More

    ಸಿನಿಮಾ ಇಂಡಸ್ಟ್ರಿ ಉಳಿಬೇಕು, ಪೈರಸಿ ವಿರುದ್ಧ ಕಾಯ್ದೆಗಳನ್ನು ತರುತ್ತೇವೆ: ಗೃಹ ಸಚಿವ ಆರಗ ಜ್ಞಾನೇಂದ್ರ

    ಬೆಂಗಳೂರು: “ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ” ಎಂಬ ಗಾದೆ ಮಾತು ಸಿನಿಮಾ ರಂಗದಲ್ಲಿ ಪೈರಸಿ ವಿಚಾರಕ್ಕೆ ಬಹಳ ಸೂಕ್ತವಾಗಿದೆ. ಕೋಟಿಗಟ್ಟಲೆ ಹಣ ವ್ಯಯಿಸಿ, ತಿಂಗಳುಗಟ್ಟಲೇ ದೇಶ-ವಿದೇಶ ಅಲೆದು ನಿರ್ಮಾಪಕರು ಸಿನಿಮಾವನ್ನು ನಿರ್ಮಾಣ ಮಾಡುತ್ತಾರೆ. ಆದರೆ, ಕೆಲ ಕಿಡಿಗೇಡಿಗಳು ಕೇವಲ ಒಂದೇ ದಿನದಲ್ಲಿ ಚಿತ್ರವನ್ನು ರೆಕಾರ್ಡ್​ ಮಾಡಿ ಅದರ ಲಿಂಕ್​ ಅನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡುವ ಮೂಲಕ ನಿರ್ಮಾಪಕರ ಜೇಬಿಗೆ ಕತ್ತರಿ ಹಾಕಿಬಿಡುತ್ತಾರೆ.

    ಕೋಟ್ಯಂತರ ರೂಪಾಯಿ ಖರ್ಚು ಮಾಡುವ ನಿರ್ಮಾಪಕ ಪೈರಸಿ ಎಂಬ ಪೆಡಂಭೂತದಿಂದ ಹಣ ಕಳೆದುಕೊಂಡು ಸಂಕಷ್ಟಕ್ಕೆ ಸಿಲುತ್ತಾರೆ. ಹೀಗಾಗಿ ಸರ್ಕಾರ ಚಿತ್ರರಂಗದ ಬೆನ್ನಿಗೆ ನಿಲ್ಲಬೇಕಿದೆ. ಈ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಇಂದು (ಅ.19) ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿ ನೀಡಿದ ಗೃಹಸಚಿವ ಆರಗ ಜ್ಞಾನೇಂದ್ರ ಅವರು ಚಿತ್ರರಂಗದ ಸಮಸ್ಯೆಗಳನ್ನು ಆಲಿಸಿ, ಬಗೆಹರಿಸುವ ಭರವಸೆ ನೀಡಿದ್ದಾರೆ.

    ಗೃಹಸಚಿವರನ್ನು ಸ್ವಾಗತಿಸಿದ ಫಿಲ್ಮ್ ಚೇಂಬರ್ ಅಧ್ಯಕ್ಷ ಜೈರಾಜ್, ಇತ್ತೀಚಿಗೆ ಚಿತ್ರರಂಗದಲ್ಲಿ ಪೈರಸಿ ಅನ್ನೋ ಪಿಡುಗು ಕಾಡ್ತಿದೆ. ಕಾನೂನು ರೀತಿಯಲ್ಲಿ ಯಾವ ಬಗೆ ಕಡಿವಾಣ ಹಾಕಬಹುದು ಎಂದು ಚರ್ಚೆ ನಡೆಸಿದ್ವಿ. ಈ ಬಗ್ಗೆ ಗೃಹಸಚಿವರ ಬಳಿಯೂ ಮನವಿ ಮಾಡಿಕೊಂಡಿದ್ದೇವೆ ಎಂದರು.

    ಸಾರಾ ಗೋವಿಂದು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಿನಿಮಾರಂಗದಲ್ಲಿ ಅನಿರೀಕ್ಷಿತವಾಗಿ ಕೆಲವು ಘಟನೆ ನಡೆದೋಗುತ್ತದೆ. ಈಗಾಗ್ಲೇ ಬಿಡುಗಡೆಯಾಗಿರೋ ಸಲಗ, ಕೋಟಿಗೊಬ್ಬ-3, ಶಾರ್ದೂಲ, ಜೀವ್ನಾನೇ ನಾಟಕ ಸಾಮಿ ಚಿತ್ರಗಳಲೆಲ್ಲವೂ ಪೈರಸಿಯಾಗಿದೆ. ಈ ನಿಟ್ಟಿನಲ್ಲಿ ಕ್ರಮದ ಅವಶ್ಯಕತೆ ಇದೆ ಎಂದು ಹೇಳಿದರು.

    ನಿರ್ಮಾಪಕ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಮಾತನಾಡಿ, ನಮಗೆ ಸರಿಯಾದ ಸಹಕಾರ ಸಿಕ್ತಾ ಇಲ್ಲ. ದೊಡ್ಡ ಚಿತ್ರಗಳು ಅಂತಲ್ಲ ಚಿಕ್ಕ ಚಿತ್ರಗಳು ಪೈರಸಿ ಆಗ್ತಿವೆ. ಕಷ್ಟಪಟ್ಟು, ಸಾಲ ಮಾಡಿ ಸಿನಿಮಾ‌ ಮಾಡ್ತೇವೆ. ಆದ್ರೆ, ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಪೈರಸಿಯಾಗ್ತಾ ಇವೆ. ಹೀಗಾಗಿ ಈ ಪೈರಸಿಯನ್ನ ಮೊದಲು ತಡೆಯಿರಿ ಎಂದು ಮನವಿ ಮಾಡಿದರು.

    ಗೃಹಸಚಿವರಿಂದ ಭರವಸೆ
    ನನ್ನನ್ನು ಅತ್ಯಂತ ಪ್ರೀತಿಯಿಂದ ಫಿಲ್ಮ್​ ಚೇಂಬರ್​ಗೆ ಕರೆಸಿದ್ದಕ್ಕೆ ಧನ್ಯವಾದಗಳು. ಸಿನಿಮಾ ನೋಡಿ ಎಂಜಾಯ್ ಮಾಡಿದ್ದೀವಿ ಹೊರತು, ಸಿನಿಮಾ ಪರದೆ ಹಿಂದಿರುವ ಕಷ್ಟಗಳು ಗೊತ್ತಿರಲಿಲ್ಲ. ಇದೀಗ ಇವೆಲ್ಲವೂ ಗೊತ್ತಾಯಿತು. ಪೋಲೀಸರು ಅನಗತ್ಯವಾಗಿ ಶೂಟಿಂಗ್ ಸ್ಥಳಕ್ಕೆ ಬಂದು ಹಣಕ್ಕೆ ಬೇಡಿಕೆ ಇಟ್ಟರೆ ದೂರು ನೀಡಿ ಎಂದರು.

    ಪೈರಸಿ ಚಿತ್ರರಂಗಕ್ಕೆ ನಿಜವಾದ ದೊಡ್ಡ ಪಿಡುಗು. ಇದರ ಬಗ್ಗೆ ಕಟ್ಟುನಿಟ್ಟಾದ ಕ್ರಮ ಕೈಗೊಳ್ತೀವಿ. ಕೋಟ್ಯಾಂತರ ದುಡ್ಡು ಸುರಿದು ಕೊನೆಗೆ ಪೈರಸಿಯಾಗಿ ನಿರ್ಮಾಪಕರು ಕೈಸುಟ್ಟುಕೊಳ್ತಾರೆ. ಸಿನಿಮಾ ಇಂಡಸ್ಟ್ರಿ ಉಳಿಬೇಕು. ಇದಕ್ಕೆ ಅನೇಕ ಕಾಯ್ದೆಗಳನ್ನು ಬರುವ ದಿನಗಳಲ್ಲಿ ತರುತ್ತೇವೆ. ಸರ್ಕಾರಕ್ಕೆ ದೊಡ್ಡ ಮಟ್ಟದ ತೆರಿಗೆಯನ್ನು ನೀವು ಕೊಡ್ತಿದ್ದೀರಾ, ನಿಮಗೆ ಎಲ್ಲಾ ರೀತಿಯ ರಕ್ಷಣೆ ನೀಡೋಕೆ ನಮ್ಮ ಸರ್ಕಾರ ಸದಾ ಜೊತೆ ಇರುತ್ತದೆ ಎಂದು ಭರವಸೆ ನೀಡಿದರು. (ದಿಗ್ವಿಜಯ ನ್ಯೂಸ್​)

    ಸಖತ್ ವೈರಲ್​ ಆಗ್ತಿರೋ ಮದ್ವೆ ಫೋಟೋ ಹಿನ್ನೆಲೆ ಗೊತ್ತಾ? ಯುವತಿ ಹೇಳಿಕೆ ಕೇಳಿದ್ರೆ ಅಚ್ಚರಿಯಾಗೋದು ಖಂಡಿತ!

    ಸಕಲ ಆರೋಗ್ಯ ಸಮಸ್ಯೆಗಳಿಗೆ ಜೀನಿ ರಾಮಬಾಣ: ಸಿರಿಧಾನ್ಯ ಹೆಲ್ತ್ ಮಿಕ್ಸ್​ನಿಂದ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ಇನ್ಮುಂದೆ ಸಿನಿಮಾ ಪೈರಸಿ ಮಾಡುವವರಿಗೆ ಕಾದಿದೆ ಬಹು ದೊಡ್ಡ ಶಾಕ್​: ಟೆಲಿಗ್ರಾಂ ಮೇಲೆ ಖಾಕಿ ಕಣ್ಣು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts