More

    ನನ್ನೊಂದಿಗೆ ಮಲಗು ಇಲ್ಲವಾದಲ್ಲಿ ಇನ್ನು 20 ಗಂಡಸರನ್ನು ಕರ್ಕೊಂಡು ಬರ್ತೀನಿ: ಗರ್ಭಿಣಿ ಬಾಲಕಿಯ ನೋವಿನ ಕತೆ

    ಕೀಯೆವ್​/ಯೂಕ್ರೇನ್​: ನೀನು ನನ್ನೊಂದಿಗೆ ಮಲಗಬೇಕು. ಇಲ್ಲವಾದಲ್ಲಿ ಇನ್ನೂ 20 ಗಂಡಸರನ್ನು ಕರೆದುಕೊಂಡು ಬರುತ್ತೇನೆ… ಇದು ರಷ್ಯಾದ ಪಾನಮತ್ತ ಯೋಧನ ಬೆದರಿಕೆಯ ಮಾತು. ರಷ್ಯಾ ನಿಯಂತ್ರಣದಲ್ಲಿರುವ ಯೂಕ್ರೇನ್​ನ ಖೇರ್ಸನ್​ ಗ್ರಾಮದಲ್ಲಿ 16 ವರ್ಷದ ಗರ್ಭಿಣಿ ಬಾಲಕಿಯ ಮೇಲೆ ಅತ್ಯಾಚಾರ ಮಾಡಿರುವ ಆರೋಪ ಯೋಧನ ವಿರುದ್ಧ ಕೇಳಿಬಂದಿದೆ.

    ಅತ್ಯಾಚಾರ ಎಸಗುವ ಸಂದರ್ಭದಲ್ಲಿ ಬಾಲಕಿ 6 ತಿಂಗಳ ಗರ್ಭಿಣಿಯಾಗಿದ್ದಳು. ಪ್ರತಿರೋಧ ವ್ಯಕ್ತಪಡಿಸಿದರೆ, ಕುತ್ತಿಗೆ ಹಿಡಿದು ಉಸಿರುಗಟ್ಟಿಸಿ, ಕೊಲೆ ಮಾಡುವುದಾಗಿ ಪಾನಮತ್ತನಾಗಿದ್ದ ಯೋಧ ಬೆದರಿಕೆ ಹಾಕಿದ ಎಂದು ಸಂತ್ರಸ್ತ ಬಾಲಕಿ ಹೇಳಿಕೆ ನೀಡಿದ್ದಾಳೆ.

    ಸಂತ್ರಸ್ತೆ ಮತ್ತು ಆಕೆಯ ಕುಟುಂಬ ರಷ್ಯಾ ಯೋಧರು ನಡೆಸುತ್ತಿದ್ದ ಬಾಂಬ್ ದಾಳಿಯಿಂದ ಪಾರಾಗಲು ತಮ್ಮ ಮನೆಯ ನೆಲಮಾಳಿಗೆಯಲ್ಲಿ ಆಶ್ರಯ ಪಡೆದಿದ್ದರು. ಸಂಜೆ ಸಮಯದಲ್ಲಿ ಮಕ್ಕಳನ್ನು ಊಟಕ್ಕೆಂದು ಕರೆದುಕೊಂಡು ಹೋಗುವಾಗ ಬಾಲಕಿಯು ಪಾನಮತ್ತ ಸೈನಿಕನ ಕಣ್ಣಿಗೆ ಬಿದ್ದಿದ್ದಾಳೆ. ಈ ವೇಳೆ ಅಡ್ಡಗಟ್ಟಿದ ಆತ ಎಷ್ಟು ವಯಸ್ಸು ಎಂದು ಕೇಳಿದ್ದಾನೆ. ಅದಕ್ಕೆ ಉತ್ತರ ನೀಡಿದ ಸಂತ್ರಸ್ತೆ, ಒಬ್ಬಳಿಗೆ 12 ಮತ್ತು ಇನ್ನೊಬ್ಬಳಿಗೆ 14 ಹಾಗೂ ನನಗೆ 16 ವರ್ಷ ಎಂದು ಉತ್ತರಿಸಿದ್ದಾಳೆ. ಮೊದಲು ಆತ ನನ್ನ ತಾಯಿಯನ್ನು ಕರೆದ ಆದರೆ, ಆಕೆಯನ್ನು ಹಿಂದಕ್ಕೆ ಕಳುಹಿಸಿದ. ಇದಾದ ಬಳಿಕ ನನ್ನನ್ನು ಕರೆದ. ನಾನು ಅವನ ಬಳಿ ಹೋದಾಗ ನನ್ನ ಮೇಲೆ ಕೂಗಾಡಿದ ಮತ್ತು ಬಟ್ಟೆ ಕಳಚುವಂತೆ ಕೇಳಿದ. ನಾನು ಆಗಲ್ಲ ಎಂದಾಗ ನನ್ನ ಜತೆ ಮಲಗದಿದ್ದರೆ ಇನ್ನು 20 ಮಂದಿಯನ್ನು ಕರೆದುಕೊಂಡು ಬರುವುದಾಗಿ ಹೇಳಿದ ಎಂದು ಸಂತ್ರಸ್ತೆ ನೋವು ತೋಡಿಕೊಂಡಿದ್ದಾಳೆ.

    ಒಂದು ವೇಳೆ ವಿರೋಧ ವ್ಯಕ್ತಪಡಿಸಿದರೆ ಕತ್ತು ಹಿಸುಕಿ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ. ಮದ್ಯ ಸೇವಿಸದ ರಷ್ಯಾದ ಮತ್ತೊಬ್ಬ ಸೈನಿಕ, ದಾಳಿಕೋರನನ್ನು ತನ್ನ ಕೃತ್ಯವನ್ನು ನಿಲ್ಲಿಸಲು ಕೇಳಿದರೂ ಆತ ಕ್ಯಾರೆ ಎನ್ನದೇ ತನ್ನ ಮೇಲೆ ಮೃಗೀಯವಾಗಿ ವರ್ತಿಸಿದನು. ಆತ ಕಳೆದ ಕೆಲವು ದಿನಗಳಿಂದ ಗ್ರಾಮಗಳಲ್ಲಿ ಹೆಣ್ಣು ಮಕ್ಕಳಿಗಾಗಿ ರಣಹದ್ದುಗಳಂತೆ ಅಲೆದಾಡುತ್ತಿದ್ದ ಎಂದು ಇತರೆ ಯೋಧರು ಮಾತನಾಡಿಕೊಳ್ಳುವುದನ್ನು ಕೇಳಿಸಿಕೊಂಡಿದ್ದೇನೆ ಎಂದು ಸಂತ್ರಸ್ತೆ ಹೇಳಿದ್ದಾಳೆ. ನಾವು ತಿನ್ನಲು ಹೊರಗೆ ಹೋಗದ್ದೇ ತಪ್ಪಾಯ್ತು ಎನ್ನುವಂತಾಗಿದೆ. ಒಂದು ವೇಳೆ ನಾವು ಹೊರಗಡೆ ಬರದೇ ಹೋಗಿದ್ದರೆ, ನಮ್ಮನ್ನು ನೋಡುತ್ತಿರಲಿಲ್ಲ ಮತ್ತು ನನ್ನನ್ನು ಮುಟ್ಟುತ್ತಿರಲಿಲ್ಲ ಎಂದು ಸಂತ್ರಸ್ತೆ ಅಸಹಾಯಕತೆ ಹೊರಗಾಕಿದ್ದಾಳೆ.

    ಇನ್ನು ಬಾಲಕಿ ಮೇಲಿನ ದೌರ್ಜನ್ಯ ಇಷ್ಟಕ್ಕೆ ನಿಲ್ಲುವುದಿಲ್ಲ. ಮರುದಿನ ಮತ್ತೊಬ್ಬ ಯೋಧ ಆಕೆಯನ್ನು ಕರೆದುಕೊಂಡು ಹೋದಿ, ಬೆದರಿಕೆ ಹಾಕಿ ಅತ್ಯಾಚಾರ ಮಾಡಿದ್ದಾನೆ. ಈ ಸಂದರ್ಭದಲ್ಲಿ ನಾನು ಹೆದರಿ ಅಳುತ್ತಿದೆ. ಆದರೆ, ಆತ ನಾನು ಹೇಳುತ್ತಿರುವುದು ಸತ್ಯವೋ? ಅಥವಾ ಸುಳ್ಳೋ? ಎಂಬುದನ್ನು ಪರೀಕ್ಷೆ ಮಾಡುತ್ತಿದ್ದೇನೆ ಎಂದು ಹೇಳಿದನೆಂದು ಸಂತ್ರಸ್ತೆ ತಿಳಿಸಿದ್ದಾಳೆ. ಸಂತ್ರಸ್ತೆ ಮೇಲಿನ ದಾಳಿಯ ಬಗ್ಗೆ ನ್ಯೂಸ್ ಪೋರ್ಟಲ್‌ನಿಂದ ಪರಿಶೀಲಿಸಲು ಸಾಧ್ಯವಾಗದಿದ್ದರೂ, ಯೂಕ್ರೇನಿಯನ್ ಪ್ರಾಸಿಕ್ಯೂಟರ್‌ಗಳು ಆರೋಪಗಳನ್ನು ತನಿಖೆ ಮಾಡಿ ದಾಳಿ ನಡೆದಿರುವುದನ್ನು ದೃಢಪಡಿಸಿದ್ದಾರೆ. ಇದೊಂದು ಯುದ್ಧ ಅಪರಾಧ ಎಂದು ಕರೆದಿದ್ದಾರೆ. (ಏಜೆನ್ಸೀಸ್​)

    ಅಯ್ಯೋ ದುರ್ವಿಧಿಯೇ… ಕೆಲ್ಸ ಸಿಕ್ಕ ಖುಷೀಲಿ ಸೌದಿಗೆ ಹೊರಡುವಾಗ ಭೀಕರ ಅಪಘಾತ, ಕಣ್ಮುಂದೆಯೇ ಕುಟುಂಬ ನಾಶ

    ಒಟ್ಟು 545 PSI ಹುದ್ದೆ, ಕಲಬುರಗಿಗೆ ಸಿಂಹಪಾಲು, ಪರೀಕ್ಷಾ ಕ್ರೇಂದ್ರವೊಂದರಲ್ಲೇ 11 ಅಭ್ಯರ್ಥಿಗಳ ಆಯ್ಕೆ!

    ನಟಿ ತಾರಾಗೆ ಮಾತೃ ವಿಯೋಗ: ಆನೇಕಲ್​ನ ಚಿಕ್ಕಹೊಸಳ್ಳಿಯಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts