More

    ತಾಯ್ನಾಡನ್ನು ಉಳಿಸಿಕೊಳ್ಳಲು ರಷ್ಯಾ ವಿರುದ್ಧ ಗನ್​ ಹಿಡಿದು ಯುದ್ಧಭೂಮಿಗೆ ಇಳಿದ ಯೂಕ್ರೇನ್​ ಸಂಸದೆ

    ಕಿಯೆವ್​/ಮಾಸ್ಕೋ: ರಷ್ಯಾ ಮತ್ತು ಯೂಕ್ರೇನ್​ ನಡುವಿನ ಯುದ್ಧ ಮೂರನೇ ದಿನವು ಮುಂದುವರಿದಿದೆ. ಈಗಾಗಲೇ ರಷ್ಯಾ ಪಡೆಗಳು ಅನೇಕ ನಗರಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದು, ಇಡೀ ಯೂಕ್ರೇನ್​ ಅನ್ನು ಆಕ್ರಮಿಸಿಕೊಳ್ಳುವತ್ತ ಮುನ್ನುಗುತ್ತಿದೆ. ರಷ್ಯಾ ವಿರುದ್ಧ ಯೂಕ್ರೇನ್​ ಯೋಧರು ತೊಡೆ ತಟ್ಟಿ ನಿಂತಿದ್ದರೂ ರಷ್ಯಾ ಸೈನಿಕರ ಸಂಖ್ಯೆಗಿಂತ ಯೂಕ್ರೇನ್ ಸೈನಿಕರ ಸಂಖ್ಯೆ ಕಡಿಮೆ ಇರುವುದರಿಂದ ತಮ್ಮ ದೇಶವನ್ನು ಉಳಿಸಿಕೊಳ್ಳಲು ಅಲ್ಲಿನ ನಾಗರಿಕರು ಕೂಡ ಸಾಥ್​ ನೀಡಿದ್ದು, ಗನ್​ ಹಿಡಿದು ರಣಾಂಗಕ್ಕೆ ಇಳಿದಿದ್ದಾರೆ.

    ಯೂಕ್ರೇನ್​ನ ಸಂಸದೆ ಹಾಗೂ ಅಮೇಜಾನ್​ ಒಡೆತನದ ರಿಂಗ್​ ಯೂಕ್ರೇನ್​ ಕಂಪನಿಯ ಮಾಜಿ ಸಿಇಒ ಕೈರಾ ರುಡಿಕ್​ ಕೂಡ ಗನ್​ ಹಿಡಿದು ಯುದ್ಧಭೂಮಿಗೆ ಇಳಿದಿದ್ದಾರೆ. ಗನ್​ ಹಿಡಿದಿರುವ ಫೋಟೋವನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿರುವ ಕೈರಾ, ಮಹಿಳೆಯು ಕೂಡ ತಮ್ಮ ತಾಯ್ನಾಡನ್ನು ಉಳಿಸಿಕೊಳ್ಳುತ್ತಾರೆ ಎಂದಿದ್ದಾರೆ.

    ಸಾಮಾನ್ಯಾ ಜನರು ಮಾತ್ರವಲ್ಲದೆ, ಹಿರಿಯ ನಾಗರಿಕರು, ಅಥ್ಲೆಟಿಗಳು ಕೂಡ ತಾಯ್ನಾಡನ್ನು ರಷ್ಯಾದಿಂದ ಉಳಿಸಿಕೊಳ್ಳಲು ಹೋರಾಟಕ್ಕೆ ಇಳಿದಿದ್ದಾರೆ. ಮಹಿಳೆಯರು ಕೂಡ ಯೂಕ್ರೇನ್​ ಸೇನೆಗೆ ಸಾಥ್​ ನೀಡಿದ್ದಾರೆ. ಯೂಕ್ರೇನ್​ ಮಾಜಿ ಅಧ್ಯಕ್ಷ ಪಿಟ್ರೋ ಪೊರೊಶೆಂಕೋ ಕೂಡ ಈಗಾಗಲೇ ಗನ್​ ಹಿಡಿದು ಯುದ್ಧಕ್ಕೆ ಇಳಿದಿದ್ದಾರೆ. ಜನರಿಗೆ ಸ್ಫೂರ್ತಿ ತುಂಬಲು ಹಾಲಿ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್ಸ್ಕಿ ಸೇನಾ ಸಮವಸ್ತ್ರವನ್ನು ಧರಿಸಿದ್ದಾರೆ.

    ಇದೀಗ ಸಂಸದೆ ಕೈರಾ ಅವರ ಪೋಸ್ಟ್​ಗೆ ಟ್ವಿಟರ್​ನಲ್ಲಿ ಉತ್ತಮ ಪ್ರತಿಕ್ರಿಯೆಗಳು ಬರುತ್ತಿವೆ. ಅವರ ಧೈರ್ಯಕ್ಕೆ ಎಲ್ಲರು ಮೆಚ್ಚು ವ್ಯಕ್ತಪಡಿಸಿದ್ದಾರೆ. ಗನ್​ ಬಳಸುವಾಗ ಒಂದೂ ಗುಂಡು ವ್ಯರ್ಥವಾಗದಂತೆ ಹುಷಾರಾಗಿ ಬಳಸುವಂತೆ ಸಲಹೆ ನೀಡಿದ್ದಾರೆ. ಸಾಕಷ್ಟು ಯೂಕ್ರೇನಿಯನ್ನರು ಹೋರಾಟಕ್ಕಾಗಿ ಬೀದಿಗೆ ಇಳಿದಿರುವುದನ್ನು ನೋಡಿ ಸ್ಪೂರ್ತಿಗೊಂಡು ಅನೇಕರು ರಣಾಂಗಣಕ್ಕೆ ಇಳಿಯುತ್ತಿದ್ದು, ರಷ್ಯಾದಿಂದ ತಮ್ಮ ದೇಶವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

    ರಷ್ಯಾ ದಾಳಿಗೆ ಈಗಾಗಲೇ ಯೂಕ್ರೇನ್​ ನಲುಗಿ ಹೋಗಿದೆ. ನೂರಾರು ಜನರ ಪ್ರಾಣ ಹೋಗಿದ್ದು, ಸಾಕಷ್ಟು ಆಸ್ತಿ-ಪಾಸ್ತಿ ನಷ್ಟವಾಗಿದೆ. ಶಸ್ತ್ರಾಸ್ತ್ರ ತ್ಯಜಿಸಿ ಸಂಧಾನಕ್ಕೆ ಬರುವುದಾದರೆ ಮಾತುಕತೆಗೆ ಸಿದ್ಧ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುತಿನ್​ ಹೇಳಿದ್ದಾರೆ. ಇತ್ತ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ರಷ್ಯಾ ವಿರುದ್ಧ ಮಂಡಿಸಿರುವ ಕರಡು ನಿರ್ಣಯಕ್ಕೆ 11 ರಾಷ್ಟ್ರಗಳು ಬೆಂಬಲ ಸೂಚಿಸಿದ್ದು, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಈ ವಿಚಾರ ಚರ್ಚೆಯಾಗಲಿದೆ. ಸದ್ಯ ಯುದ್ಧ ಮುಂದುವರಿದಿರುವುದುರಿಂದ ಇನ್ನಷ್ಟು ಹಾನಿಗಳು ಸಂಭವಿಸುವ ಸಾಧ್ಯತೆ ಇದೆ. (ಏಜೆನ್ಸೀಸ್​)

    2016ರಲ್ಲಿ ರದ್ದಾದ ನೋಟನ್ನು ಬದಲಾಯಿಸಲು ಇವರಿಗೆ ಈಗ ಹೈಕೋರ್ಟ್​ ನೀಡಿತು ಅನುಮತಿ…

    ನೀತಾ ಅಂಬಾನಿ ಯಾವ ಉಡುಗೆ ತೊಡಬೇಕೆಂದು ನಿರ್ಧರಿಸುವುದು ಇವರೇ ನೋಡಿ…

    ಅಕ್ರಮ ಸಂಬಂಧ ಮುಂದುವರಿಸಲು ಪತಿಯ ವಿರುದ್ಧ ಸಂಚು ರೂಪಸಿದ ಪತ್ನಿಗೆ ಮರುಕ್ಷಣದಲ್ಲೇ ಬಿಗ್​ ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts