More

    ರಿಯಲ್​ ಹೀರೋ ಸೋನು ಸೂದ್​ ಸಹೋದರಿ ಕೈಹಿಡಿಯದ ಪಂಜಾಬ್​ ಮತದಾರ: ಸೋಲಿಗೆ ಕಾರಣ ಇದೇನಾ?

    ನವದೆಹಲಿ: ಯಾರೂ ಊಹಿಸದ ರೀತಿಯಲ್ಲಿ ಪಂಜಾಬ್​ನಲ್ಲಿ ಆಮ್​ ಆದ್ಮಿ ಪಕ್ಷ (ಎಎಪಿ) ಪ್ರಚಂಡ ಬಹುಮತ ದಾಖಲಿಸಿದ್ದು, ದೆಹಲಿಯ ನಂತರ ಎರಡನೇ ರಾಜ್ಯದಲ್ಲಿ ಅಧಿಕಾರ ಗದ್ದುಗೆ ಹಿಡಿಯಲು ಎಎಪಿ ಸಿದ್ಧವಾಗಿದೆ. ಈ ಮೂಲಕ ಎಎಪಿ ತನ್ನ ವ್ಯಾಪ್ತಿಯನ್ನು ಕೂಡ ವಿಸ್ತರಿಸಿಕೊಂಡಿದೆ. ಸಣ್ಣ ಪಕ್ಷವೊಂದರ ಪಾಲಿಗೆ ಇದು ಬಹು ದೊಡ್ಡ ಬೆಳವಣಿಗೆ ಅಂತಾನೇ ಹೇಳಬಹುದಾಗಿದೆ. ಈ ಗೆಲುವಿನಿಂದ ಎಎಪಿ​ಗೆ ಮತ್ತಷ್ಟು ಹುಮ್ಮಸ್ಸು ಬಂದಿದೆ.

    ಪಂಜಾಬ್​ನಲ್ಲಿ ಕಾಂಗ್ರೆಸ್​ಗೆ ಭಾರೀ ಮುಖಭಂಗವಾಗಿದ್ದು, ಕಾಂಗ್ರೆಸ್​ನ ಘಟಾನುಘಟಿ ನಾಯಕರೇ ಎಎಪಿ ಅಭ್ಯರ್ಥಿಗಳ ಮುಂದೆ ಶರಣಾಗಿದ್ದಾರೆ.​ ರಿಯಲ್​ ಹೀರೋ ಸೋನು ಸೂದ್​ ಅವರು ಸಹೋದರಿ ಮಾಳವಿಕ ಸೂದ್​ ಕೂಡ ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದರು. ಆದರೆ, ಅವರನ್ನು ಸಹ ಮತದಾರ ಕೈಹಿಡಿದಿಲ್ಲ. ಕರೊನಾ ಸಮಯದಲ್ಲಿ ಸೋನು ಸೂದ್​ ಅವರ ಮಾನವೀಯ ಕಾರ್ಯ ಲಾಭವಾಗಿ ಪರಿಣಮಿಸಬಹುದು ಎಂದು ಮಾಳವಿಕ ಅಂದಾಜಿಸಿದ್ದರು. ಆದರೆ, ಅವರ ಊಹೆ ಉಲ್ಟಾ ಆಗಿದೆ.

    ಹಾಗಾದರೆ ಮಾಳವಿಕಾ ಅವರ ಸೋಲಿಗೆ ಕಾರಣವೆಂದು ತಿಳಿಯುವುದಾದರೆ, ಸೋನು ಸೂದ್​ ಅವರು ಬೆಂಬಲ ನೀಡದೇ ಇದ್ದುದ್ದು ಕಾರಣ ಎಂದು ಹೇಳಲಾಗಿದೆ. ಸೋನು ಸೂದ್​ ರಾಜಕೀಯಕ್ಕೆ ಪ್ರವೇಶ ನೀಡುತ್ತಾರೆ ಎಂದು ಈ ಮೊದಲು ಸುದ್ದಿಯಾಗಿತ್ತು. ಆದರೆ, ಅಂತಿಮವಾಗಿ ಸೋನು ಸೂದ್​ ಸಹೋದರಿ ರಾಜಕೀಯಕ್ಕೆ ಎಂಟ್ರಿ ನೀಡಿದರು.

    ಈ ಮೊದಲೇ ಸೋನು ಸೂದ್​ ತಾನು ಸಹೋದರಿಯ ಪರವಾಗಿ ಪ್ರಚಾರದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ್ದರು. ಆಕೆ ಅನೇಕ ವರ್ಷಗಳಿಂದ ಪಂಜಾಜ್​ನಲ್ಲಿ ನೆಲೆಸಿದ್ದಾಳೆ. ಆಕೆಗೆ ಅಲ್ಲಿನ ಸಮಸ್ಯೆಗಳ ಬಗ್ಗೆ ತಿಳಿದಿದೆ. ಆಕೆಯ ಬಗ್ಗೆ ಹೆಮ್ಮೆ ಇದೆ ಎಂದಷ್ಟೇ ಸೋನು ಸೂದ್​ ಈ ಹಿಂದೆ ಹೇಳಿದ್ದರು. ಇದೀಗ ಚುನಾವಣೆಯಲ್ಲಿ ಮಾಳವಿಕಾ ಸೂದ್​ ಸೋತಿದ್ದು, ಸೋನು ಸೂದ್​ ಪ್ರಚಾರದಿಂದ ದೂರ ಉಳಿದಿದ್ದೇ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಸೋನು ಸೂದ್​ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆಂದು ಕಾದು ನೋಡಬೇಕಿದೆ. (ಏಜೆನ್ಸೀಸ್​)

    ಉ. ಪ್ರದೇಶದಲ್ಲಿ ಕಾಂಗ್ರೆಸ್​ಗೆ​ ಹೀನಾಯ ಸೋಲು: ಅತಿದೊಡ್ಡ ಪಕ್ಷದ ಹಿನ್ನಡೆಗೆ ಈ ಅಂಶಗಳೇ ಕಾರಣವಾಯ್ತಾ?

    ‘ಉತ್ತರ ಪ್ರದೇಶ ಸುಂದರಿ’ಗೆ ಒಲಿಯದ ಮತದಾರ! ಬಿಜೆಪಿ ಎದುರು ‘ಮಿಸ್​ ಬಿಕಿನಿ ಗರ್ಲ್’​ಗೆ ಭಾರಿ ಹಿನ್ನಡೆ…

    ಹಾಸ್ಯಗಾರನಿಗೆ ಒಲಿದ ಪಂಜಾಬ್​ ಗದ್ದುಗೆ: ಅಮ್ಮ ಹೇಳಿದ್ದು ನಿಜವಾಯ್ತು… ಕುಡುಕ ಎಂದವರಿಗೆ ಮುಖಭಂಗವಾಯ್ತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts