More

    ಈ ಒಂದು ಕಾರಣಕ್ಕೆ ಮದ್ವೆಯಾಗಲು ತುಂಬಾ ಭಯವಂತೆ! ಸಂದರ್ಶನದಲ್ಲಿ ಮನದ ಮಾತು ಬಿಚ್ಚಿಟ್ಟ ನಟ ಸಿಂಬು

    ಚೆನ್ನೈ: ಟಾಲಿವುಡ್​ ಸೂಪರ್​ಸ್ಟಾರ್​ ಸಿಂಬು, ಮಾನಾಡು ಸಿನಿಮಾ ಯಶಸ್ಸಿನ ಬಳಿಕ ತಮ್ಮ ಮುಂದಿನ ಚಿತ್ರ “ವೆಂಧು ಥನಿಂಧಾತು ಕಾದು” ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಇದೇ ಸೆ.15ರಂದು ಸಿನಿಮಾ ಬಿಡುಗಡೆಯಾಗಲಿದ್ದು, ಪ್ರಚಾರದಲ್ಲಿ ಬಿಜಿಯಾಗಿದ್ದಾರೆ.

    ಸಾಕಷ್ಟು ಮಾಧ್ಯಮ ಸಂದರ್ಶನದಲ್ಲಿ ಸಿಂಬು ಭಾಗವಹಿಸುತ್ತಿದ್ದು, ಇತ್ತೀಚೆಗೆ ಅವರು ನೀಡಿದ ಸಂದರ್ಶನ ಒಂದರಲ್ಲಿ ವಯಸ್ಸು 39 ಆದರೂ ಇನ್ನು ಮದುವೆ ಆಗದಿರುವುದಕ್ಕೆ ಕಾರಣ ಏನೆಂಬುದನ್ನು ಬಹಿರಂಗ ಪಡಿಸಿದ್ದಾರೆ.

    ಮದುವೆ ಮುಂದೂಡುತ್ತಿರುವ ಬಗ್ಗೆ ಸಂದರ್ಶನದಲ್ಲಿ ಸಿಂಬು ಅವರಿಗೆ ಪ್ರಶ್ನೆ ಮಾಡಲಾಯಿತು. ಅದಕ್ಕೆ ಉತ್ತರಿಸಿದ ಸಿಂಬು, ಇತ್ತೀಚೆಗೆ ನನ್ನ ಮದುವೆ ಕುರಿತಾಗಿ ಸಾಕಷ್ಟು ಪ್ರಶ್ನೆಗಳು ಬರುತ್ತಿವೆ. ಸಹ ಕಲಾವಿದೆ ಜೊತೆ ಪ್ರೀತಿ ಇದೆ. ಇಬ್ಬರು ಡೇಟಿಂಗ್​ ಮಾಡುತ್ತಿದ್ದಾರೆ ಮತ್ತು ಶೀಘ್ರದಲ್ಲೇ ಮದುವೆ ಆಗಲಿದ್ದಾರೆ ಎಂಬ ವದಂತಿಯು ಹರಡಿದೆ. ನನಗೆ 19 ವರ್ಷ ವಯಸ್ಸಿನಿಂದಲೂ ಈ ಪ್ರಶ್ನೆಯನ್ನು ಕೇಳಲಾಗುತ್ತಿದೆ. ತನ್ನ ಮದುವೆ ಮದುವೆ ಆಗಿ ಜೀವನದಲ್ಲಿ ನೆಲೆಯೂರಲು ಎಲ್ಲ ಪಾಲಕರು ಬಯಸುತ್ತಾರೆ. ಅದೇ ರೀತಿ ನಮ್ಮ ಪಾಲಕರು ಕೂಡ ಬಯಸಿದ್ದಾರೆಂದು ಸಿಂಬು ಹೇಳಿದರು.

    ಮುಂದುವರಿದು ಮಾತನಾಡಿದ ಸಿಂಬು, ನಾನು ಮದುವೆ ವಿಚಾರದಲ್ಲಿ ಸ್ವಲ್ಪ ಭಯಭೀತನಾಗಿದ್ದೇನೆ. ತರಾತುರಿಯಲ್ಲಿ ಮದುವೆಯಾಗಿ ನಂತರ ಭಿನ್ನಾಭಿಪ್ರಾಯ, ಜಗಳ, ವಿಚ್ಛೇದನದಂತಹ ಸಮಸ್ಯೆಗಳು ಎದುರಾಗುವ ಭಯದಿಂದ ಮದುವೆಯನ್ನು ಮುಂದೂಡುತ್ತಿದ್ದೇನೆ. ಒಳ್ಳೆಯ ಸಂಗಾತಿ ಸಿಗುವವರೆಗೂ ನಾನು ಕಾಯಲು ನಿರ್ಧಾರ ಮಾಡಿದ್ದೇನೆ. ಯಾವಾಗ ನನಗೆ ತಕ್ಕ ಸಂಗಾತಿ ಸಿಗುತ್ತಾಳೋ ಆಗ ಮದುವೆ ಆಗುವುದಾಗಿ ಸಿಂಬು ತಿಳಿಸಿದರು.

    ಈ ಹಿಂದೆ ನಟ ಸಿಂಬು ನಯನತಾರಾ ಮತ್ತು ಹನ್ಸಿಕಾ ಮೋಟ್ವಾನಿ ಜೊತೆ ರೊಮ್ಯಾಂಟಿಕ್​ ಸಂಬಂಧವನ್ನು ಹೊಂದಿದ್ದರು. ಅಲ್ಲದೆ, ನಟಿ ತ್ರಿಷಾರನ್ನು ಮದುವೆ ಆಗಲಿದ್ದಾರೆ ಎಂದು ಸುದ್ದಿಯಾಗಿತ್ತು. ಇತ್ತೀಚೆಗೆ ಈಶ್ವರನ್​ ಸಿನಿಮಾದಲ್ಲಿ ತಮ್ಮೊಂದಿಗೆ ನಟಿಸಿದ್ದ ನಿಧಿ ಅಗರ್ವಾಲ್​ ಜೊತೆ ಸಿಂಬು ಡೇಟಿಂಗ್​ ಮಾಡುತ್ತಿದ್ದಾರೆ ಮತ್ತು ಇಬ್ಬರು ಮದುವೆ ಆಗಲಿದ್ದಾರೆ ಎಂಬ ಸುದ್ದಿಯು ಹರಿದಾಡಿತ್ತು. ಇದೀಗ ಎಲ್ಲ ವಂದತಿಗೆ ಸಿಂಬು ಪೂರ್ಣ ವಿರಾಮ ಹಾಕಿದ್ದಾರೆ. (ಏಜೆನ್ಸೀಸ್​)

    ಭ್ರಷ್ಟರ ಬೇಟೆಗಿಳಿದ ಲೋಕಾ: ಕಾರ್ಯಾರಂಭದ ಮೊದಲ ದಿನವೇ ಇಬ್ಬರ ಸೆರೆ; 6 ವರ್ಷದ ಬಳಿಕ ಅಬ್ಬರ

    ರಣವೀರ್​ಗೆ ಕಪಾಳಮೋಕ್ಷ!; ಬೆಂಗಳೂರಿನಲ್ಲಿ ನಡೆದ ಸೈಮಾ ಸಮಾರಂಭದಲ್ಲಿ ಘಟನೆ…

    ಪರಚಿಕೊಳ್ಳುವವರ ಗಾಯಕ್ಕೆ ಇನ್ನಷ್ಟು ಉಪ್ಪು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts