More

    ರಸ್ತೆ ಪಕ್ಕದಲ್ಲಿ ಬಿದ್ದಿದ್ದ ಗೋಣಿ ಚೀಲದ ಗಂಟು ತೆರೆಯುತ್ತಿದ್ದಂತೆ ಬಿಚ್ಚಿಕೊಳ್ತು ನಿಗೂಢ ಪ್ರಕರಣದ ಭಯಾನಕ ಸಂಚು!

    ವಿಜಯವಾಡ: ಮಗಳು ಇದ್ದಕ್ಕಿದ್ದಂತೆ ನಾಪತ್ತೆಯಾದ ಆತಂಕದಲ್ಲಿದ್ದ ಪಾಲಕರು ಇಡೀ ಗ್ರಾಮವನ್ನೆಲ್ಲ ಹುಡುಕುತ್ತಾರೆ. ಆದಾಗ್ಯೂ ಮಗಳು ಮಾತ್ರ ಪತ್ತೆಯಾಗುವುದಿಲ್ಲ. ಇದಾದ ಮಧ್ಯಾಹ್ನ ಸಮಯ ಮೂಟೆ ಕಟ್ಟಿದ ಗೋಣಿ ಚೀಲವೊಂದು ಗ್ರಾಮದ ಹೊರವಲಯದ ಉಪನಗರದ ರಸ್ತೆಯಲ್ಲಿ ಪತ್ತೆಯಾಗುತ್ತದೆ. ಅನುಮಾನಗೊಂಡು ಪೊಲೀಸರಿಗೆ ಮಾಹಿತಿಯನ್ನೂ ನೀಡಲಾಗುತ್ತದೆ. ಸ್ಥಳಕ್ಕೆ ಬಂದ ಪೊಲೀಸರು ಮೂಟೆಯನ್ನು ತೆರೆದಾಗ ಅಕ್ಷರಶಃ ಶಾಕ್​ ಆಗುತ್ತಾರೆ. ಅದರಲ್ಲಿ ನಾಪತ್ತೆಯಾದ ಏಳು ವರ್ಷದ ಹುಡುಗಿಯ ಮೃತದೇಹ ಇರುತ್ತದೆ. ‘

    ಹುಡುಗಿಯನ್ನು ಹತ್ಯೆಗೈದು ಮೂಟೆ ಕಟ್ಟಿ ರಸ್ತೆ ಪಕ್ಕದ ಪೊದೆಗಳ ಮಧ್ಯೆ ಎಸೆಯಲಾಗಿರುತ್ತದೆ. ಪ್ರಕರಣ ದಾಖಲಿಸಿಕೊಳ್ಳುವ ಪೊಲೀಸರು ಆಕೆಯನ್ನು ಕೊಂದಿದ್ದು ಯಾರು ಎಂಬ ತನಿಖೆಗೆ ಇಳಿಯುತ್ತಾರೆ. ಸಣ್ಣ ಗ್ರಾಮದಲ್ಲಿ ವಾಸಿಸುವ ಸಂತ್ರಸ್ತೆಯ ತಂದೆಗೆ ಯಾರು ಶತ್ರುಗಳಿರಬಹುದೆಂದು ಊಹಿಸಲಾಗುತ್ತದೆ. ಆದರೆ, ತಂದೆಯ ಸೋದರಸಂಬಂಧಿಯೇ ಈ ಕೃತ್ಯವನ್ನು ಮಾಡಿರುವುದು ಬೆಳಕಿಗೆ ಬಂದ ಕೂಡಲೇ ಎಲ್ಲರು ದಿಗ್ಭ್ರಾಂತರಾಗುತ್ತಾರೆ. ಕೊಲೆಗಾರ ಸಮೀಪದಲ್ಲೇ ಇರುತ್ತಾನೆ. ಈ ಘಟನೆ ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ.

    ವಿವರಣೆಗೆ ಬರುವುದಾದರೆ, ಖಾಸಿಮ್​ವಾಲಿ ಮತ್ತು ರುಬಿಯಾ ದಂಪತಿ ಪ್ರಕಾಶಂ ಜಿಲ್ಲೆಯ ಗಿಡ್ಡಲೂರು ವಲಯದ ಅಂಬಾವರಮ್​ ಗ್ರಾಮದ ನಿವಾಸಿಗಳು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಓರ್ವ ಗಂಡು ಮಗನಿದ್ದಾನೆ. ಆದರೆ, ಖಾಸಿಂಬಿ (7) ಹೆಸರಿನ ಮಗಳು ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದಳು. ಸಂಜೆ ಮನೆಯ ಹೊರಗಡೆ ಆಟವಾಡುವಾಗ ಖಾಸಿಂಬಿ ಕಾಣೆಯಾಗಿದ್ದಳು. ರಾತ್ರಿಯಾದರೂ ಮಗಳು ಬರದೇ ಇರುವುದನ್ನು ನೋಡಿ ಆಘಾತಗೊಂಡ ಕುಟುಂಬ ಅಂದೇ ಇಡೀ ಗ್ರಾಮವನ್ನೆಲ್ಲ ಹುಡುಕಾಡಿದ್ದಾರೆ. ಆದರೆ, ಪತ್ತೆಯಾಗಲಿಲ್ಲ. ಬಳಿಕ ಪೊಲೀಸ್​ ಠಾಣೆಗೆ ತೆರಳಿ ಕಿಡ್ನ್ಯಾಪ್​ ಪ್ರಕರಣವನ್ನು ಪಾಲಕರು ದಾಖಲಿಸಿ ಮನೆಗೆ ಹಿಂತಿರುಗುತ್ತಾರೆ.

    ಮರುದಿನ ಮಧ್ಯಾಹ್ನ ಗ್ರಾಮದ ಹೊರವಲಯದ ರಸ್ತೆ ಪಕ್ಕದ ಮರ-ಗಿಡಗಳ ನಡುವೆ ಒಂದು ಗೋಣಿ ಚೀಲದ ಮೂಟೆಯನ್ನು ಗ್ರಾಮಸ್ಥರು ನೋಡುತ್ತಾರೆ. ಅನುಮಾನಗೊಂಡು ತಕ್ಷಣ ಪೊಲೀಸರಿಗೆ ಮಾಹಿತಿ ನೀಡುತ್ತಾರೆ. ಸ್ಥಳಕ್ಕೆ ಬಂದ ಪೊಲೀಸರು ಚೀಲವನ್ನು ತೆರೆದು ನೋಡಿದಾಗ ಅದರಲ್ಲಿ ಖಾಸಿಂಬಿ ಮೃತದೇಹ ಇರುತ್ತದೆ. ಅದನ್ನು ನೋಡಿದ ಪಾಲಕರಿಗೆ ಬರಸಿಡಿಲು ಬಡಿದಂತಾಗುತ್ತದೆ. ಆಕೆಯ ಮೈಮೇಲೆ ಸಾಕಷ್ಟು ಗಾಯಗಳಾಗಿರುತ್ತವೆ. ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿರುತ್ತದೆ. ಬಳಿಕ ಪ್ರಕರಣ ದಾಖಲಿಸಿಕೊಳ್ಳುವ ಪೊಲೀಸರು ಕೊಲೆ ಮಾಡಿದ್ದು ಯಾರು? ಖಾಸಿಂಬಿ ಅವರ ತಂದೆಗೆ ಯಾರಾದರೂ ಶತ್ರುಗಳಿದ್ದರಾ? ಎಂಬ ಆಯಾಮದಲ್ಲಿ ತನಿಖೆ ಮಾಡುತ್ತಾರೆ.

    ಆದರೆ, ಕೊಲೆಗಾರ ಮನೆಯ ಎದುರಲ್ಲೇ ಇರುತ್ತಾನೆ. ಅಂದರೆ, ಖಾಸಿಂಬಿಯ ಮಾವ ಸಿದ್ಧಿಯಾ, ಆಕೆಯನ್ನು ಕೊಲೆ ಮಾಡಿರುತ್ತಾನೆ. ಆಟವಾಡುತ್ತಿದ್ದ ಆಕೆಯನ್ನು ತನ್ನ ಮನೆಗೆ ಕೊರೆದೊಯ್ದು ಕ್ರೂರವಾಗಿ ಥಳಿಸಿ ಕೊಂದಿದ್ದಾನೆ. ಬಳಿಕ ಆಕೆಯ ಮೃತದೇಹವನ್ನು ಗೋಣಿ ಚೀಲದಲ್ಲಿ ಹಾಕಿ ಪೊದೆಯೊಂದರ ಬಳಿ ಎಸೆದು ಮನೆಗೆ ಬಂದಿದ್ದಾನೆ. ಇದಾದ ಬಳಿಕ ಮನೆಯಲ್ಲಿ ಖಾಸಿಂಬಿ ಕಾಣಿಸುತ್ತಿಲ್ಲ ಎಂದು ಪಾಲಕರು ಕೂಗಾಡಿದರೂ ತನಗೇನು ಗೊತ್ತಿಲ್ಲ ಎಂಬಂತೆ ನಟಿಸಿದ್ದಾನೆ. ಆದರೆ, ಖಾಸಿಂಬಿಯನ್ನು ಏಕೆ ಕೊಂದನು ಎಂಬುದು ಇನ್ನು ಬೆಳಕಿಗೆ ಬಂದಿಲ್ಲ. ಆದರೆ, ಶಿಶುಹತ್ಯೆ ಪ್ರಕರಣವಂತೂ ಸ್ಥಳೀಯವಾಗಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ. (ಏಜೆನ್ಸೀಸ್​)

    ನಟ ದರ್ಶನ್ ಹೆಸರಲ್ಲಿ ವಂಚನೆಗೆ ಯತ್ನ ಪ್ರಕರಣ: ತಪ್ಪೊಪ್ಪಿಕೊಂಡ ಬಂಧಿತ ಆರೋಪಿ

    ಕೋಟಿ ಉದ್ಯಮ ಸೃಷ್ಟಿ!; ಸ್ಥಳೀಯ ಉದ್ಯಮ-ಸ್ಥಳೀಯ ಉದ್ಯೋಗ ಪರಿಕಲ್ಪನೆಯ ನೀಲಿನಕ್ಷೆ ರೆಡಿ

    ಅಧಿಕೃತ ಶಾಲಾ ಪ್ರಮಾಣ ಪತ್ರಗಳನ್ನು ಕಳೆದು ಹಾಕಿದ ಬ್ಯಾಂಕ್​ಗೆ ತಕ್ಕ ಪಾಠ ಕಲಿಸಿದ ಮಹಿಳೆ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts