More

    SSLC ಪರೀಕ್ಷೇಲಿ ಡಿಸ್ಟಿಂಕ್ಷನ್​ ಬಂದಾಕೆ ಪ್ರಥಮ ಪಿಯು ಎಕ್ಸಾಂ​ನಲ್ಲಿ ಫೇಲಾಗ್ತೀನಿ ಅಂತಾ ಹೆದರಿ ಆತ್ಮಹತ್ಯೆ

    ಕುನ್ನಿಕ್ಕೋಡ್​: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಎಲ್ಲ ವಿಷಯಗಳಲ್ಲಿ ಎ + ಮಾರ್ಕ್ಸ್​ ತೆಗೆದುಕೊಂಡು ಡಿಸ್ಟಿಂಕ್ಷನ್​ನಲ್ಲಿ ಪಾಸ್​ ಆಗಿದ್ದ ಹುಡುಗಿಯೊಬ್ಬಳು ಪ್ರಥಮ ಪಿಯು ಪರೀಕ್ಷೆಯಲ್ಲಿ ಫೇಲಾಗುತ್ತೇನೆ ಎಂಬ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಕೇರಳದ ಕುನ್ನಿಕ್ಕೋಡ್​ನಲ್ಲಿ ನಡೆದಿದೆ.

    ಸಾನಿಗಾ (17) ಮೃತ ಹುಡುಗಿ. ಈಕೆ ಥಲವೂರ್​ ಮೂಲದ ಸನಲ್​ ಕುಮಾರ್​ ಮತ್ತು ಅನಿತಾ ದಂಪತಿಯ ಪುತ್ರಿ. ಅನಿತಾ ಮನ್ನಾರ್​ನಲ್ಲಿ ಕೆಲಸ ಮಾಡುತ್ತಿದ್ದು, ವಾರಕ್ಕೊಮ್ಮೆ ಥಲವೂರ್​ಗೆ ಬರುತ್ತಾರೆ. ಸನಲ್​ ಕಾರ್ಪೆಂಟರ್​ ಆಗಿದ್ದು, ಮನೆಗೆ ಬರುವುದು ರಾತ್ರಿ 8 ಗಂಟೆಯಾಗುತ್ತದೆ.

    ಎಂದಿನಂತೆಯೇ ಬುಧವಾರ ರಾತ್ರಿಯು ಅನಿತಾ, ತಮ್ಮ ಮಗಳಿಗೆ ಕರೆ ಮಾಡಿದ್ದಾರೆ. ಆದರೆ, ಎಷ್ಟು ಬಾರಿ ಮಾಡಿದರೂ ಆಕೆ ಸ್ವೀಕರಿಸದಿದ್ದಾಗ, ನೆರೆಮನೆಯವರಿಗೆ ಫೋನಾಯಿಸಿದ್ದಾರೆ. ನೆರೆ ಮನೆಯವರು ಅನಿತಾ ಅವರ ಮನೆಯ ಬಳಿ ಬಂದಾಗ ಬಾಗಿಲು ಹಾಕಿತ್ತು. ಪರಿಶೀಲಿಸಿದಾಗ ಒಳಗಿನಿಂದ ಬಾಗಿಲು ಲಾಕ್​ ಆಗಿರುವುದು ನೆರೆಮನೆಯವರಿಗೆ ತಿಳಿಯುತ್ತದೆ. ಬಳಿಕ ಬಾಗಿಲನ್ನು ಮುರಿದು ಒಳಗೆ ನೋಡಿದಾಗ ಸಾನಿಗಾ ಶವ ನೇಣು ಬಿಗಿದ ಸ್ಥಿತಿಯಲ್ಲಿ ಬೆಡ್​ರೂಮ್​ನಲ್ಲಿ ಪತ್ತೆಯಾಗುತ್ತದೆ.

    ಮನೆಯಲ್ಲಿ ಡೆತ್​ನೋಟ್​ ಸಹ ಪತ್ತೆಯಾಗಿದೆ. ಪ್ರಥಮ ಪಿಯು ಪರೀಕ್ಷೆಯಲ್ಲಿ ಫೇಲಾಗುತ್ತೇನೆ ಎಂಬ ಭಯದಲ್ಲಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಸಾನಿಗಾ ಡೆತ್​ನೋಟ್​ನಲ್ಲಿ ಉಲ್ಲೇಖಿಸಿದ್ದಾಳೆ. ಕೇರಳದಲ್ಲಿ ಇಂದು ಪ್ರಥಮ ಪಿಯುಸಿಯ ಮಾದರಿ ಪರೀಕ್ಷೆ ಆರಂಭವಾಗಿದ್ದು, ಜೂನ್​ 13ರಂದು ವಾರ್ಷಿಕ ಪರೀಕ್ಷೆ ಶುರುವಾಗಲಿದೆ. ಆದರೆ, ಪರೀಕ್ಷೆ ಎದುರಿಸುವ ಬದಲು ಆತ್ಮಹತ್ಯೆ ಮಾಡಿಕೊಂಡಿದ್ದು ದುರಂತದ ಸಂಗತಿಯಾಗಿದೆ. (ಏಜೆನ್ಸೀಸ್​)

    VIDEO: ಯುವತಿ ಜತೆ ಮಾಜಿ ಸಚಿವ ಲವ್ವಿಡವ್ವಿ: ಪತ್ನಿ ಕೈಲಿ ರೆಡ್​ಹ್ಯಾಂಡ್​ ಸಿಕ್ಕಿಬಿದ್ದು ಪೇಚಾಟ- ವಿಡಿಯೋ ವೈರಲ್

    VIDEO| ಲಿವಿಂಗ್​ಸ್ಟೋನ್​ ಸಿಡಿಸಿದ ಬಿಗ್​ ಸಿಕ್ಸರ್​ ಚೆಂಡನ್ನು ತೆಗೆದುಕೊಡಲು ಕಾರ್ಮಿಕರೇ ಬರಬೇಕಾಯ್ತು!

    ತಮಿಳುನಾಡಿನಿಂದ ಉತ್ತರ ಭಾರತೀಯರಿಗೆ ಗೇಟ್​ ಪಾಸ್​! ಡಿಜಿಪಿ ಶೈಲೆಂದ್ರ ಬಾಬು ಕೊಟ್ಟ ಸ್ಪಷ್ಟನೆ ಹೀಗಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts