ್​ ಮಾಡಿದ ಬೆನ್ನಲ್ಲೇ ದ್ವಿಚಕ್ರ ವಾಹನ ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದ್ದು ಅಪಘಾತ ಸಂಭವಿಸಿದೆ. ಅಪಘಾತದ ದೃಶ್ಯ ಸುತ್ತಮುತ್ತಲಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸುನೇತ್ರಾ ಅವರು ಬಿದ್ದ ರಭಸಕ್ಕೆ ತಲೆಯಿಂದ ಹೆಲ್ಮೆಟ್​ ಕಳಚಿ ಅಷ್ಟು ದೂರು ಹೋಗಿ ಬಿದ್ದಿದೆ.

    ಕೆಳಗೆ ಬಿದ್ದಿದ್ದ ಸುನೇತ್ರಾ ಅವರನ್ನು ನೋಡಿದ ಸ್ಥಳೀಯರು ತಕ್ಷಣ ಅವರನ್ನು ಕಾರಿನ ಮೂಲಕ ಬಸವನಗುಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದೃಷ್ಟವಶಾತ್​ ಹೆಲ್ಮೆಟ್​ ಹಾಕಿದ್ದರಿಂದ ಸುನೇತ್ರಾ ಅವರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

    ಅಪಘಾತದ ಬಗ್ಗೆ ಸುನೇತ್ರಾ ಅವರ ಪುತ್ರಿ ಶ್ರೇಯಾ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಶೂಟಿಂಗ್​ ಮುಗಿಸಿ ನಿನ್ನೆ ರಾತ್ರಿ ಬರುವಾಗ ಹಂಪ್​ ಕಾಣಿಸದೇ ಸ್ಕೂಟಿ ಜಂಪ್​ ಆಗಿದೆ. ನಂತರ ಪಕ್ಕದಲ್ಲೇ ರಸ್ತೆ ಗುಂಡಿ ಇದ್ದಿದ್ದರಿಂದ ಅಪಘಾತ ಸಂಭವಿಸಿದೆ ಎಂದು ತಿಳಿಸಿದ್ದಾರೆ.

    ಬಿಕಿನಿ ಫೋಟೋಗಳನ್ನು ಹರಿಬಿಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸಿದ ಮಸ್ತ್​ ಮೊಹಬ್ಬತ್​ ಬೆಡಗಿ!

    ನಾನು ಯಾರಿಗೂ ರೊಕ್ಕ ಕೊಡುವ ಮಗನೇ ಅಲ್ಲ: ಮತ್ತೊಂದು ಬಾಂಬ್​ ಸಿಡಿಸಿದ ಶಾಸಕ ಯತ್ನಾಳ್​!

    ಬಾಕಿ 1 ರೂಪಾಯಿ ಕೇಳಿದ್ದಕ್ಕೆ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ಹೈಡ್ರಾಮ ಸೃಷ್ಟಿಸಿದ ಬಸ್​ ಕಂಡಕ್ಟರ್!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts