More

    ಹುಬ್ಬಳ್ಳಿ ಹುಲಿ ವಿಶ್ವನಾಥ ಸಜ್ಜನರ್ ವರ್ಗಾವಣೆ: ಸೈಬರಾಬಾದ್​ ಪೊಲೀಸ್​ ಆಯುಕ್ತರಾಗಿ ಸ್ಟೆಫೆನ್​ ರವೀಂದ್ರ ನೇಮಕ!

    ಹೈದರಾಬಾದ್​: ಸೈಬರಾಬಾದ್​ ಪೊಲೀಸ್​ ಆಯುಕ್ತರಾಗಿದ್ದ ಹುಬ್ಬಳ್ಳಿ ಹುಲಿ ವಿಶ್ವನಾಥ ಸಜ್ಜನರ್ ಅವರನ್ನು ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಮ್ಯಾನೇಜಿಂಗ್​ ಡೈರೆಕ್ಟರ್​ ಆಗಿ ಸರ್ಕಾರ ವರ್ಗಾವಣೆ ಮಾಡಿದೆ.

    ಹೈದರಾಬಾದ್​ ಪಶ್ಚಿಮ ವಲಯದ ಐಜಿಪಿ ಸ್ಟೆಫೆನ್​ ರವೀಂದ್ರ ಅವರನ್ನು ನೂತನ ಸೈಬರಾಬಾದ್​​ ಪೊಲೀಸ್​ ಆಯುಕ್ತರಾಗಿ ತೆಲಂಗಾಣ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ರವೀಂದ್ರ ಅವರು ಈ ಹಿಂದೆ ಹೈದರಾಬಾದ್​ನಲ್ಲಿ ಡಿಸಿಪಿ ಆಗಿಯು ಕಾರ್ಯನಿರ್ವಹಿಸಿದ್ದಾರೆ.

    ಸಜ್ಜನರ್​ ಅವರು 2019ರಲ್ಲಿ ಸೈಬರಾಬಾದ್​ ಪೊಲೀಸ್​ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದರು. ಇದೀಗ ಇದ್ದಕ್ಕಿದ್ದಂತೆ ಸಜ್ಜನರ್​ ಅವರನ್ನು ವರ್ಗಾವಣೆ ಮಾಡಿರುವುದು ಎಲ್ಲರಿಗೂ ಅಚ್ಚರಿಯಾಗಿದೆ.

    ಸೈಬರಾಬಾದ್‌ನ ಆಯುಕ್ತರಾಗಿ ತಮ್ಮ ಇನ್ನಿಂಗ್ಸ್‌ನಲ್ಲಿ, ಸಜ್ಜನರ್ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಮಾತ್ರವಲ್ಲದೆ ಹಲವಾರು ಸೇವಾ ಕಾರ್ಯಕ್ರಮಗಳನ್ನು ಕೈಗೊಂಡರು. ಸೈಬರಾಬಾದ್ ಪೊಲೀಸ್ ಕಮೀಷನರೇಟ್‌ನಲ್ಲಿ ಹಲವಾರು ಸುಧಾರಣೆಗಳನ್ನು ಪ್ರಾರಂಭಿಸಿದರು ಮತ್ತು ಕೋವಿಡ್ -19 ಮೊದಲ ಅಲೆಯ ಸಮಯದಲ್ಲಿ ವಲಸೆ ಕಾರ್ಮಿಕರು ತಮ್ಮ ಮನೆಗಳನ್ನು ತಲುಪಲು ಸಹಾಯ ಮಾಡುವಲ್ಲಿ ಮುಂಚೂಣಿಯಲ್ಲಿದ್ದರು.

    ಹೈದರಾಬಾದ್​ನ ಪಶುವೈದ್ಯೆಯನ್ನು ಹತ್ಯೆ ಮಾಡಿದವರನ್ನು ಎನ್​ಕೌಂಟರ್​ ಮಾಡಿದ ಪ್ರಕರಣದಲ್ಲಿ ವಿಶ್ವನಾಥ್​ ಸಜ್ಜನರ್ ಭಾರಿ ಸುದ್ದಿಯಾದರು. ಅವರ​ ಸಾಹಸವನ್ನು ರಾಷ್ಟ್ರದೆಲ್ಲೆಡೆ ಜನರು ಶ್ಲಾಘಿಸಿದರು. ವಿಶ್ವನಾಥ್​ ಅವರು ಮೂಲತಃ ಕರ್ನಾಟಕದ ಹುಬ್ಬಳ್ಳಿ ಮೂಲದವರು. (ಏಜೆನ್ಸೀಸ್​)

    ಎಲೆಕ್ಟ್ರಾನಿಕ್ಸ್​ ಚಿಪ್​ ಅಳವಡಿಸಿ ಗ್ರಾಹಕರಿಗೆ ಮೋಸವೆಸಗುತ್ತಿದ್ದ 33 ಪೆಟ್ರೋಲ್​ ಬಂಕ್ಸ್​ ಸೀಜ್! ​

    11 ವರ್ಷಗಳಲ್ಲಿ 3 ಎನ್​ಕೌಂಟರ್​ ಮಾಡಿದ ವಿಶ್ವನಾಥ್​ ಸಜ್ಜನರ್​; ಪ್ರತಿ ಎನ್​ಕೌಂಟರ್​ ಬಳಿಕವೂ ಕೊಟ್ಟ ಕಾರಣ, ವಿವರಣೆ ಒಂದೇ !

    ‘ಸಜ್ಜನರ’ ಕೆಲಸ ಎಂದರೆ ಇದು.. ಬಾಂಗ್ಲಾ ಟು ಹೈದರಾಬಾದ್​, ಆ ರಾತ್ರಿ ಏನಾಯ್ತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts