More

    ಹೊಸ ವರ್ಷದಂದೇ ತಮ್ಮ ಪ್ರೀತಿಗೆ ಎಳ್ಳು ನೀರು ಬಿಟ್ಟ ನಟಿ ದೀಪ್ತಿ ಸುನೈನಾ: ಎಲ್ಲವೂ ಬಿಗ್​ಬಾಸ್​ ಮಹಿಮೆ!

    ಹೈದರಾಬಾದ್​: ಶಾನು ಅಲಿಯಾಸ್​ ಷಣ್ಮುಖ​ ಜಸ್ವಂತ್​ ಹಾಗೂ ದೀಪ್ತಿ ಸುನೈನಾ ತೆಲುಗು ಯೂಟ್ಯೂಬ್​ ಸರ್ಕಲ್​ನಲ್ಲಿ ಫೇಮಸ್ ಆಗಿರುವ ಮುದ್ದಾದ ಜೋಡಿಗಳು. ಇಬ್ಬರು ಪರಸ್ಪರ ಪ್ರೀತಿಸುತ್ತಿರುವುದು ಜಗಜ್ಜಾಹೀರಾಗಿತ್ತು. ಅದನ್ನು ಸ್ವತಃ ಷಣ್ಮುಖ್​ ಹಾಗೂ ದೀಪ್ತಿ ಕೂಡ ಹೇಳಿಕೊಂಡಿದ್ದರು. ಆದರೆ, ಬಿಗ್​ಬಾಸ್​ ಸೀಸನ್​ 5 ಇಬ್ಬರ ಪ್ರೀತಿಗೆ ಹುಳಿ ಹಿಂಡಿದ್ದು, ಇದೀಗ ದೀಪ್ತಿ ತಮ್ಮ ಪ್ರೀತಿಗೆ ಅಧಿಕೃತವಾಗಿ ಬ್ರೇಕಪ್​ ಹೇಳಿದ್ದಾರೆ.

    ಹೊಸ ವರ್ಷದಂದೇ ದೀಪ್ತಿ ತಮ್ಮ ಪ್ರೀತಿಗೆ ಎಳ್ಳು ನೀರು ಬಿಟ್ಟಿದ್ದಾರೆ. ತಮ್ಮ ಇನ್​ಸ್ಟಾಗ್ರಾಂನಲ್ಲಿ ಲವ್​ ಬ್ರೇಕಪ್​ ಬಗ್ಗೆ ದೀಪ್ತಿ ಬರೆದುಕೊಂಡಿದೆ. ಎಲ್ಲ ನನ್ನ ಪ್ರೀತಿಯ ಹಿತೈಷಿಗಳು ಹಾಗೂ ಗೆಳೆಯ/ಗೆಳತಿಯರೇ… ಸಾಕಷ್ಟು ಯೋಚಿಸಿದ ಬಳಿಕ ನಾನೊಂದು ನಿರ್ಧಾರಕ್ಕೆ ಬಂದಿದ್ದೇನೆ. ನಾನು ಮತ್ತು ಶಾನು ಪರಸ್ಪರ ನಿರ್ಧಾರ ಮಾಡಿದ್ದು, ನಮ್ಮಿಬ್ಬರ ವೈಯಕ್ತಿಕ ಜೀವನದಲ್ಲಿ ಬೇರೆ ಬೇರೆಯಾಗಿ ಮುಂದುವರಿಯಲಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ನಮ್ಮ ದಾರಿಯಲ್ಲಿ ನಾವು ಸಾಗಲಿದ್ದೇವೆ. ಈ ಐದು ವರ್ಷಗಳಲ್ಲಿ ಸಾಕಷ್ಟು ಸಮಯ ಸಂತೋಷವಾಗಿ ಕಳೆದಿದ್ದೇವೆ. ಆದರೆ, ನಮ್ಮ ಎದುರಾಳಿಗಳ ವಿರುದ್ಧ ವ್ಯವಹರಿಸುವುದು ಕೂಡ ಕಷ್ಟವಾಗಿದೆ. ಇದಕ್ಕೆಲ್ಲ ಕೊನೆಯಾಡಲು ನಾವಿಬ್ಬರು ನಿರ್ಧರಿಸಿದ್ದು, ಇನ್ಮುಂದೆ ನಮ್ಮಿಬ್ಬರ ನಡುವೆ ಯಾವುದೇ ಸಂಬಂಧವಿರುವುದಿಲ್ಲ ಎಂದಿದ್ದಾರೆ.

    ಪ್ರೇಮಿಗಳ ನಡುವೆ ಏನಾಯಿತು?
    ಶಾನು ಮತ್ತು ದೀಪ್ತಿ ನಡುವೆ ಬ್ರೇಕಪ್ ಆಗಿದೆ ಎಂಬ ವಿಚಾರ ಈ ಹಿಂದೆಯೇ ಬೆಳಕಿಗೆ ಬಂದಿತ್ತು. ಬಿಗ್​ಬಾಸ್​ನಲ್ಲಿ ಶಾನು ಕ್ಯಾಪ್ಟನ್​ ಆದ ನಂತರ ನೆಡೆದ ಎಪಿಸೋಡ್​ನಲ್ಲಿ ಪ್ರತಿಸ್ಪರ್ಧಿ ಸಿರಿ ಅವರು ಶಾನು ಹಣೆಗೆ ಮುತ್ತಿಟ್ಟಿದ್ದರು. ಅಲ್ಲದೆ, ಒಂದು ರಾತ್ರಿ ಇಬ್ಬರು ಮಾತನಾಡುತ್ತಿರುವಾಗ ಸಿರಿ, ಶಾನು ಎದೆಯ ಮೇಲೆ ಮಲಗಿದ್ದರು. ಇದು ತುಂಬಾ ಸಲುಗೆ ಇರುವಂತೆ ತೋರುತ್ತಿತ್ತು. ಇದನ್ನು ನೋಡಿದ ದೀಪ್ತಿ ತುಂಬಾ ಕೋಪಗೊಂಡಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿತ್ತು. ಶಾನು ಮತ್ತು ಸಿರಿ ತುಂಬಾ ಸಲುಗೆಯಿಂದ ಇರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ದೀಪ್ತಿಗೆ ಬೇಸರ ತರಿಸಿದೆ. ಹೀಗಾಗಿ ದೀಪ್ತಿ ತನ್ನ ಇನ್​ಸ್ಟಾಗ್ರಾಂ ಫಾಲೋವರ್ಸ್​ ಲೀಸ್ಟ್​ನಿಂದ ಶಾನು ಅನ್ನು ಅನ್​​ ಫಾಲೋ ಮಾಡಿರುವ ವಿಚಾರವೂ ಬೆಳಕಿಗೆ ಬಂದಿತ್ತು. ಬಿಗ್​ಬಾಸ್​ನಿಂದ ಹೊರಬಂದ ನಂತರವೂ ಶಾನು ಮತ್ತು ದೀಪ್ತಿ ಅಂತರ ಕಾಯ್ದುಕೊಂಡಿದ್ದರು. ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಅನುಮಾನ ಸೃಷ್ಟಿಯಾಗಿತ್ತು. ಇದೀಗ ದೀಪ್ತಿ ಅಧಿಕೃತವಾಗಿ ಲವ್​ ಬ್ರೇಕಪ್​ ಮಾಡಿಕೊಳ್ಳುವ ಮೂಲಕ ಅನುಮಾನವನ್ನು ನಿಜವಾಗಿಸಿದ್ದಾರೆ.

    ಇತ್ತ ಸಿರಿಗೂ ಮೊದಲೇ ಬಾಯ್​ಫ್ರೆಂಡ್​ ಇದ್ದಾನೆ. ಆತನ ಹೆಸರು ಶ್ರೀಹಾನ್​. ಇದೀಗ ಆತ ತನ್ನ ಮೊಬೈಲ್​ನಲ್ಲಿದ್ದ ಸಿರಿ ಫೋಟೋಗಳನ್ನೆಲ್ಲ ಡಿಲೀಟ್​ ಮಾಡಿದ್ದಾನೆಂದು ತಿಳಿದುಬಂದಿದೆ. ಶಾನು ಜತೆಗಿನ ಸಿರಿ ಸಂಬಂಧದಿಂದ ಅಸಮಾಧಾನಗೊಂಡಿರುವ ಶ್ರೀಹಾನ್​ ಆಕೆಯೊಂದಿಗೆ ಮಾತು ಬಿಟ್ಟಿದ್ದಾರೆ. ಅಲ್ಲದೆ, ಆಕೆಯಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂಬ ಸುದ್ದಿಯು ಹರಿದಾಡುತ್ತಿದೆ. ಒಟ್ಟಾರೆ, ಬಿಗ್​ಬಾಸ್​ ಶೋ ಮುಗಿಸಿಕೊಂಡು ಬಂದ ಮೇಲೆ ಇಬ್ಬರ ಪ್ರೀತಿಯಲ್ಲಿ ಬಿರುಗಾಳಿ ಎದ್ದಿದ್ದು, ಒಂದು ಪ್ರೀತಿ ಬ್ರೇಕ್​ ಆಗಿದೆ. (ಏಜೆನ್ಸೀಸ್​)

    ಬಾಲಿವುಡ್‌ ಬಾದ್‌ಷಾನೇ ನನ್ನ ಹೀರೋ: ಬೆಳ್ಳಿತೆರೆಯ ಮೇಲೆ ಮಿಂಚುವ ಆಸೆ ಮಿಸ್‌ ಯೂನಿವರ್ಸ್‌ಗೆ

    ಹೊಸ ವರ್ಷ ಹೀಗಿದೆ ನಿಮ್ಮ ಭವಿಷ್ಯ: ಈ ರಾಶಿಯಲ್ಲಿ ಜನಿಸಿದವರಿಗೆ ಇಡೀ ವರ್ಷ ಒಳ್ಳೆಯದಾಗುತ್ತೆ

    ಕರೊನಾ ಅಬ್ಬರ ಉಲ್ಬಣ: ದೈನಿಕ ಕೇಸ್​ನಲ್ಲಿ ಏರಿಕೆ, ಒಮಿಕ್ರಾನ್ ಪ್ರಕರಣದಲ್ಲೂ ಹೆಚ್ಚಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts