More

    ಡಿವೋರ್ಸ್​ ಎಫೆಕ್ಟ್​: ಸಮಂತಾರ ಡೇಟ್​ ಬೇಕಾದ್ರೆ ಈ ಷರತ್ತುಗಳಿಗೆ ನಿರ್ಮಾಪಕರು ಓಕೆ ಅನ್ನಲೇಬೇಕು..!

    ಹೈದರಾಬಾದ್​: ಮದುವೆಗೂ ಮುನ್ನ ತುಂಬಾ ಬಿಜಿಯಾಗಿದ್ದ ನಟಿ ಸಮಂತಾ ಮದುವೆ ನಂತರ ಬೆರಳಷ್ಟು ಸಿನಿಮಾಗಳಲ್ಲಿ ಮಾತ್ರ ಅಭಿನಯಿಸಿದರು. ಆದರೂ, ಕಿರತೆರೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಸದ್ದು ಮಾಡಿದರು. ಇದೀಗ ವೈವಾಹಿಕ ಜೀವನದಲ್ಲಿ ಉಂಟಾಗಿರುವ ಮನಸ್ತಾಪಗಳಿಂದ ಸಮಂತಾ ಮತ್ತು ನಾಗಚೈತನ್ಯ ಡಿವೋರ್ಸ್​ ಆಗಿದ್ದು, ಮತ್ತೆ ಪೂರ್ಣ ಪ್ರಮಾಣದಲ್ಲಿ ಬಣ್ಣದ ಲೋಕಕ್ಕೆ ಪ್ರವೇಶ ಪಡೆದಿರುವ ಸಮಂತಾ ಸಿನಿಮಾ ಮಾಡಲು ಒಂದಿಷ್ಟು ಷರತ್ತುಗಳನ್ನು ಹಾಕಿದ್ದಾರೆ. ಅದಕ್ಕೆ ಕಾರಣ ಡಿವೋರ್ಸ್​ ಪರಿಣಾಮವಾಗಿದೆ.

    ದಸರಾ ಸಂದರ್ಭದಲ್ಲೇ ಸಮಂತಾ ಎರಡು ಹೊಸ ಚಿತ್ರಗಳನ್ನು ಘೋಷಣೆ ಮಾಡಿದ್ದಾರೆ. ಈ ಮೂಲಕ ಸಮಂತಾ ಕೈಯಲ್ಲಿ ಇದೀಗ ನಾಲ್ಕು ಚಿತ್ರಗಳಿದ್ದು, ಮತ್ತೆ ಸಿನಿಮಾ ರಂಗದಲ್ಲಿ ತುಂಬಾ ಬಿಜಿಯಾಗಿದ್ದಾರೆ. ಸಾಮಾನ್ಯವಾಗಿ ಸಿನಿಮಾ ಮಾಡುವಾಗ ಸ್ಟಾರ್​ ಹಿರೋ ಮತ್ತು ಹಿರೋಯಿನ್​ಗಳು ಕೆಲವೊಂದಿಷ್ಟು ಷರತ್ತುಗಳನ್ನು ಹಾಕುತ್ತಾರೆ. ಇದೀಗ ತಿಳಿದುಬಂದಿರುವ ವಿಚಾರವೆಂದರೆ ಸಮಂತಾ ಕೂಡ ಒಂದಿಷ್ಟು ಹೊಸ ಷರತ್ತುಗಳನ್ನು ಹಾಕಿದ್ದಾರೆಂದು ಕೇಳಿಬಂದಿದೆ.

    ಹಾಗಾದರೆ ಆ ಷರತ್ತುಗಳು ಏನೆಂದು ನೋಡುವುದಾದರೆ, ತಾನು ನಟಿಸುವ ಚಿತ್ರದ ಶೂಟಿಂಗ್​ ಬಹುತೇಕ ಚೆನ್ನೈನಲ್ಲಿ ನಡೆಯಬೇಕೆಂದು ಹೇಳಿದ್ದಾರೆ. ಅದರಲ್ಲೂ ಸ್ಥಳೀಯ ಹೈದರಾಬಾದ್​ನಲ್ಲಿ ಶೂಟಿಂಗ್​ ಮಾಡುವಂತಿಲ್ಲ. ಒಂದು ವೇಳೆ ಮಾಡಿದರೆ, ಒಳಂಗಾಣ ಶೂಟಿಂಗ್ ಅಥವಾ ಸೆಟ್​ ಒಳಗೆ​ ಮಾತ್ರ ಹೈದರಾಬಾದ್​ನಲ್ಲಿ ನಡೆಯಬೇಕೆಂದು ನಿರ್ಮಾಪಕ ಮತ್ತು ನಿರ್ದೇಶಕರಿಗೆ ಷರತ್ತು ವಿಧಿಸಿದ್ದಾರೆಂದು ತಿಳಿದುಬಂದಿದೆ.

    ಸಮಂತಾರ ಈ ಷರತ್ತಿಗೆ ಕಾರಣವೇನೆಂದರೆ, ಡಿವೋರ್ಸ್​ ಘೋಷಣೆ ಬೆನ್ನಲ್ಲೇ ಸಮಂತಾ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್​ ಆಗಿದ್ದು, ಎಲ್ಲರಿಗೂ ಗೊತ್ತಿರುವ ಸಂಗತಿ. ಟ್ರೋಲ್​ಗಳಿಗೆ ಸಮಂತಾ ಉತ್ತರವನ್ನು ಸಹ ನೀಡಿದ್ದಾರೆ. ಒಂದು ವೇಳೆ ಹೊರಾಂಗಣದಲ್ಲಿ ನಡೆಯುವ ಶೂಟಿಂಗ್​ ವೇಳೆ ಅಲ್ಲಿಗೆ ಬರುವವರು ಕಾಮೆಂಟ್​ ಮಾಡುವ ಸಾಧ್ಯತೆ ಇದೆ ಎಂದು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. (ಏಜೆನ್ಸೀಸ್​)

    ದ್ವಿಭಾಷಾ ಚಿತ್ರದಲ್ಲಿ ಸಮಂತಾ

    ಮುಗಿಯದ ‘ಕೋಟಿಗೊಬ್ಬ’ ವಿವಾದ: ಕೊಲೆ ಬೆದರಿಕೆ ದೂರು ದಾಖಲು- ನಿಖಿಲ್‌ ಕುಮಾರಸ್ವಾಮಿ ಹೇಳಿದ್ದೇನು?

    ತ್ರಿಷಾ ಈಗ ಬೃಂದಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts