More

    ಅಪ್ಪು ಅಗಲಿಕೆ ನೋವಲ್ಲಿಯೂ ಶಿವಣ್ಣ ತೆಗೆದುಕೊಂಡ ನಿರ್ಧಾರ ಮೆಚ್ಚಲೇಬೇಕು!

    ಬೆಂಗಳೂರು: ಭಜರಂಗಿ-2 ಸಿನಿಮಾ ಬಿಡುಗಡೆಯಾದ ದಿನವೇ ನಟ ಪುನೀತ್​ ರಾಜ್​​ಕುಮಾರ್​ ನಿಧನರಾಗಿದ್ದರಿಂದ ಮೊದಲ ದಿನವೇ ಸಿನಿಮಾ ಪ್ರದರ್ಶನ ಅರ್ಧಕ್ಕೆ ರದ್ದಾಗಿತ್ತು. ಆ ಬಳಿಕ ಪ್ರದರ್ಶನ ಮುಂದುವರಿದರೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿರಲಿಲ್ಲ. ಅಪ್ಪು ನೋವಿನಲ್ಲಿದ್ದ ಅಭಿಮಾನಿಗಳು ಸಿನಿಮಾ ವೀಕ್ಷಣೆಯಿಂದ ದೂರ ಉಳಿದಿದ್ದರು.

    ಇದೀಗ ಅಭಿಮಾನಿಗಳನ್ನು ಮತ್ತೆ ಚಿತ್ರಮಂದಿರಕ್ಕೆ ಕರೆತರಲು ಚಿತ್ರತಂಡ ಪ್ಲಾನ್​ ಮಾಡಿದ್ದು, ಅಪ್ಪು ಅಗಲಿಕೆ ನೋವಲ್ಲಿಯೂ ಶಿವರಾಜ್​ಕುಮಾರ್​ ಸಿನಿಮಾಗೆ ಬೆಂಬಲವಾಗಿ ನಿಂತಿದ್ದು, ಅವರ ದೊಡ್ಡತನವನ್ನು ಮೆಚ್ಚಲೇಬೇಕಾಗಿದೆ. ಭಜರಂಗಿ 2 ಚಿತ್ರದ ಮೇಲೆ ಕೇವಲ ನಿರ್ಮಾಪಕರ ಭವಿಷ್ಯ ಮಾತ್ರ ನಿಂತಿಲ್ಲ. ಅನೇಕ ಹೊಸ ಕಲಾವಿದರ ಬದುಕು ನಿರ್ಧಾರವಾಗಲಿದ್ದು, ಅವರ ಬದುಕು ತೆರೆಮರೆಗೆ ಸರಿಯದಿರಲಿ ಎಂಬ ಆಶಯದೊಂದಿಗೆ ಶಿವಣ್ಣ ಚಿತ್ರತಂಡವನ್ನು ಹುರಿದುಂಬಿಸಲು ಮುಂದಾಗಿದ್ದಾರೆ.

    ಈಗ ಸಿನಿಮಾಗೆ ಬೆಂಬಲವಾಗಿ ನಿಂತು ಅಭಿಮಾನಿಗಳ ಜತೆ ಶಿವಣ್ಣ ಸಿನಿಮಾ ವೀಕ್ಷಣೆ ಮಾಡುತ್ತಿದ್ದಾರೆ. ಇಂದು ಮಧ್ಯಾಹ್ನ 1 ಗಂಟೆಗೆ ಗಾಂಧಿ ನಗರದ ಅನುಪಮ‌ ಚಿತ್ರಂಮದಿಕ್ಕೆ ಆಗಮಿಸಿ ಸಿನಿಮಾ ವೀಕ್ಷಣೆ ಮಾಡುತ್ತಿದ್ದಾರೆ. ಇನ್ನು ಥಿಯೇಟರ್ ಮುಂದೆ ಅಭಿಮಾನಿಗಳಿಂದ ಅಪ್ಪುಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಅಲ್ಲದೆ, ಅಭಿಮಾನಿಗಳಿಗೆ ಅನ್ನದಾನವು ನಡೆಯುತ್ತಿದೆ.

    ಭಜರಂಗಿ-2, ಎ. ಹರ್ಷ ನಿರ್ದೇಶನದ ಫ್ಯಾಂಟಸಿ ಎಂಟರ್ ಟೈನರ್ ಸಿನಿಮಾ ಆಗಿದ್ದು, ಅಪ್ಪು ಅಗಲಿಕೆಯ ನೋವು ನುಂಗಿ ಚಿತ್ರತಂಡದ ಬೆಂಬಲಕ್ಕೆ ನಿಂತಿದ್ದಾರೆ. ಶಿವಣ್ಣಗೆ ಚಿತ್ರದ ಇನ್ನಿತರ ಕಲಾವಿದರು ಕೂಡ ಸಾಥ್​ ನೀಡಿದ್ದಾರೆ. ಖಳನಟ ಚೆಲುವರಾಜ್ ಮತ್ತು ನಿರ್ದೇಶಕ ಎ.ಹರ್ಷ ಚಿತ್ರಮಂದಿರಕ್ಕೆ ಆಗಮಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಶಿಕ್ಷಕಿ ಕೊಲೆ​ ಪ್ರಕರಣ: ಹಾಸ್ಟೆಲ್​ನಲ್ಲಿ ನಡೆಯುತ್ತಿತ್ತು​ ಅಸಹ್ಯ, ಶಾಲಾಧ್ಯಕ್ಷನ ಪರ ನಿಂತರಾ ಪೊಲೀಸರು?

    ಮಾಡೆಲ್​ಗಳಿಬ್ಬರ ದುರ್ಮರಣ: ಆಡಿ ಕಾರು, ಹೋಟೆಲ್​ ಮಾಲೀಕ… ಪೊಲೀಸರಿಗೆ ಸಿಕ್ತು ಸ್ಫೋಟಕ ಸುಳಿವು

    ಕಾಂಡೋಮ್​ ಪರೀಕ್ಷಿಸಲು ಉತ್ಸುಕರಾದ ರಾಕುಲ್​: ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ ಫಸ್ಟ್​ಲುಕ್​ ಪೋಸ್ಟರ್​!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts