More

    ಒಟ್ಟು 545 PSI ಹುದ್ದೆ, ಕಲಬುರಗಿಗೆ ಸಿಂಹಪಾಲು, ಪರೀಕ್ಷಾ ಕ್ರೇಂದ್ರವೊಂದರಲ್ಲೇ 11 ಅಭ್ಯರ್ಥಿಗಳ ಆಯ್ಕೆ!

    ಕಲಬುರಗಿ : 545 ಪಿಎಸ್​ಐ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣದ ಸಿಐಡಿ ತನಿಖೆಯು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಅಧಿಕಾರಿಗಳು ಬಲೆ ಬೀಸಿದ್ದು, ಈ ನೇಮಕಾತಿಯಲ್ಲಿ ಕೆಲವು ಲಾಜಿಕ್​ ಇಲ್ಲದ ಅಂಕಿ-ಅಂಶಗಳನ್ನೂ ಗಮನಿಸಬಹುದಾಗಿದೆ.

    ಸರ್ಕಾರ ಒಟ್ಟು 545 ಹುದ್ದೆಗಳಿಗೆ ಅರ್ಜಿ ಕರೆದಿತ್ತು. ರಾಜ್ಯಾದ್ಯಂತ ಒಟ್ಟು 92 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯಲ್ಲಿ ಕಲಬುರಗಿ ಜಿಲ್ಲೆಯಿಂದ ಒಟ್ಟು 92 ಜನ ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿದ್ದು, ನೇಮಕಾತಿಯಲ್ಲಿ ಸಿಂಹಪಾಲು ಕಲಬುರಗಿ ಸಿಕ್ಕಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

    ಇನ್ನು ಕಲಬುರಗಿ ನಗರದಲ್ಲಿ ಒಟ್ಟು 11 ಪರೀಕ್ಷಾ ಕೇಂದ್ರಗಳ ಸ್ಥಾಪನೆ ಮಾಡಲಾಗಿತ್ತು. ಈ ಪೈಕಿ ಜ್ಞಾನಜ್ಯೋತಿ ಪರೀಕ್ಷಾ ಕೇಂದ್ರವೊಂದರಿಂದಲೇ 11 ಅಭ್ಯರ್ಥಿಗಳು ಪಿಎಸ್ಐ ಆಗಿ ಆಯ್ಕೆಯಾಗಿದ್ದಾರೆ. ಈ 11 ರಲ್ಲಿ ಏಳು ಜನ ಅಕ್ರಮವಾಗಿ ಆಯ್ಕೆಯಾಗಿ ಇದೀಗ ಸಿಐಡಿ ಕೈಗೆ ಲಾಕ್ ಆಗಿದ್ದಾರೆ.

    ಇನ್ನೂ ಅಕ್ರಮದಲ್ಲಿ ಭಾಗಿಯಾದ ನಾಲ್ಕು ಜನರಿಗಾಗಿ ಸಿಐಡಿ ಶೋಧ ಕಾರ್ಯ ನಡೆಸುತ್ತಿದೆ. ನಾಲ್ಕು ಜನರಲ್ಲಿ ಓರ್ವ ಮಹಿಳಾ ಅಭ್ಯರ್ಥಿಯಿಂದಲು ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ. ಆ ಮಹಿಳಾ ಅಭ್ಯರ್ಥಿ ಹೆಸರು ಶಾಂತಾಬಾಯಿ. ಇದೀಗ ಆಕೆಗಾಗಿ ಸಿಐಡಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ. ಅರೆಸ್ಟ್ ವಾರೆಂಟ್ ಜಾರಿ ಮಾಡಿದ ಬೆನ್ನಲ್ಲೇ ಶಾಂತಾಬಾಯಿ ನಾಪತ್ತೆಯಾಗಿದ್ದಾಳೆ. ಕಲಬುರಗಿ ಜಿಲ್ಲಾ ಒಂದನೇ ಹೆಚ್ಚುವರಿ ನ್ಯಾಯಾಲಯದಿಂದ ಅರೆಸ್ಟ್ ವಾರೆಂಟ್ ಜಾರಿಯಾಗಿದೆ. (ದಿಗ್ವಿಜಯ ನ್ಯೂಸ್​)

    ಆನ್​ಲೈನ್​ನಲ್ಲಿ 1.45 ಕೋಟಿ ರೂ. ವ್ಯವಹಾರ ನಡೆಸಿದ್ದ ಸಾಮಾನ್ಯ ಮಹಿಳೆಯ ಸಾವಿನ ರಹಸ್ಯ ಕೊನೆಗೂ ಬಯಲು

    ಬಹುಮಹಡಿ ಕಟ್ಟಡದಿಂದ ಕೆಳಗೆ ಬಿದ್ದು ಉಗಾಂಡ ಮೂಲದ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು

    ಕಾನ್ ಚಿತ್ರೋತ್ಸವಕ್ಕೆ ದೀಪಿಕಾ ಪಡುಕೋಣೆ; ಈ ಬಾರಿ ತೀರ್ಪುಗಾರರ ತಂಡದಲ್ಲಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts