More

    ಜೀವಂತ ಅಥವಾ ಶವ! ಪುತಿನ್​ ಜೀವಕ್ಕೆ ರಷ್ಯಾ ಉದ್ಯಮಿ ಆಫರ್​ ಮಾಡಿದ ಮೊತ್ತ ಕೇಳಿದ್ರೆ ದಂದಾಗ್ತೀರಾ!

    ಮಾಸ್ಕೋ: ಯೂಕ್ರೇನ್​ ವಿರುದ್ಧ ಯುದ್ಧ ಸಾರಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್​ ಪುತಿನ್​ ಜೀವಕ್ಕೆ ಬೆಲೆ ಕಟ್ಟಿರುವ ರಷ್ಯಾದ ಉದ್ಯಮಿ ಭಾರೀ ಆಫರ್​ ಒಂದನ್ನು ನೀಡಿದ್ದಾರೆ.

    ಯೂಕ್ರೇನ್​ನಲ್ಲಿ ಸಾಮೂಹಿಕ ಹತ್ಯೆಗೆ ಕಾರಣವಾಗಿರುವ ವ್ಲಾದಿಮಿರ ಪುತಿನ್​ ಅವರು ಜೀವಂತವಾಗಿ ಅಥವಾ ಶವವಾಗಿ ಬೇಕಾಗಿದ್ದಾರೆ. ಈ ಕೆಲಸ ಮಾಡಿಕೊಟ್ಟವರಿಗೆ 1 ಮಿಲಿಯನ್​ ಡಾಲರ್​ ಬಹುಮಾನ ನೀಡಲಾಗುವುದು ಎಂದು ಉದ್ಯಮಿ ಅಲೆಕ್ಸ್​ ಕೊನಾನಿಖಿಮ್​ ಬಹುದೊಡ್ಡ ಆಫರ್ ಅನ್ನು ಲಿಂಕ್​ಡಿನ್​ನಲ್ಲಿ ಪೋಸ್ಟ್​ ಮಾಡಿದ್ದರು. ಸದ್ಯ ಪೋಸ್ಟ್​ ಅನ್ನು ಡಿಲೀಟ್​ ಮಾಡಲಾಗಿದೆ. 1 ಮಿಲಿಯನ್​ ಡಾಲರ್​ ಅಂದರೆ ಭಾರತೀಯ ಕರೆನ್ಸಿ ಪ್ರಕಾರ ಬರೋಬ್ಬರಿ 7,59,30,000 ರೂಪಾಯಿ ಆಗುತ್ತದೆ.

    ಪುತಿನ್ ಅವರನ್ನು ರಷ್ಯಾದ ಮತ್ತು ಅಂತಾರಾಷ್ಟ್ರೀಯ ಕಾನೂನುಗಳ ಅಡಿಯಲ್ಲಿ ಯುದ್ಧ ಅಪರಾಧಿ ಎಂದು ಬಂಧಿಸಿ, ಸಾಂವಿಧಾನಿಕ ಕರ್ತವ್ಯವನ್ನು ಅನುಸರಿಸುವ ಅಧಿಕಾರಿ(ಗಳಿಗೆ) 1,000,000 ಡಾಲರ್​ ಪಾವತಿಸುವ ಭರವಸೆವನ್ನು ನಾನು ನೀಡುತ್ತೇನೆ ಎಂದು ಉದ್ಯಮಿ ಅಲೆಕ್ಸ್​ ಪೋಸ್ಟ್​ ಮಾಡಿದ್ದರು.

    ಪುತಿನ್ ರಷ್ಯಾದ ಅಧ್ಯಕ್ಷರಲ್ಲ. ಬದಲಾಗಿ ಅವರು ರಷ್ಯಾದಲ್ಲಿ ಅಪಾರ್ಟ್ಮೆಂಟ್ ಕಟ್ಟಡಗಳನ್ನು ಸ್ಫೋಟಿಸುವ ವಿಶೇಷ ಕಾರ್ಯಾಚರಣೆಯ ಪರಿಣಾಮವಾಗಿ ಅಧಿಕಾರಕ್ಕೆ ಬಂದರು. ನಂತರ ಮುಕ್ತ ಚುನಾವಣೆಗಳನ್ನು ತೆಗೆದುಹಾಕುವ ಮೂಲಕ ಮತ್ತು ಅವರ ವಿರೋಧಿಗಳನ್ನು ಕೊಲ್ಲುವ ಮೂಲಕ ರಷ್ಯಾದ ಸಂವಿಧಾನವನ್ನು ಉಲ್ಲಂಘಿಸಿದ್ದಾರೆ ಎಂದು ಉದ್ಯಮಿ ಅಲೆಕ್ಸ್​ ಗಂಭೀರ ಆರೋಪ ಮಾಡಿದ್ದಾರೆ.

    ಅಂದಹಾಗೆ ಉದ್ಯಮಿ ಅಲೆಕ್ಸ್​ ಓರ್ವ ಮಾಜಿ ಬ್ಯಾಂಕರ್​ ಮತ್ತು ಪ್ರಸ್ತುತ ಅಮೆರಿಕ ಕ್ಯಾಲಿಫೋರ್ನಿಯಾದ ಸ್ಯಾನ್​ಫ್ರಾನ್ಸಿಸ್ಕೋದಲ್ಲಿರುವ ಟ್ರಾನ್ಸ್​ಪರೆಂಟ್​ ಬಿಸಿನೆಸ್​ ಹೆಸರಿನ ಸಾಫ್ಟ್​ವೇರ್​ ಕಂಪನಿಯ ಸಿಇಒ. ಇದೀಗ ತನ್ನ ಹೇಳಿಕೆಯನ್ನು ನಿರಾಕರಿಸಿರುವ ಉದ್ಯಮಿ, ನಾನು ಯಾವುದೇ ಆಫರ್​ ನೀಡಿಲ್ಲ ಎಂದಿದ್ದಾರೆ.

    ಪುತಿನ್ ಅವರ ಹತ್ಯೆಗೆ ನಾನು ಹಣ ಪಾವತಿಸುವ ಭರವಸೆ ನೀಡಿದ್ದೇನೆ ಎಂದು ಕೆಲವು ವರದಿಗಳು ಪ್ರಕಟವಾಗಿದೆ. ಆದರೆ, ಇದು ಸುಳ್ಳು. ಅಂತಹ ಸುಳ್ಳು ಸುದ್ದಿಗಳು ಪ್ರಪಂಚದಾದ್ಯಂತದ ಲಕ್ಷಾಂತರ ಜನರಿಂದ ಹುರಿದುಂಬಿಸಲ್ಪಟ್ಟಿದ್ದರೂ, ಪುತಿನ್ ಅವರನ್ನು ನ್ಯಾಯದ ಅಂಗಳಕ್ಕೆ ತರಬೇಕೆಂದು ನಾನು ನಂಬುತ್ತೇನೆ ಎಂದು ಅಲೆಕ್ಸ್​ ಬುಧವಾರ ತಮ್ಮ ಫೇಸ್‌ಬುಕ್​ ಪೋಸ್ಟ್‌ನಲ್ಲಿ ಬರೆದಿದ್ದಾರೆ.

    ಪುತಿನ್​ ತಲೆಗೆ ಆಫರ್​ ನೀಡಿದ್ದ ಲಿಂಕ್​ಡಿನ್​ ರೀತಿಯ ಪೋಸ್ಟ್​ ಅನ್ನು ಫೇಸ್​ಬುಕ್​ನಲ್ಲಿಯು ಸಹ ಅಲೆಕ್ಸ್​ ಮಾಡಿದ್ದರು. ಆದರೆ, ಅವರ ಫೇಸ್​ಬುಕ್​ ಪೋಸ್ಟ್​ ಅನ್ನು ಬ್ಲಾಕ್​ ಮಾಡಿದ್ದು, ಇದೀಗ ಹೊಸ ಫೇಸ್​ಬುಕ್​ ಪೋಸ್ಟ್​ನಲ್ಲಿ ಅದು ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದ್ದಾರೆ.

    ಯುದ್ಧದ ಬಗ್ಗೆ ಮಾತನಾಡಿರುವ ಉದ್ಯಮಿ ಅಲೆಕ್ಸ್​, ಯೂಕ್ರೇನ್‌ನಲ್ಲಿ ರಷ್ಯಾ ಮಾಡುತ್ತಿರುವ ದಾಳಿ ಮತ್ತು ಯುದ್ಧದಂತಹ ಅಪರಾಧಗಳಿಂದ ನಾನು ದಿಗ್ಭ್ರಮೆಗೊಂಡಿದ್ದೇನೆ ಮತ್ತು ಆಕ್ರೋಶಗೊಂಡಿದ್ದೇನೆ. ಪುತಿನ್ ತಮ್ಮ ಸೋಲನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದರಿಂದ ತನ್ನ ಶಕ್ತಿಯನ್ನು ಕಳೆದುಕೊಳ್ಳುವ ಅಪಾಯವನ್ನು ಅವರು ಎದುರಿಸುತ್ತಿದ್ದಾರೆ ಮತ್ತು ಇದೇ ಅವರ ಬಂಧನಕ್ಕೂ ಕಾರಣವಾಗುತ್ತದೆ. ಪುತಿನ್​ ಅವರು ಚುನಾಯಿತ ನಾಯಕನಿಗೆ ಯಾವುದೇ ನ್ಯಾಯಸಮ್ಮತತೆಯನ್ನು ಹೊಂದಿಲ್ಲ. ಏಕೆಂದರೆ ಅವರು ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳು, ಸುದ್ದಿ ಮಾಧ್ಯಮ ಮತ್ತು ತಮ್ಮ ವಿರೋಧಿಗಳನ್ನು ಬಹಳ ಹಿಂದೆಯೇ ತೆಗೆದುಹಾಕಿದ್ದಾರೆ. ಆದ್ದರಿಂದ ಅವರ ಅಧಿಕಾರವು ತನ್ನ ಅಧೀನ ಅಧಿಕಾರಿಗಳಲ್ಲಿ ಹುಟ್ಟಿಸುವ ಭಯದ ಮೇಲೆ ಮಾತ್ರ ನಿಂತಿದೆ ಎಂದು ಅಲೆಕ್ಸ್​ ಮಾಧ್ಯಮಕ್ಕೆ ತಿಳಿಸಿದ್ದಾರೆ. ಪುತಿನ್​ ಅವರು ಬದಲಾಯಿಸಲಾಗದ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಅವರನ್ನು ಬಂಧಿಸಬೇಕು. ಇಲ್ಲವಾದಲ್ಲಿ ಅನೇಕ ಜನರ ತಮ್ಮ ಜೀವನವನ್ನು ಕಳೆದುಕೊಳ್ಳಬಹುದು ಎಂದು ಅಲೆಕ್ಸ್​ ಹೇಳಿದರು. (ಏಜೆನ್ಸೀಸ್​)

    ನಾಯಕನೊಬ್ಬನ ಮುಖವಾಡ ಕಳಚಿದ ಇಶಾ ಕೊಪ್ಪಿಕರ್:​ ಕಹಿ ಘಟನೆ ಮೆಲಕು ಹಾಕಿದ ಓ ನನ್ನ ನಲ್ಲೆ

    ಉತ್ತರ ಕನ್ನಡದ ದಾಂಡೇಲಿಯಲ್ಲಿ ಸೈಕಲ್​ ಅಪಘಾತದಲ್ಲಿ ಯುವ ವೈದ್ಯೆ ದುರಂತ ಸಾವು

    ಇಂದಿನಿಂದ ಶ್ರೀಲಂಕಾ ವಿರುದ್ಧ ಕಾದಾಟ; ಕೊಹ್ಲಿಗೆ 100ನೇ, ಕ್ಯಾಪ್ಟನ್ ರೋಹಿತ್‌ಗೆ 1ನೇ ಟೆಸ್ಟ್ ಸವಾಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts