More

    ಮಾನವನ ದೇಹಗಳೇ ಆವಿಯಾಗುತ್ತಿದೆ… ಯೂಕ್ರೇನ್​ ವಿರುದ್ಧ ರಷ್ಯಾ ಇಂಥಾ ಕೀಳುಮಟ್ಟಕ್ಕೆ ಇಳಿಯಿತಾ!?

    ಕಿಯೇವ್​: ಯೂಕ್ರೇನ್​ ಮತ್ತು ರಷ್ಯಾ ನಡುವಿನ ಕದನ ಕಾರ್ಮೋಡ ಇನ್ನು ತಿಳಿಯಾಗಿಲ್ಲ. ಅನಿಶ್ಚಿತತೆ ಮುಂದುವರಿದಿದ್ದು, ಯೂಕ್ರೇನ್​ನಲ್ಲಿ ಆರ್ಥನಾದ ಮುಂದುವರಿದಿದೆ. ಯುದ್ಧವನ್ನು ಮುಂದುವರಿಸಿರುವ ರಷ್ಯಾ ಯೂಕ್ರೇನಿಯರನ್ನರ ಮೇಲೆ ನಿಷೇಧಿತ ವ್ಯಾಕ್ಯೂಮ್​ ಬಾಂಬ್​ ಮತ್ತು ಕ್ಲಸ್ಟರ್​ ಬಾಂಬ್​ಗಳನ್ನು ಬಳಸುತ್ತಿದೆ ಎಂದು ಯೂಕ್ರೇನ್​ ಅಧಿಕಾರಿಗಳು ಗಂಭೀರ ಆರೋಪ ಮಾಡಿದ್ದಾರೆ.

    ರಷ್ಯಾ ಅಧ್ಯಕ್ಷ ವ್ಲಾದಿಮಿರ್​ ಪುತಿನ್​ ಯುದ್ಧ ಘೋಷಣೆ ಮಾಡಿದಾಗಿನಿಂದ ಯೂಕ್ರೇನ್​ನಲ್ಲಿ ರಕ್ತಚರಿತ್ರೆ ಮುಂದುವರಿದಿದೆ. ವಿಶ್ವದ ಅತ್ಯಂತ ಶಕ್ತಿಶಾಲಿ ಪರಮಾಣ ರಹಿತ ಬಾಂಬ್​ ಆಗಿರುವ ವ್ಯಾಕ್ಯೂಮ್​ ಬಾಂಬ್​ ಅಥವಾ ಥರ್ಮೋಬಾರಿಕ್ ಬಾಂಬ್​ ಅನ್ನು ರಷ್ಯಾ ಬಳಸುತ್ತಿದ್ದು, ಯೂಕ್ರೇನ್​ನ ನಾಗರಿಕರ ಮೇಲೆ ದಾಳಿ ಮಾಡುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಯೂಕ್ರೇನಿಯನ್ ಗಡಿಯ ಬಳಿ ರಷ್ಯಾದ ಥರ್ಮೋಬಾರಿಕ್ ಮಲ್ಟಿಪಲ್ ರಾಕೆಟ್ ಲಾಂಚರ್ ಅನ್ನು ಗುರುತಿಸಿದ ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ.

    ಥರ್ಮೋಬಾರಿಕ್ ಬಾಂಬ್​ ಅನ್ನು ಸಾಮಾನ್ಯವಾಗಿ ‘ಎಲ್ಲಾ ಬಾಂಬ್‌ಗಳ ತಂದೆ’ ಎಂದು ಪರಿಗಣಿಸಲಾಗುತ್ತದೆ. ಇದು ಹೆಚ್ಚಿನ-ತಾಪಮಾನದ ಸ್ಫೋಟವನ್ನು ಉಂಟುಮಾಡಲು ಸುತ್ತಮುತ್ತಲಿನ ಗಾಳಿಯಿಂದ ಆಮ್ಲಜನಕವನ್ನು ಹೀರಿಕೊಳ್ಳುತ್ತದೆ. ಸ್ಫೋಟಕದಿಂದ ರಚಿಸಲ್ಪಟ್ಟ ಮತ್ತು ಮಾನವ ದೇಹಗಳನ್ನೇ ಆವಿಯಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ, ದೀರ್ಘಾವಧಿಯ ಬ್ಲಾಸ್ಟ್ ತರಂಗವನ್ನು ಇದು ಉಂಟುಮಾಡಲಿದೆ.

    ಇನ್ನು ಈ ಆರೋಪದ ಬಗ್ಗೆ ಈವರೆಗೂ ರಷ್ಯಾ ಪ್ರತಿಕ್ರಿಯೆ ನೀಡಿಲ್ಲ. ಯುನೈಟೆಡ್​ ಸ್ಟೇಟ್ಸ್​ನ ಯೂಕ್ರೇನ್​ ರಾಯಭಾರಿ ಒಕ್ಸಾನಾ ಮರ್ಕರೊವಾ ಕೂಡ ರಷ್ಯಾ ವ್ಯಾಕ್ಯೂಮ್​ ಬಾಂಬ್​ ಬಳಕೆಯ ಬಗ್ಗೆ ಹೇಳಿಕೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಅಮ್ನೆಸ್ಟಿ ಇಂಟರ್ನ್ಯಾಷನಲ್ ಆ್ಯಂಡ್​ ಹ್ಯೂಮನ್​ ರೈಟ್ಸ್​, ರಷ್ಯಾ ಪಡೆಗಳು ನಿಷೇಧಿತ ಕ್ಲಸ್ಟರ್​​ ಯುದ್ಧ ಸಾಮಾಗ್ರಿಗಳನ್ನು ಬಳಸುತ್ತಿರುವುದನ್ನು ನೋಡಿದೆ. ಈಶಾನ್ಯ ಯೂಕ್ರೇನ್‌ನಲ್ಲಿ ನಾಗರಿಕರು ಆಶ್ರಯ ಪಡೆದಿರುವಾಗ ದಾಳಿ ಮಾಡಲಾಗಿದೆ ಎಂದು ಅಮ್ನೆಸ್ಟಿ ಆರೋಪ ಮಾಡಿದೆ.

    ಇನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ರಷ್ಯಾ ವಿರುದ್ಧ ಗಂಭೀರ ಆರೋಪ ಮಾಡಿರುವ ಯೂಕ್ರೇನ್​, ದೇಶದ ಕಿಂಡರ್​ಗಾರ್ಡನ್​, ಅನಾಥಾಶ್ರಮಗಳು, ಆಸ್ಪತ್ರೆಗಳು, ಸಂಚಾರಿ ವೈದ್ಯಕೀಯ ನೆರವು ದಳಗಳು ಮತ್ತು ಆಂಬ್ಯುಲೆನ್ಸ್​ಗಳನ್ನು ಗುರಿಯಾಗಿರಿಸಿಕೊಂಡು ಶೆಲ್​​ ದಾಳಿಗಳನ್ನು ನಡೆಸಲಾಗುತ್ತಿದೆ. ಇದು ನಾಗರಿಕರನ್ನು ಕೊಲ್ಲಲು ನಿರ್ಧರಿಸಿದ ರಷ್ಯಾದ ಕ್ರಮವಾಗಿದೆ ಎಂದು ಆರೋಪಿಸಿದ್ದಾರೆ. (ಏಜೆನ್ಸೀಸ್​)

    ಅದೃಷ್ಟದ ಬೆನ್ನಲ್ಲೇ ಕಚ್ಚಾ ಬಾದಾಮ್​ ಗಾಯಕನಿಗೆ ದುರಾದೃಷ್ಟ: ಕಾರು ಖರೀದಿಸಿದವನಿಗೆ ಕಾದಿತ್ತು ಶಾಕ್!​​​

    ಮೀನುಗಾರರ ಬಲೆಗೆ ಬಿದ್ದ 800 ಕೆಜಿ ತೂಕದ ಈ ದೈತ್ಯ ಮೀನಿನ ಬೆಲೆ ಕೇಳಿದ್ರೆ ನಿಜಕ್ಕೂ ದಂಗಾಗ್ತೀರಾ!

    ಎತ್ತಿನಗಾಡಿಯ ರೀತಿ ತಡವಾಗಿ ಚಾಲನೆ ಹಾಗೂ ಬೇಗ ಟ್ರಿಪ್ ಮುಗಿಸಿದ ಚಾಲಕರಿಗೆ BMTC ಮಾಡಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts